ETV Bharat / sports

ಇಂಡಿಯಾ ಓಪನ್​: ದ್ವಿತೀಯ ಸುತ್ತು ಪ್ರವೇಶಿಸಿದ ಸೈನಾ, ಲಕ್ಷ್ಯ, ಪ್ರಣಯ್

ಗಾಯದ ಕಾರಣ ಹಲವಾರು ಟೂರ್ನಿಗಳನ್ನು ಕಳೆದುಕೊಂಡಿದ್ದ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸೈನಾ ಎದುರಾಳಿ ಆಟಗಾರ್ತಿ ಜೆಕ್​ ಗಣರಾಜ್ಯದ ತೆರೆಸಾ ಸ್ವಾಬಿಕೋವಾ ಗಾಯಗೊಂಡು ನಿವೃತ್ತಿಯಾದ ಕಾರಣ ನಿರಾಯಾಸವಾಗಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಇದಕ್ಕೂ ಮುನ್ನ ಅವರು 22-20ರ ರೋಚಕ ಕದನದಲ್ಲಿ ಜೆಕ್​ ಶಟ್ಲರ್​ಗೆ ಸೋಲುಣಿಸಿದ್ದರು.

India Open
ಇಂಡಿಯಾ ಓಪನ್ 2021
author img

By

Published : Jan 12, 2022, 7:34 PM IST

ನವದೆಹಲಿ: ಮಾಜಿ ಚಾಂಪಿಯನ್​ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್​ಶಿಪ್​ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಹಾಗೂ ಹೆಚ್​.​ಎಸ್.ಪ್ರಣಯ್​ ಬುಧವಾರ ಇಂಡಿಯಾ ಓಪನ್​​ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

ಗಾಯದ ಕಾರಣ ಹಲವು ಟೂರ್ನಿಗಳನ್ನು ಮಿಸ್​ ಮಾಡಿಕೊಂಡಿದ್ದ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ಎದುರಾಳಿ ಆಟಗಾರ್ತಿ ಜೆಕ್‌​ ಗಣರಾಜ್ಯದ ತೆರೆಸಾ ಸ್ವಾಬಿಕೋವಾ ಗಾಯಗೊಂಡು ನಿವೃತ್ತಿಯಾದ ಕಾರಣ ನಿರಾಯಾಸವಾಗಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಇದಕ್ಕೂ ಮುನ್ನ ಅವರು 22-20ರ ರೋಚಕ ಕದನದಲ್ಲಿ ಜೆಕ್​ ಶಟ್ಲರ್​ಗೆ ಸೋಲುಣಿಸಿದ್ದರು.

ಸೈನಾ 2ನೇ ಸುತ್ತಿನಲ್ಲಿ ತಮ್ಮ ಸಹ ಶಟ್ಲರ್​ ಸಮಿಯಾ ಇಮದ್​ ಫಾರೂಕಿ ಅವರಿಗೆ 21-18, 21-9ರಲ್ಲಿ ಸೋಲುಣಿಸಿರುವ ಭಾರತದವರೇ ಆದ ಮಾಳವಿಕಾ ಬನ್ಸೂದ್​ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅಮೋಘ ಪ್ರದರ್ಶನ ತೋರಿ ಕ್ವಾರ್ಟರ್‌ಫೈನಲ್ ತಲುಪಿದ್ದ ಹೆಚ್​.ಎಸ್.​ ಪ್ರಣಯ್ 21-14, 21-7ರಲ್ಲಿ ಸ್ಪೇನ್​ನ ಪಬ್ಲೊ ಏಬಿಯನ್​ ವಿರುದ್ಧ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಫ್ರಾನ್ಸ್​ನ ಅರ್ನಾಡ್​ ಮರ್ಕಲ್ ವಿರುದ್ಧ 21-16, 15-21, 21-10ರ ಕಠಿಣ ಹೋರಾಟ ನಡೆಸಿ ಗೆದ್ದಿರುವ ಭಾರತದ ಮಿಥುನ್ ಮಂಜುನಾಥ್​ ವಿರುದ್ಧ ಸೆಣಸಾಡಲಿದ್ದಾರೆ.

ಭಾರತದ ಭರವಸೆಯ ಶಟ್ಲರ್​ 21 ವರ್ಷದ ಲಕ್ಷ್ಯ ಸೇನ್​ ತಮ್ಮ ಅಮೋಘ ಆಟ ಮುಂದುವರಿಸಿದ್ದು, ಅವರು ಈಜಿಪ್ಟ್​​ನ ಅದಮ್ ಹಾತೆಂ ಎಲ್ಗಮಾಲ್ ವಿರುದ್ಧ 21-15, 21-7ರಲ್ಲಿ ಸುಲಭ ಜಯ ಸಾಧಿಸಿದರು. ಇವರು ಸ್ವೀಡನ್​ನ ಫೆಲಿಕ್ಸ್​ ಬರೆಸ್ಟೆಡ್ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯವನ್ನಾಡಲಿದ್ದಾರೆ.

ಕಾಮನ್​ವೆಲ್ತ್​ ಬೆಳ್ಳಿ ಪದಕ ವಿಜೇತ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ 21-14,21-10ರಿಂದ ಭಾರತದ ಚಿರಾಗ್ ಅರೋರಾ ಮತ್ತು ರವಿ ವಿರುದ್ಧ ಗೆಲುವು ಸಾಧಿಸಿ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಿದ್ದಾರೆ.

ಈಗಾಗಲೇ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಈಗಾಗಲೇ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ಇದನ್ನೂ ಓದಿ:ನಟ ಸಿದ್ಧಾರ್ಥ್ ಕ್ಷಮೆ ಕೇಳಿದ್ದರಿಂದ ಸಂತಸವಾಗಿದೆ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.