ನವದೆಹಲಿ: ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್‌ಎಸ್‌ಎಫ್) ಮಾನ್ಯತೆ ನೀಡುವ ಕುರಿತು ಸುಪ್ರೀಂ ಕೋರ್ಟ್ ಮುಂದಾಗಿರುವುದನ್ನು ಕ್ರೀಡಾ ಸಚಿವಾಲಯ ಸ್ವಾಗತಿಸಿದೆ. ಒಂದು ವಾರದ ಅವಧಿಯಲ್ಲಿ ಈ ಪ್ರಕ್ರಿಯೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು.
ಕ್ರೀಡಾ ಸಚಿವಾಲಯ ಮತ್ತು ಭಾರತ ಒಲಿಂಪಿಕ್ಸ್ ಸಂಸ್ಥೆಗಳು(ಐಒಎ) ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡಲು ದೆಹಲಿ ನ್ಯಾಯಾಲಯದ ಅನುಮೋದನೆ ಕಡ್ಡಾಯವಲ್ಲಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಗಮನಕ್ಕೆ ತರದೆ ಅಥವಾ ಅನುಮತಿ ಪಡೆಯದೆ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡುವಂತಿಲ್ಲ ಹೈ ಕೋರ್ಟ್ ಆದೇಶದ ವಿರುದ್ಧ ಕ್ರೀಡಾ ಸಚಚಿವಾಲಯದ ಮೇಲ್ಮನಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಕ್ರೀಡಾ ಸಚಿವಾಲಯ ಮತ್ತು ಭಾರತ ಒಲಿಂಪಿಕ್ ಸಂಸ್ಥೆಯ ಪರವಾಗಿ ತೀರ್ಪು ನೀಡಿದೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕ್ರೀಡಾ ಸಚಿವಾಲಯವು ಈಗ ಎನ್ಎಸ್ಎಫ್ಗಳಿಗೆ ಮಾನ್ಯತೆಗಳನ್ನು ನೀಡಬಹುದು. ಇದರಿಂದ ನಮ್ಮ ಒಲಿಂಪಿಕ್-ಬೌಂಡ್ ಕ್ರೀಡಾಪಟುಗಳ ಸಿದ್ಧತೆಗಳಿಗೆ ಅದು ಸಹಾಯ ಮಾಡುತ್ತದೆ" ಎಂದು ಸಚಿವಾಲಯದ ಮೂಲವು ಸುದ್ದಿ ಸಂಸ್ಥೆಗೆ ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ, ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಾವು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು ಮುಂದಿನ ವಾರದ ಒಳಗೆ ಇದರ ರೂಪುರೇಷೆ ಸಿದ್ಧಪಡಿಸಲಿದ್ದೇವೆ' ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಕ್ರೀಡಾ ನೀತಿಗೆ ಬದ್ಧವಾಗಿ ನಡೆದುಕೊಳ್ಳದ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳಿಗೆ ಮಾನ್ಯತೆ ನೀಡುವುದನ್ನು ತಡೆಯಲು ಕ್ರೀಡಾ ಸಚಿವಾಲಯ ಮತ್ತು ಐಒಎಗೆ ಮಾರ್ಗದರ್ಶನ ನೀಡುವಂತೆ ರಾಹುಲ್ ಮೆಹ್ರಾ 2010ರಲ್ಲಿ ಸಾರ್ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪರಿಣಾಮ ದೆಹಲಿ ಹೈಕೋರ್ಟ್ ಎನ್ಎಸ್ಎಫ್ ಮಾನ್ಯತೆಗೆ ತಡೆಯೊಡ್ಡಿತ್ತು.