ಬೆಂಗಳೂರು: ನಾಯಕ ಸುನಿಲ್ ಚೆಟ್ರಿ ಕಾಲ್ಚಳಕ ಮತ್ತು ಮಹೇಶ್ ಸಿಂಗ್ ಬಾರಿಸಿದ ಗೋಲಿನಿಂದಾಗಿ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ 14ನೇ ಬಾರಿಗೆ ಸೆಮಿಫೈನಲ್ ತಲುಪಿತು. ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳಿಂದ ಭಾರತ ಗೆಲುವು ಸಾಧಿಸಿತು. 2 ಪಂದ್ಯಗಳನ್ನು ಸೋಲುವ ಮೂಲಕ ಕಳೆದ ಬಾರಿಯ ಫೈನಲಿಸ್ಟ್ ನೇಪಾಳ ಸೆಮೀಸ್ ರೇಸ್ನಿಂದ ಹೊರಬಿತ್ತು.
-
Indian juggernaut rolls on 😤💪🏽🔥 Nepal tamed 2-0
— Indian Football Team (@IndianFootball) June 24, 2023 " class="align-text-top noRightClick twitterSection" data="
Read more 👉🏽 https://t.co/LoNkBj7EgZ#SAFFChampionship2023 🏆 #NEPIND ⚔️ #IndianFootball ⚽️ #BlueTigers 🐯 pic.twitter.com/dGHRrSNioq
">Indian juggernaut rolls on 😤💪🏽🔥 Nepal tamed 2-0
— Indian Football Team (@IndianFootball) June 24, 2023
Read more 👉🏽 https://t.co/LoNkBj7EgZ#SAFFChampionship2023 🏆 #NEPIND ⚔️ #IndianFootball ⚽️ #BlueTigers 🐯 pic.twitter.com/dGHRrSNioqIndian juggernaut rolls on 😤💪🏽🔥 Nepal tamed 2-0
— Indian Football Team (@IndianFootball) June 24, 2023
Read more 👉🏽 https://t.co/LoNkBj7EgZ#SAFFChampionship2023 🏆 #NEPIND ⚔️ #IndianFootball ⚽️ #BlueTigers 🐯 pic.twitter.com/dGHRrSNioq
2 ಗೆಲುವುಗಳ ಮೂಲಕ ಭಾರತ ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಇಷ್ಟೇ ಅಂಕ ಹೊಂದಿರುವ ಕುವೈತ್ ಅಗ್ರಸ್ಥಾನದಲ್ಲಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 8 ಆಟಗಾರರನ್ನು ಬದಲಾವಣೆ ಮಾಡಲಾಗಿತ್ತು. ಈ ಹಿಂದಿನ ಪಂದ್ಯದ ಹೀರೋಗಳಾದ ಸುನೀಲ್ ಛೆಟ್ರಿ, ಅನಿರುದ್ಧ್ ಥಾಪಾ ಮತ್ತು ಸಹಲ್ ಅಬ್ದುಲ್ ಸಮದ್ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು.
ಆಟದ ಮೊದಲಾರ್ಧದಲ್ಲಿ ನೇಪಾಳ ಕಟು ಹೋರಾಟ ಪ್ರದರ್ಶಿಸಿತು. ಇದರಿಂದ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಭಾರತ ಹಲವು ಗೋಲು ಬಾರಿಸಲು ಯತ್ನಿಸಿ ವಿಫಲವಾಯಿತು. ಇದರಿಂದ ಮೊದಲಾರ್ಧ ಗೋಲುರಹಿತವಾಗಿ ಕೊನೆಗೊಂಡಿತು.
ವಿರಾಮದ ನಂತರ ಭಾರತ ಆಟಕ್ಕೆ ವೇಗ ನೀಡಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ಆಟಗಾರರು ಪ್ರತಿ ಬಾರಿಯೂ ಚೆಂಡನ್ನು ಗೋಲಿನತ್ತ ತೆಗೆದುಕೊಂಡು ಹೋದರು. ಇದರ ಫಲವಾಗಿ 61ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಚೆಂಡನ್ನು ಯಶಸ್ವಿಯಾಗಿ ಗೋಲು ಪೆಟ್ಟಿಗೆ ಸೇರಿಸಿದರು. ಇದು ಅವರ ಅಂತಾರಾಷ್ಟ್ರೀಯ ಪಂದ್ಯದ 91ನೇ ಗೋಲಾಗಿದೆ. 1-0 ಮುನ್ನಡೆ ಪಡೆದ ಭಾರತ ಮತ್ತಷ್ಟು ವೇಗದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿತು.
