ಬಾಸೆಲ್(ಸ್ವಿಟ್ಜರ್ಲೆಂಡ್): ಒಲಿಂಪಿಕ್ ಕಂಚು ಪದಕ ವಿಜೇತೆ, ಭಾರತದ ಹೆಮ್ಮೆಯ ಷಟ್ಲರ್ ಪಿ ವಿ ಸಿಂಧು ಅವರು ಭಾನುವಾರ ಸ್ವಿಟ್ಜರ್ಲೆಂಡ್ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆಯಲ್ಲಿ ನಡೆದ ಸ್ವಿಸ್ ಓಪನ್-2022 ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದು, ಥಾಯ್ಲೆಂಡ್ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು 49 ನಿಮಿಷಗಳಲ್ಲಿ 21-16, 21-8 ಸೆಟ್ಗಳಿಂದ ಸೋಲಿಸಿದ್ದಾರೆ.
ಥಾಯ್ಲೆಂಡ್ನ ಆಟಗಾರ್ತಿ ಬುಸಾನನ್ ಅವರ ಪಿ.ವಿ. ಸಿಂಧು ಅವರು 17 ಪಂದ್ಯಗಳನ್ನು ಆಡಿದ್ದು, 16 ಬಾರಿಯೂ ಪಿ ವಿ ಸಿಂಧು ಅವರಿಗೆ ಜಯ ಒದಗಿ ಬಂದಿದೆ. 2019ರ ಹಾಂಗ್ ಕಾಂಗ್ ಓಪನ್‌ನಲ್ಲಿ ಒಮ್ಮೆ ಮಾತ್ರ ಥಾಯ್ ಆಟಗಾರ್ತಿ ಪಿ.ವಿ. ಸಿಂಧು ಅವರ ವಿರುದ್ಧ ಜಯ ಸಾಧಿಸಿದ್ದಾರೆ.
ಡಬಲ್ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಹಿಂದಿನ ಬಾರಿ ರಿಯೊ ಒಲಿಂಪಿಕ್ ಸ್ಪೇನ್‌ನ ಕರೊಲಿನಾ ಮರಿನ್ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರು. ಪಿ.ವಿ.ಸಿಂಧು ಇದು ಎರಡನೇ ಬಾರಿಯ ಸ್ವಿಸ್ ಓಪನ್ ಸೂಪರ್ 300 ಟೈಟಲ್ ಅನ್ನು ಗೆದ್ದಿದ್ದು, ಇದಕ್ಕೂ ಮುನ್ನ ಜನವರಿಯಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ: IPL 2022: ಆರ್ಸಿಬಿ, ಪಂಜಾಬ್ ಕಿಂಗ್ಸ್ ನಡುವೆ ಹಣಾಹಣಿ.. ಉಭಯ ತಂಡಗಳಿಗೆ ಹೊಸ ನಾಯಕತ್ವ