ETV Bharat / sports

ಬ್ಯಾಡ್ಮಿಂಟನ್​ ಶ್ರೇಯಾಂಕ: ಅಗ್ರ 10ರೊಳಗಿನ ಪಟ್ಟಿಯಿಂದ ಪಿ.ವಿ.ಸಿಂಧು ಔಟ್ - ಬಿಡಬ್ಲ್ಯೂಎಫ್

ಬಿಡಬ್ಲ್ಯೂಎಫ್​ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತದ ಪಿ.ವಿ.ಸಿಂಧು ಅವರು ಅಗ್ರ 10ರೊಳಗಿನ ಪಟ್ಟಿಯಿಂದ ಹೊರಬಿದ್ದಿದ್ದಾರೆ.

Badminton Player PV Sindhu
ಪಿ.ವಿ ಸಿಂಧು
author img

By

Published : Mar 29, 2023, 10:03 AM IST

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶ್ರೇಯಾಂಕ ಕುಸಿದಿದೆ. ನಿನ್ನೆ (ಮಾ.28) ಬಿಡುಗಡೆಯಾದ ಮಹಿಳಾ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌(ಬಿಡಬ್ಲ್ಯೂಎಫ್) ಶ್ರೇಯಾಂಕದಲ್ಲಿ ಸಿಂಧು 10ರೊಳಗಿನ ಪಟ್ಟಿಯಿಂದ ಕೆಳಗಿಳಿದಿದ್ದಾರೆ.

ಮಂಗಳವಾರ ಪ್ರಕಟವಾದ ಮಹಿಳೆಯರ ಸಿಂಗಲ್ಸ್‌ ಕ್ರಮಾಂಕದಲ್ಲಿ ಸಿಂಧು 11ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲವಾಗುತ್ತಿರುವ ಸಿಂಧು ಕಳೆದ ವಾರ ನಡೆದ ಸ್ವಿಸ್‌ ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 27 ವರ್ಷದ ಬ್ಯಾಡ್ಮಿಂಟನ್ ತಾರೆಯ ಬಳಿ ಸದ್ಯ 60,448 ಪಾಯಿಂಟ್‌ಗಳಿವೆ. ಒಂದು ಕಾಲದಲ್ಲಿ ಜೀವನ ಶ್ರೇಷ್ಠ 2ನೇ ರ್‍ಯಾಂಕ್‌ನಲ್ಲಿದ್ದ ಸಿಂಧು 2016ರ ನವೆಂಬರ್‌ನಿಂದ ಆರು ವರ್ಷಗಳ ಅಗ್ರ 10ರೊಳಗಿನವರ ಪಟ್ಟಿಯಲ್ಲಿದ್ದರು.

  • BWF World Ranking Prediction
    20 Mar 2023

    Mixed Doubles

    Seo/Chae harusnya berada di rank 6 dengan poin 65.720, Thom/Delphine tetap di rank 5.

    Kim/Jeong harusnya berada di rank 9 dengan poin 59.913, Feng/Huang posisi rank 8.

    Tang/Tse tetap d posisi rank 20 dengan poin 46.754,… pic.twitter.com/q8RuacdQuf

    — Badminton Talk (@BadmintonTalk) March 20, 2023 " class="align-text-top noRightClick twitterSection" data=" ">

ಆಗಸ್ಟ್ 2013ರಲ್ಲಿ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆಯುವಲ್ಲಿ ಸಿಂಧು ಯಶಸ್ವಿಯಾಗಿದ್ದರು. ಸೈನಾ ನೆಹ್ವಾಲ್ ಕೂಡ ಹೊಸ ಶ್ರೇಯಾಂಕದಲ್ಲಿ ಸೋಲು ಅನುಭವಿಸಿದ್ದಾರೆ. 36,600 ಅಂಕಗಳೊಂದಿಗೆ 31ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 43501 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ.

