ಲಂಡನ್: 22 ಗ್ರ್ಯಾಂಡ್ ಸ್ಲಾಮ್ಗಳ ಒಡೆಯ ಸ್ಪೇನ್ನ ರಾಫೆಲ್ ನಡಾಲ್ ಹೊಟ್ಟೆನೋವಿನ ನಡುವೆಯೇ ಅಮೆರಿಕದ ಟೈಲರ್ ಫ್ರಿಟ್ಜ್ರನ್ನು ಸೋಲಿಸಿ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದರು. ಫ್ರೆಂಚ್ ಓಪನ್ ಚಾಂಪಿಯನ್ 36 ವರ್ಷದ ನಡಾಲ್ಗೆ 24 ವರ್ಷದ ಟೈಲರ್ ಫ್ರಿಟ್ಜ್ ಭಾರಿ ಸವಾಲು ಒಡ್ಡಿದರು. ಸೆಂಟರ್ ಕೋರ್ಟ್ನಲ್ಲಿ ನಡೆದ ಪಂದ್ಯ 5 ಸೆಟ್ಗಳನ್ನು ಕಂಡಿತು.
-
Just @RafaelNadal things 😤
— Wimbledon (@Wimbledon) July 6, 2022 " class="align-text-top noRightClick twitterSection" data="
The champion comes back to defeat Taylor Fritz in a five-set epic, 3-6, 7-5, 3-6, 7-5, 7-6(4)#Wimbledon | #CentreCourt100 pic.twitter.com/G7Luqy8lSH
">Just @RafaelNadal things 😤
— Wimbledon (@Wimbledon) July 6, 2022
The champion comes back to defeat Taylor Fritz in a five-set epic, 3-6, 7-5, 3-6, 7-5, 7-6(4)#Wimbledon | #CentreCourt100 pic.twitter.com/G7Luqy8lSHJust @RafaelNadal things 😤
— Wimbledon (@Wimbledon) July 6, 2022
The champion comes back to defeat Taylor Fritz in a five-set epic, 3-6, 7-5, 3-6, 7-5, 7-6(4)#Wimbledon | #CentreCourt100 pic.twitter.com/G7Luqy8lSH
ಪಂದ್ಯದ ಮಧ್ಯೆ ಹೊಟ್ಟೆ ನೋವು: ಈ ಪಂದ್ಯದಲ್ಲಿ ನಡಾಲ್ ತಮ್ಮ ಅನುಭವವನ್ನೆಲ್ಲ ಧಾರೆ ಎರೆದು ಟೈಲರ್ ವಿರುದ್ಧ 3-6, 7-5, 3-6, 7-5, 7-6 (10-4) ಅಂತರದಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಮೊದಲ ಸೆಟ್ ಅನ್ನು ಟೈಲರ್ 3-6 ರಿಂದ ಗೆದ್ದರು. ಬಳಿಕ ನಡಾಲ್ 2ನೇ ಸೆಟ್ ಅನ್ನು 7-5 ರಲ್ಲಿ ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ಹೊಟ್ಟೆ ನೋವಿಗೀಡಾದರು. ಫಿಜಿಯೋ ತಪಾಸಣೆಯ ಬಳಿಕ ಮತ್ತೆ ಮೈದಾನಕ್ಕಿಳಿದ ನಡಾಲ್ ನೋವಿನ ಮಧ್ಯೆಯೇ ಆಟ ಮುಂದುವರಿಸಿದರು.
3ನೇ ಸೆಟ್ ಅನ್ನು ಮತ್ತೆ 3-6 ರಿಂದ ಗೆದ್ದ ಟೈಲರ್ ಅನುಭವಿ ಆಟಗಾರನಿಗೆ ಸವಾಲೆಸೆದರು. ಮುಂದಿನ 4 ಮತ್ತು 5ನೇ ಸೆಟ್ ಅನ್ನು ನಡಾಲ್ 7-5, 7-6 ರಲ್ಲಿ ತಮ್ಮದಾಗಿಸಿಕೊಂಡರು. ಬಳಿಕ ನಡೆದ ಟೈ ಬ್ರೇಕರ್ನಲ್ಲಿ ಟೈಲರ್ ವಿರುದ್ಧ ಪಾರಮ್ಯ ಮೆರೆದ ರಾಫ್ 10-4 ಅಂತರದಲ್ಲಿ ಪಂದ್ಯ ಗೆದ್ದರು.
ರಾಫೆಲ್ ನಡಾಲ್ ಪಂದ್ಯ ಗೆದ್ದರೂ 24 ರ ಹರೆಯದ ಟೈಲರ್ ತನ್ನ ಮನಮೋಹಕ ಆಟದ ಮೂಲಕ ಪ್ರೇಕ್ಷಕರ ಮನಗೆದ್ದರು. ಪಂದ್ಯ ಬಳಿಕ ಕೈ ಕುಲುಕಿದ ನಡಾಲ್ ಯುವ ಆಟಗಾರನ ಬೆನ್ನು ತಟ್ಟಿದ್ದು ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿತು. ಈ ವರ್ಷದಲ್ಲಿ ಆಸ್ಟ್ರೇಲಿಯಾ, ಫ್ರೆಂಚ್ ಓಪನ್ ತನ್ನದಾಗಿಸಿರುವ ರಾಫೆಲ್ ನಡಾಲ್ ಸೆಮಿಫೈನಲ್ ತಲುಪಿ ಇದೀಗ 3ನೇ ಪ್ರಶಸ್ತಿಯ ಸನಿಹದಲ್ಲಿದ್ದಾರೆ.
ಮತ್ತೊಂದೆಡೆ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ನಿಕ್ ಕಿರ್ಗಿಯೋಸ್ ಚಿಲಿಯ ಕ್ರಿಸ್ಟಿಯನ್ ಗ್ಯಾರಿನ್ ಅವರನ್ನು 6-4, 6-3, 7-6 ನೇರ ಸೆಟ್‌ಗಳಿಂದ ಮಣಿಸಿ ಮೊದಲ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದಾರೆ. ಸೆಮಿಫೈನಲ್ನಲ್ಲಿ ನಿಕ್ ಕಿರ್ಗಿಯೋಸ್ ಮತ್ತು ರಾಫೆಲ್ ನಡಾಲ್ ಸೆಣಸಾಡಲಿದ್ದಾರೆ.
ಇದನ್ನೂ ಓದಿ: ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಮಹೇಂದ್ರ ಸಿಂಗ್ ಧೋನಿ