ETV Bharat / sports

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್​ ಗೆಲುವಿನ ಓಟಕ್ಕೆ ಪುಣೆ ಬ್ರೇಕ್

ಬೆಂಗಳೂರು ಬುಲ್ಸ್​ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ಕೊನೆಯ ರೈಡ್​ನಲ್ಲಿ ರೋಚಕ ಜಯಗಳಿಸಿತು.​

Pune breaks Bulls winning run
ಬುಲ್ಸ್​ ಗೆಲುವಿನ ಓಟಕ್ಕೆ ಪುಣೆ ಬ್ರೇಕ್
author img

By

Published : Nov 21, 2022, 9:30 AM IST

ಪುಣೆ: ಭಾನುವಾರ ರಾತ್ರಿ ನಡೆದ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ದ ಬೆಂಗಳೂರು ಬುಲ್ಸ್ 35-33 ಅಂಕಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿತು. ಸತತ ಗೆಲುವಿನ ಓಟದಲ್ಲಿದ ಬುಲ್ಸ್​ಗೆ ಈ ಮೂಲಕ ಪುಣೇರಿ ಪಲ್ಟನ್ ಬ್ರೇಕ್​ ಹಾಕಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕೊನೆಯ ಕ್ಷಣದಲ್ಲಿ ಅತಿಹೆಚ್ಚು ಅಂಕಗಳಿಸಿದರೂ ಬುಲ್ಸ್‌ಗೆ ಗೆಲುವು ಒಲಿಯಲಿಲ್ಲ. ಪರಿಣಾಮ, ಎರಡನೇ ಸ್ಥಾನಕ್ಕೆ ಜಾರಿತು.

ಪಲ್ಟನ್ ಮೊದಲ 10 ನಿಮಿಷಗಳಲ್ಲಿ ಪಂದ್ಯದ ಮೊದಲ ಆಲ್‌ಔಟ್ ಮಾಡಿ 14-4 ಮುನ್ನಡೆ ಕಾಯ್ದುಕೊಂಡಿತು. ವಿರಾಮದ ವೇಳೆಗೆ 20-10 ರಿಂದ 10 ಪಾಯಿಂಟ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಬುಲ್ಸ್ ಆಟಗಾರರು ದ್ವಿತೀಯಾರ್ಧವನ್ನು ಸೂಪರ್ ಟ್ಯಾಕಲ್‌ನೊಂದಿಗೆ ಪ್ರಾರಂಭಿಸಿ ಗೆಲುವಿನ ಭರವಸೆ ಮೂಡಿಸಿದರು. ಒಂದು ಹಂತದಲ್ಲಿ ಬುಲ್ಸ್​ 26-12 ರಷ್ಟು ಬೃಹತ್ ಹಿನ್ನಡೆ ಅನುಭವಿಸಿದ್ರೂ, ನಂತರ ಕೊನೆಯ 5 ನಿಮಿಷಗಳಲ್ಲಿ ಭರತ್ ಅವರ ಮಿಂಚಿನ ಆಟದಿಂದ 33-33 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಕೊನೆಯ ಮಾಡು ಇಲ್ಲವೇ ಮಡಿ ರೈಡ್‌ನಲ್ಲಿ ಇನಾಮ್‌ದಾರ್, ಪಲ್ಟನ್​ ಪರ ರೈಡ್​ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್: ತಲೈವಾಸ್‌ ಮೇಲೆ ಬುಲ್ಸ್​ ಸವಾರಿ, ಅಗ್ರಸ್ಥಾನ ತಲುಪಿದ ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.