ETV Bharat / sports

ಪಿ.ಟಿ.ಉಷಾ ಕ್ರೀಡಾ ತರಬೇತುದಾರ ನಂಬಿಯಾರ್ ನಿಧನ.. ಸಂತಾಪ - ಪಿ.ಟಿ.ಉಷಾ ಕ್ರೀಡಾ ತರಬೇತುದಾರ ನಂಬಿಯಾರ್ ನಿಧನ

ಭಾರತದ ಕ್ರೀಡಾಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ, ಪಿ.ಟಿ.ಉಷಾ ತರಬೇತುದಾರ ನಂಬಿಯಾರ್​ ಇಂದು ಕೊನೆಯುಸಿರೆಳೆದಿದ್ದಾರೆ.

ಪಿ.ಟಿ.ಉಷಾ
ಪಿ.ಟಿ.ಉಷಾ
author img

By

Published : Aug 19, 2021, 7:35 PM IST

Updated : Aug 19, 2021, 8:00 PM IST

ಕೋಯಿಕ್ಕೋಡ್ (ಕೇರಳ): ಓಟದ ರಾಣಿ ಪಿ.ಟಿ.ಉಷಾರ ಕ್ರೀಡಾ ತರಬೇತುದಾರ ಒಥಯೋತು ಮಾಧವನ್ ನಂಬಿಯಾರ್ ​(89) ಇಂದು ಕೊನೆಯುಸಿರೆಳೆದಿದ್ದಾರೆ. ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.

ಪಿ.ಟಿ.ಉಷಾ ತರಬೇತುದಾರ ನಂಬಿಯಾರ್
ಪಿ.ಟಿ.ಉಷಾ ತರಬೇತುದಾರ ನಂಬಿಯಾರ್

15 ವರ್ಷಗಳ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, 1970 ರಲ್ಲಿ ನಿವೃತ್ತರಾದರು. 1968 ರಲ್ಲಿ ಎನ್ಐಎಸ್-ಪಟಿಯಾಲದಿಂದ ಕೋಚಿಂಗ್ ಡಿಪ್ಲೊಮಾ ಪಡೆದಿದ್ದ ನಂಬಿಯಾರ್​, 1971 ರಲ್ಲಿ ಕೇರಳ ಕ್ರೀಡಾ ಮಂಡಳಿಗೆ ಸೇರಿದ್ದರು.ಪಿ.ಟಿ.ಉಷಾ ಹಾಗೂ ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟುಗಳಾದ ಶೈನಿ ವಿಲ್ಸನ್​​ (ನಾಲ್ಕು ಬಾರಿ ಒಲಿಂಪಿಯನ್ ಮತ್ತು 1985 ಏಷ್ಯಾ ಚಾಂಪಿಯನ್‌ಶಿಪ್ 800 ಮೀ ಓಟದಲ್ಲಿ ಚಿನ್ನದ ಪದಕ ವಿಜೇತೆ), ವಂದನಾ ರಾವ್ ಸೇರಿ ಹಲವರಿಗೆ ನಂಬಿಯಾರ್ ಕ್ರೀಡಾ ತರಬೇತಿ ನೀಡಿದ್ದಾರೆ.

ಪಿ.ಟಿ.ಉಷಾ ತರಬೇತುದಾರ ನಂಬಿಯಾರ್
ಪಿ.ಟಿ.ಉಷಾ ತರಬೇತುದಾರ ನಂಬಿಯಾರ್

1977 ರಿಂದ 1990 ರ ಅವಧಿಯಲ್ಲಿ ಉಷಾರನ್ನು ಭಾರತದ ಅತ್ಯುತ್ತಮ ಕ್ರೀಡಾಪಟುವಾಗಿ ರೂಪಿಸುವಲ್ಲಿ ನಂಬಿಯಾರ್ ಪಾತ್ರ ಪ್ರಮುಖವಾದದ್ದು. 1984 ರಲ್ಲಿ 400 ಮೀಟರ್ ಹರ್ಡಲ್ಸ್‌ಗಾಗಿ ಉಷಾಳನ್ನು ಸಿದ್ಧಪಡಿಸಿದ ನಂಬಿಯಾರ್ ಕೂಡ ಈ ಹಿಂದೆ 100 ಮೀ, 200 ಮೀ ಮತ್ತು 400 ಮೀ ಓಟಗಾರರಾಗಿದ್ದರು. 1986 ರ ಏಷ್ಯನ್ ಗೇಮ್ಸ್‌ನಲ್ಲಿ ಉಷಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು (200 ಮೀ, 400 ಮೀ, 400 ಮೀ ಹರ್ಡಲ್ಸ್ ಮತ್ತು 4x400 ಮೀ ರಿಲೇ)

ನಂಬಿಯಾರ್​ ಅವರಿಗೆ 1985 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ರಾಷ್ಟ್ರವು ಗೌರವಿಸಿತ್ತು.

Last Updated : Aug 19, 2021, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.