ETV Bharat / sports

ಸೈಯದ್​ ಮೋದಿ ಇಂಟರ್​ನ್ಯಾಷನಲ್ : ಫೈನಲ್​ಗೆ ಮಾಳವಿಕ, ನಾಕೌಟ್​ನಲ್ಲಿ ಮಿಥುನ್​ಗೆ ನಿರಾಶೆ

20 ವರ್ಷದ ನಾಗ್ಪುರದ ಮಾಳವಿಕ ಬನ್ಸೋಡ್​ ಫೈನಲ್​ನಲ್ಲಿ 2 ಬಾರಿಯ ಒಲಿಂಪಿಕ್ ಪದಕ ವಿಜೇತ ಹಾಗೂ ಮಾಜಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಅಥವಾ ರಷ್ಯಾದ ಇವ್ಗೇನಿಯಾ ಕೊಸ್ಟೆತ್ಸ್ಕಾಯಾ ವಿರುದ್ಧ ಸೆಣಸಾಡಲಿದ್ದಾರೆ..

syed modi international
ಮಾಳವಿಕ ಬನ್ಸೋಡ್​ ಫೈನಲ್
author img

By

Published : Jan 22, 2022, 5:30 PM IST

ನವದೆಹಲಿ : ಭಾರತದ ಮಾಳವಿಕ ಬನ್ಸೋಡ್​ ಸೈಯದ್​ ಮೋದಿ ಇಂಟರ್​ನ್ಯಾಷನಲ್ ಸೆಮಿಫೈನಲ್ಸ್​ನಲ್ಲಿ 16 ವರ್ಷದ ಭಾರತದವರೇ ಆದ ಅನುಪಮ ಉಪಾಧ್ಯಾಯ ವಿರುದ್ಧ ರೋಚಕ ಹೋರಾಟದಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಭಾರತೀಯ ಯುವ ಶಟ್ಲರ್​ಗಳ ನಡುವೆ ರೋಚಕವಾಗಿದ್ದ ಈ ಪಂದ್ಯದಲ್ಲಿ ಮಾಳವಿಕ 19-21, 21-19,21-7 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲೆರಡು ಗೇಮ್​​ಗಳಲ್ಲಿ ಅತ್ಯುತ್ತಮವಾಗಿ ಆಡಿದ 3ನೇ ಗೇಮ್​ ವೇಳೆಗೆ ದಣಿದು ಮಾಳವಿಕಗೆ ಸುಲಭವಾಗಿ ಮಣಿದರು.

20 ವರ್ಷದ ನಾಗ್ಪುರದ ಮಾಳವಿಕ ಬನ್ಸೋಡ್​ ಫೈನಲ್​ನಲ್ಲಿ 2 ಬಾರಿಯ ಒಲಿಂಪಿಕ್ ಪದಕ ವಿಜೇತ ಹಾಗೂ ಮಾಜಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಅಥವಾ ರಷ್ಯಾದ ಇವ್ಗೇನಿಯಾ ಕೊಸ್ಟೆತ್ಸ್ಕಾಯಾ ವಿರುದ್ಧ ಸೆಣಸಾಡಲಿದ್ದಾರೆ.

ಸೆಮಿಫೈನಲ್​ನಲ್ಲಿ ಮಿಥುನ್​ಗೆ ನಿರಾಶೆ : ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಏಕೈಕ ಭರವಸೆಯಾಗಿದ್ದ ಭಾರತದ ಮಿಥುನ್ ಮಂಜುನಾಥ್​ ಸೆಮಿಫೈನಲ್ಸ್​ನಲ್ಲಿ ಫ್ರಾನ್ಸ್​ನ ಅರ್ನಾಡ್ ಮರ್ಕಲ್ ವಿರುದ್ಧ 3 ಸೆಟ್​ಗಳ ರೋಚಕ ಪಂದ್ಯದಲ್ಲಿ ಸೋಲು ಕಂಡರು. 19-21, 21-17, 9-21ರಲ್ಲಿ ಸೋಲು ಕಂಡರು.

ಇದನ್ನೂ ಓದಿ: PKL 8 : ಪುಣೇರಿ ಪಲ್ಟನ್​ ವಿರುದ್ಧ ಗೆಲುವಿನ ಹಳಿಗೆ ಮರಳಲು ಬುಲ್ಸ್​ ಕಾತರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.