ಲಖನೌ: 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.
26 ವರ್ಷದ ಭಾರತೀಯ ಶಟ್ಲರ್ ಭಾರತದವರೇ ಆದ ತಾನ್ಯ ಹೇಮಂತ್ ಅವರನ್ನು ಬುಧವಾರ ಬಾಬಯ ಬನಾರಸಿ ದಾಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 21-9, 21-9ರ ನೇರ ಗೇಮ್ಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಮಾಜಿ ವಿಶ್ವ ಚಾಂಪಿಯನ್ ಸಿಂಧು ಕಳೆದ ವಾರ ಇಂಡಿಯಾ ಓಪನ್ ಸೂಪರ್ 500 ಟೂರ್ನಮೆಂಟ್ನ ಸೆಮಿಫೈನಲ್ಸ್ನಲ್ಲಿ ಥಾಯ್ಲೆಂಡ್ ಆಟಗಾರ್ತಿ ವಿರುದ್ಧ ಸೋಲು ಕಂಡು ಹೊರಬಿದ್ದಿದ್ದರು.
ಸಿಂಧು ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಲಾರೆನ್ ಲ್ಯಾಮ್ ವಿರುದ್ಧ ಸೆಣಸಾಡಲಿದ್ದಾರೆ. ಲಾರೆನ್ ಭಾರತದ ಇರಾ ಶರ್ಮಾ ವಿರುದ್ಧ 15-21, 21-16, 21-16ರ ಅಂತರದಲ್ಲಿ ಸೋಲಿಸಿದ್ದರು.
ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಸಮಿಯಾ ಇಮಾ್ ಫರೂಕಿ ಶೃತಿ ಮುಂಡಾದ ವಿರುದ್ಧ 17-21, 21-11, 21-10ರಲ್ಲಿ, ಸಾಯಿ ಉತ್ತೇಜಿತ ರಾವ್ ಚುಕ್ಕ ಅಂಜನಾ ಕುಮಾರಿ ವಿರುದ್ಧ 21-9, 21-12ರಲ್ಲಿ ಗೆಲುವು ಸಾಧಿಸಿದರು,
ಪುರುಷರ ವಿಭಾಗದಲ್ಲಿ ಕೌಶಾಲ್ ಧರ್ಮಾಮರ್, ಚಿರಾಗ್ ಸೇನ್, ಮಿಥುನ್ ಮಂಜುನಾಥ್ ಮತ್ತು ರಘು ಮರಿಸ್ವಾಮಿ ತಮ್ಮ ಮೊಲದ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ:ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಶೂಟರ್ ಅವನಿ ಲೇಖರಾಗೆ ಮಹೀಂದ್ರ ಕಾರು ಗಿಫ್ಟ್!