ಪುರುಷರ ಬಿಡಬ್ಲ್ಯೂಎಫ್ ಸಿಂಗಲ್ಸ್..: ವಿಭಾಗದಲ್ಲಿ ಹೆಚ್‌.ಎಸ್‌.ಪ್ರಣಯ್‌ 8ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಸದ್ಯ ಇವರು ಅವರು 64347 ಅಂಕಗಳನ್ನು ಹೊಂದಿದ್ದಾರೆ. ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್‌ ಕ್ರಮವಾಗಿ 21 ಹಾಗೂ 25ನೇ ಸ್ಥಾನದಲ್ಲಿದ್ದಾರೆ. ಸ್ವಿಸ್‌ ಓಪನ್ ಚಾಂಪಿಯನ್‌ಗಳಾದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಡಬಲ್ಸ್ ವಿಭಾಗದಲ್ಲಿ 68,246 ಅಂಕಗಳೊಂದಿಗೆ 6ನೇ ಕ್ರಮಾಂಕದಲ್ಲಿ ಮುಂದುವರೆದಿದ್ದಾರೆ. ಎಂ.ಆರ್ ಅರ್ಜುನ್ ಮತ್ತು ಧ್ರುವ ಕಪಿಲ ಜೋಡಿ 40238 ಅಂಕಗಳೊಂದಿಗೆ 26ನೇ ಸ್ಥಾನದಲ್ಲಿದ್ದಾರೆ.

  • BWF World Ranking on 28th March 2023 predicted by Badmintalk.
    Men's Doubles

    Not much change in the top 10 ranking pic.twitter.com/pIrShqJLS1

    — Badminton Talk (@BadmintonTalk) March 27, 2023 " class="align-text-top noRightClick twitterSection" data=" ">

'ಬೆಳ್ಳಿ'ಚುಕ್ಕಿಯ ಇಂಟ್ರೆಸ್ಟಿಂಗ್‌ ಸಂಗತಿಗಳು: ಪಿ.ವಿ. ಸಿಂಧು ಬಗೆಗೆ ನಿಮಗೆ ತಿಳಿದಿರದ ಆಸಕ್ತದಾಯಕ ಸಂಗತಿಗಳು ಹೀಗಿವೆ.. ಪಿ.ವಿ.ರಮಣ, ಪಿ.ವಿಜಯ ಸಿಂಧು ಪೋಷಕರು. ಇಬ್ಬರೂ ಕ್ರೀಡಾಪಟುಗಳು. ಅವರು ರಾಷ್ಟ್ರೀಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದರು. 2000ರಲ್ಲಿ ಪಿ.ವಿ.ರಮಣ ಅರ್ಜುನ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ತಂದೆ-ತಾಯಿಯಂತೆ ಸಿಂಧು ಕೂಡ ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಬಂದರು.

ಸಿಂಧು ಚಿಕ್ಕ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಇದನ್ನರಿತ ತಂದೆ ರಮಣ ಮುಂಜಾನೆ 3 ಗಂಟೆಗೆ ಮಗಳನ್ನು 120 ಕಿ.ಮೀ ದೂರದಲ್ಲಿದ್ದ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಕರೆದುಕೊಂಡು ಹೋಗುತ್ತಿದ್ದರು. ಸುಮಾರು 12 ವರ್ಷಗಳ ಕಾಲ ತರಬೇತಿ ಕೊಡಿಸಿದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಸಿಂಧು ಬೆಳ್ಳಿ ಗೆದ್ದಿದ್ದರು. ಈ ಮೂಲಕ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡರು.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಿಂಧು ಹಲವಾರು ಪ್ರಶಸ್ತಿ, ಬಹುಮಾನಗಳನ್ನು ಪಡೆದಿದ್ದಾರೆ. ಅದರಲ್ಲಿ ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನೀಡಿದ ಉಡುಗೊರೆ ಪ್ರಾಮುಖ್ಯತೆ ಪಡೆದಿದೆ. ಸಚಿನ್​​ ಸಿಂಧುಗೆ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಪಿ.ವಿ.ಸಿಂಧು ತರಬೇತಿಯಲ್ಲಿ ಇಲ್ಲದಿದ್ದಾಗ ಸ್ವಿಮಿಂಗ್‌ಪೂಲ್‌ನಲ್ಲಿ ಈಜುತ್ತಾರೆ. ಮನಸ್ಸಿನ ಶಾಂತತೆಗಾಗಿ ಯೋಗ, ಧ್ಯಾನ ಮಾಡುತ್ತಾರೆ.

ಇದನ್ನೂ ಓದಿ: ಸಿಂಧುಗೆ 'ದೇವರ' ಉಡುಗೊರೆ BMW.. ಕಂಚಿಗೆ ಮುತ್ತಿಕ್ಕಿದ 'ಬೆಳ್ಳಿ'ಚುಕ್ಕಿಯ ಇಂಟ್ರೆಸ್ಟಿಂಗ್‌ ಸಂಗತಿಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.