ETV Bharat / sports

ಕಾಮನ್​ವೆಲ್ತ್​ ಕ್ರೀಡಾಕೂಟ: ರಾಷ್ಟ್ರ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶ; ದೊಡ್ಡ ಗೌರವ ಎಂದ ಸಿಂಧು - Etv bharat kannada

ಮುಂದಿನ ತಿಂಗಳು ಆರಂಭಗೊಳ್ಳಲಿರುವ ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶ ಪಿವಿ ಸಿಂಧುಗೆ ಒಲಿದು ಬಂದಿದೆ.

PV Sindhu named indias flagbearer for Commonwealth Games

author img

By

Published : Jul 27, 2022, 9:45 PM IST

ನವದೆಹಲಿ: ಕಾಮನ್​ವೆಲ್ತ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡ ಮುನ್ನಡೆಸುವ ಅವಕಾಶವನ್ನ ಪಿವಿ ಸಿಂಧು ಪಡೆದುಕೊಂಡಿದ್ದಾರೆ. ಈ ಜವಾಬ್ದಾರಿ ದೊಡ್ಡ ಗೌರವ ನೀಡಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶವನ್ನ ಒಲಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪಡೆದುಕೊಂಡಿದ್ದರು.

ಆದರೆ, ಗಾಯದಿಂದಾಗಿ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ, ಎರಡು ಬಾರಿ ಒಲಿಂಪಿಕ್​​​ ಪದಕ ವಿಜೇತೆ ಪಿವಿ ಸಿಂಧು ಈ ಅವಕಾಶ ಪಡೆದುಕೊಂಡಿದ್ದಾರೆ.

  • The Indian Olympic Association (IOA) is delighted to announce shuttler PV Sindhu, a two-time Olympic medallist, as the Flagbearer of Team India at the Opening Ceremony of the Birmingham 2022 Commonwealth Games: IOA

    (File Pic) pic.twitter.com/ZUtHlL42CV

    — ANI (@ANI) July 27, 2022 " class="align-text-top noRightClick twitterSection" data=" ">

ಉದ್ಘಾಟನಾ ಸಮಾರಂಭದಲ್ಲಿ ಭಾರತದ 164 ಅಥ್ಲೀಟ್​ಗಳು ಭಾಗಿಯಾಗಲಿದ್ದು, ಒಟ್ಟು 215 ಕ್ರೀಡಾಪಟುಗಳು ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿರಿ: Commonwealth Games -2022; ಪದಕಗಳನ್ನು ಗೆದ್ದು ತರಬಲ್ಲ ಪ್ರಮುಖ ಅಥ್ಲೀಟ್‌ಗಳ ಪಟ್ಟಿ ಇಲ್ಲಿದೆ

ತಮಗೆ ನೀಡಿರುವ ಜವಾಬ್ದಾರಿ ಕುರಿತು ಮಾತನಾಡಿರುವ ಸಿಂಧು, ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸುವುದು ದೊಡ್ಡ ಜವಾಬ್ದಾರಿ ಹಾಗೂ ಗೌರವ. ಇದರಿಂದ ತುಂಬಾ ಸಂತೋಷಗೊಂಡಿದ್ದೇನೆ. ಜೊತೆಗೆ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವ ಪ್ರತಿ ಅಥ್ಲೀಟ್ಸ್​​ಗಳಿಗೆ ಶುಭ ಹಾರೈಸುತ್ತೇನೆ. ಧ್ವಜಧಾರಿಯಾಗಿ ನನ್ನ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಒಲಿಂಪಿಕ್​ ಸಂಸ್ಥೆ(IOA)ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.ಆಗಸ್ಟ್​ ತಿಂಗಳಲ್ಲಿ ಬರ್ಮಿಂಗ್​​ಹ್ಯಾಮ್​​ನಲ್ಲಿ 2022ರ ಕಾಮನ್​ವೆಲ್ತ್​ ಕ್ರೀಡಾಕೂಟ ಆರಂಭಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.