ನವದೆಹಲಿ: ರಷ್ಯಾದಲ್ಲಿ ಈ ತಿಂಗಳ ಆರಂಭದಲ್ಲಿ ಕೊನೆಗೊಂಡ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮಂಗಳವಾರ ಗೌರವಿಸಿತು. ಸ್ಪರ್ಧೆಯಲ್ಲಿ ಒಟ್ಟು 17 ಪದಕಗಳನ್ನು ಪಡೆದ ಭಾರತೀಯ ಬಾಲಕಿಯರನ್ನು ಎಸ್‌ಎಐನ ಉಪ ಮಹಾನಿರ್ದೇಶಕರಾದ ಏಕ್ತಾ ವಿಷ್ಣೋಯ್ ಮತ್ತು ಶಿವ ಶರ್ಮಾ ಅವರು ಸನ್ಮಾನಿಸಿದರು.
ಒಂದು ವರ್ಷ ಭಾರತದಲ್ಲಿ ನಡೆದ ಖೇಲೋ ಇಂಡಿಯಾ ಮಹಿಳಾ ಲೀಗ್‌ಗಳಲ್ಲಿ ಭಾಗವಹಿಸಿದ ಬಾಲಕಿಯರು, ಜೂನಿಯರ್ ಬಾಲಕಿಯರು, ಸಬ್ ಜೂನಿಯರ್ ಬಾಲಕಿಯರು ಮತ್ತು ಹಿರಿಯ ಬಾಲಕಿಯರ ವಿಭಾಗಗಳ ತಂಡ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನ ಸಂಡಾ ಫೈಟ್ ಮತ್ತು ತಾವೊಲುನಲ್ಲಿ 10 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಟ್ವೀಟ್ ಮಾಡಿದರು. "ನಮ್ಮ ಹುಡುಗಿಯರು ನಮ್ಮನ್ನು ಹೆಮ್ಮೆ ಪಡುವಂತೆ ಮಾಡುವುದು ಮತ್ತು ರಾಷ್ಟ್ರವು ಖೇಲೋ ಇಂಡಿಯಾ ಮಹಿಳಾ ಲೀಗ್‌ನ ಲಾಭವನ್ನು ಪಡೆಯುವುದನ್ನು ನೋಡುವುದು ಹೆಮ್ಮೆಯ ವಿಷಯವಾಗಿದೆ! ಖೇಲೋ ಇಂಡಿಯಾ ಲೀಗ್‌ನಲ್ಲಿ ಭಾಗವಹಿಸಿದರವರು ಈಗ ರಷ್ಯಾದಲ್ಲಿ ನಡೆದ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನಲ್ಲಿ 17 ಪದಕ ಗೆದ್ದಿದ್ದಾರೆ" ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಅಭಿನಂದನೆ ಸಂದೇಶದೊಂದಿಗೆ ರಿಟ್ವೀಟ್ ಮಾಡಿದ್ದಾರೆ.
-
Congratulations to our athletes. https://t.co/zczIdasMS6
— Narendra Modi (@narendramodi) May 8, 2023 " class="align-text-top noRightClick twitterSection" data="
">Congratulations to our athletes. https://t.co/zczIdasMS6
— Narendra Modi (@narendramodi) May 8, 2023Congratulations to our athletes. https://t.co/zczIdasMS6
— Narendra Modi (@narendramodi) May 8, 2023
ಚೀನಾ ಮತ್ತು ಇಂಡೋನೇಷ್ಯಾದ ಸ್ಪರ್ಧಿ ವುಶುವಿನಲ್ಲಿ ಈ ಹಿಂದೆ ಹೆಚ್ಚು ಪದಕ ವಿಜೇತರಾಗಿದ್ದು, ಅಲ್ಲಿ ಭಾರತೀಯ ಯುವತಿಯರು ತಮ್ಮ ಬಲವಾದ ಹೆಜ್ಜೆಯನ್ನು ಊರಿದ್ದಾರೆ. ಮಾಸ್ಕೋ ಸ್ಪರ್ಧೆಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (Sports Authority of India - SAI) ಮತ್ತು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆಂನ್ಸ್ (National Centre of Excellence - NCOE) ಅಡಿಯಲ್ಲಿ ಸರ್ಕಾರದ ವೆಚ್ಚದಲ್ಲಿ ಕ್ರೀಡಾಪಟುಗಳನ್ನು ಕರೆದುಕೊಂಡು ಹೋಗಲಾಗಿತ್ತು.
ವುಶು ಅಥ್ಲೀಟ್ ಮತ್ತು 2018ರ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ವುಶು ತಂಡದ ತರಬೇತುದಾರರೂ ಆಗಿರುವ ಪೂಜಾ ಕಡಿಯನ್ ಮಾತನಾಡಿ, "ಹಿಂದಿನ ವರ್ಷಗಳಲ್ಲಿ ಮಾಸ್ಕೋ ಸ್ಟಾರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ವುಶು ಕ್ರೀಡಾಪಟುಗಳು ತಲಾ 1.5 ಲಕ್ಷ ರೂ. ಪಾವತಿಸಬೇಕಾಗಿತ್ತು. ಈ ಬಾರಿ ಸರ್ಕಾರವು ಪ್ರವಾಸವನ್ನು ಪ್ರಾಯೋಜಿಸಿದ್ದರಿಂದ ಇದು ಉಚಿತವಾಗಿದೆ. ನಾವು ಈ ಹುಡುಗಿಯರಿಂದ ನಮ್ಮ ಏಷ್ಯನ್ ಗೇಮ್ಸ್ ಸಂಭವನೀಯ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಖೇಲೋ ಇಂಡಿಯಾ ಯೋಜನೆಯು ಮಹಿಳೆಯರನ್ನು ಉನ್ನತೀಕರಿಸಲು ಸಹಾಯವಾಗಿದೆ. ಹೆಚ್ಚಿನ ಹುಡುಗಿಯರು ಭಾಗವಹಿಸಲು ಮತ್ತು ಅತ್ಯುನ್ನತ ಹಂತದಲ್ಲಿ ಪ್ರದರ್ಶನ ನೀಡಲು ಖೇಲೋ ಇಂಡಿಯಾ ವೇದಿಕೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡುತ್ತೇನೆ" ಎಂದರು
ಇದನ್ನೂ ಓದಿ: ಪಾಕ್ ಪ್ರವಾಸ ಒಲ್ಲೆ ಎಂದ ಭಾರತಕ್ಕೆ ಇತರ ರಾಷ್ಟ್ರಗಳ ಬೆಂಬಲ: ಪಾಕಿಸ್ತಾನದ ಕೈ ತಪ್ಪಿದ ಏಷ್ಯಾಕಪ್ಗೆ ಲಂಕಾ ಆಥಿತ್ಯ ?