ಇದಾದ 9 ನಿಮಿಷದಲ್ಲಿ (70ನೇ ನಿಮಿಷ) ಸಹಲ್ ಸಮದ್ ನೀಡಿದ ಪಾಸ್ ಅನ್ನು ನಿಖರವಾಗಿ ಗುರುತಿಸಿದ ಮಹೇಶ್ ಸಿಂಗ್ ಗೋಲು ಬಾರಿಸಿದರು. ಇದರೊಂದಿಗೆ 2-0 ಯಿಂದ ತಂಡ ಗೆಲುವನ್ನ ಖಾತ್ರಿಪಡಿಸಿಕೊಂಡಿತು. ನಿಗದಿತ ಅವಧಿ ಮುಗಿಯುವುದರೊಳಗೆ ಇತ್ತಂಡಗಳು ಹಲವು ಯತ್ನ ನಡೆಸಿದಾಗ್ಯೂ ಯಾರಿಗೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
-
2️⃣ goals in quick succession 🤩 India are through to the #SAFFChampionship2023 Semifinal 👏🏽💙#NEPIND ⚔️ #IndianFootball ⚽️ #BlueTigers 🐯 pic.twitter.com/ByzfjsKSZY
— Indian Football Team (@IndianFootball) June 24, 2023 " class="align-text-top noRightClick twitterSection" data="
">2️⃣ goals in quick succession 🤩 India are through to the #SAFFChampionship2023 Semifinal 👏🏽💙#NEPIND ⚔️ #IndianFootball ⚽️ #BlueTigers 🐯 pic.twitter.com/ByzfjsKSZY
— Indian Football Team (@IndianFootball) June 24, 20232️⃣ goals in quick succession 🤩 India are through to the #SAFFChampionship2023 Semifinal 👏🏽💙#NEPIND ⚔️ #IndianFootball ⚽️ #BlueTigers 🐯 pic.twitter.com/ByzfjsKSZY
— Indian Football Team (@IndianFootball) June 24, 2023
ಪಾಕ್ಗಿಂತ ನೇಪಾಳ ಬೆಸ್ಟ್: ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಭಾರತದೆದುರು 4-0 ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಸುನೀಲ್ ಛೆಟ್ರಿ ಹ್ಯಾಟ್ರಿಕ್, ಉದಾಂತ್ ಸಿಂಗ್ ಒಂದು ಗೋಲು ಬಾರಿಸಿ ಪಾಕ್ ತಂಡವನ್ನು ಸದೆಬಡಿದಿದ್ದರು. ನಿನ್ನೆ ನಡೆದ ಪಂದ್ಯದಲ್ಲಿ ನೇಪಾಳ ಭಾರತಕ್ಕೆ ಅಷ್ಟು ಸುಲಭ ತುತ್ತಾಗಲಿಲ್ಲ. ಕಠಿಣ ಸ್ಪರ್ಧೆ ಒಡ್ಡಿದ ತಂಡ ಮೊದಲಾರ್ಧದಲ್ಲಿ ಒಂದೂ ಗೋಲು ಬಿಟ್ಟುಕೊಡಲಿಲ್ಲ.
ಪಾಕ್ ಪಂದ್ಯದ ವೇಳೆ ತಮಾಷೆಗಾಗಿ ಚೆಂಡನ್ನು ದೂಡಿ ಗಲಾಟೆಗೆ ಕಾರಣವಾಗಿದ್ದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಅವರನ್ನು ಪಂದ್ಯದಿಂದ ಅಮಾನತು ಮಾಡಲಾಗಿತ್ತು. ಇದರಿಂದ ಸಹಾಯಕ ಕೋಚ್ ಮಹೇಶ್ ಗಾವ್ಲಿ ತಂಡಕ್ಕೆ ನೆರವು ನೀಡಿದರು.
ಪಾಕ್ ಔಟ್, ಕುವೈತ್ ಇನ್: ಭಾರತದ ವಿರುದ್ಧ 0-4 ರಲ್ಲಿ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಕುವೈತ್ ವಿರುದ್ಧವೂ 0-4 ರಲ್ಲಿ ಪರಾಜಯಗೊಳ್ಳುವ ಮೂಲಕ ಸೆಮೀಸ್ ರೇಸ್ನಿಂದ ಹೊರಬಿತ್ತು. ಎ ಗುಂಪಿನ ಅಗ್ರಸ್ಥಾನಕ್ಕಾಗಿ ಭಾರತ ಮತ್ತು ಕುವೈತ್ ಮುಂದಿನ ಪಂದ್ಯದಲ್ಲಿ ಸೆಣಸಾಡಲಿವೆ.
ಇದನ್ನೂ ಓದಿ: SAFF Championship: ನಾಯಕ ಚೆಟ್ರಿ ಹ್ಯಾಟ್ರಿಕ್ ಗೋಲು; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