ETV Bharat / sports

ಕಾಮನ್‌ವೆಲ್ತ್‌ ಗೇಮ್ಸ್‌ 2022: ಸ್ಕ್ವಾಷ್‌ ಆಟಗಾರ್ತಿ ಅನಾಹತಾ ಸಿಂಗ್​ಗೆ​ ಚೊಚ್ಚಲ ಗೆಲುವು - ಅನಾಹತಾ ಸಿಂಗ್‌ ಗೆಲುವು

ಸ್ಕ್ವಾಷ್‌ ಆಟಗಾರ್ತಿ ಅನಾಹತಾ ಸಿಂಗ್‌ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಗೆಲುವು ಕಂಡಿದ್ದಾರೆ.

squash player Anahat Singh  won in Commonwealth Games 2022
ಸ್ಕ್ವಾಷ್‌ ಆಟಗಾರ್ತಿ ಅನಾಹತಾ ಸಿಂಗ್​
author img

By

Published : Jul 30, 2022, 2:12 PM IST

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ 2022ರಲ್ಲಿ ಭಾರತದ ಅತ್ಯಂತ ಕಿರಿಯ ಅಥ್ಲೀಟ್‌ 14 ವರ್ಷದ ಸ್ಕ್ವಾಷ್‌ ಆಟಗಾರ್ತಿ ಅನಾಹತಾ ಸಿಂಗ್‌ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಗೆಲುವಿನ ಚೊಚ್ಚಲ ಸಾಧನೆ ಮಾಡಿದರು.

ಕೊನೆಯ ಏಕಪಕ್ಷೀಯ ಪಂದ್ಯದಲ್ಲಿ ಅನಾಹತಾ ಸಿಂಗ್‌ 11-5, 11-2, 11-0 ಸೆಟ್‌ಗಳಿಂದ ಗ್ರೆನಡೈನ್ಸ್‌ನ ಸೇಂಟ್ ವಿನ್ಸೆಂಟ್ ಮತ್ತು ಜಡಾ ರಾಸ್ ಅವರನ್ನು ಸೋಲಿಸಿದರು. ಅನಾಹತಾ ಸಿಂಗ್ ಅಂಡರ್-15 ಮಟ್ಟದಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ಭಾರತ ತಂಡಕ್ಕೆ ಆಯ್ಕೆಯಾದರು. ಅವರು ಈ ವರ್ಷ ಏಷ್ಯನ್ ಜೂನಿಯರ್ ಸ್ಕ್ವಾಷ್ ಮತ್ತು ಜರ್ಮನ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ.

14 ವರ್ಷದ ಅನಾಹತಾ ಸಿಂಗ್‌ ಅವರು ಮೊದಲ ಬಾರಿಗೆ ಹಿರಿಯ ಮಟ್ಟದಲ್ಲಿ ಆಡುತ್ತಿದ್ದಾರೆ. ಈ ಹಿಂದೆ ಜೂನಿಯರ್‌ ಮಟ್ಟದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಈ ಗೆಲುವಿನೊಂದಿಗೆ ಅನಾಹತಾ ಸಿಂಗ್‌ ಅವರು ಸ್ಕ್ವಾಷ್ ಮಹಿಳಾ ಸಿಂಗಲ್ಸ್ ಈವೆಂಟ್‌ನ ಅಗ್ರ 32 ಸ್ಥಾನದೊಳಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಚೆಸ್​ ಒಲಂಪಿಯಾಡ್​: ಭಾರತ ತಂಡಗಳ ಶುಭಾರಂಭ.. ಕೊನೇರು ಹಂಪಿಗೆ ಅತಿಹೆಚ್ಚು ಅಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.