ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಓಟಗಾರ್ತಿ ಪಿಟಿ ಉಷಾ ಅವರು ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಸಹ ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಆತ್ಮೀಯರು ನನ್ನನ್ನು ಬೆಂಬಲಿಸಿದ್ದಾರೆ. ಹೀಗಾಗಿ ನಾನು ಅವರ ನಾಮನಿರ್ದೇಶವನ್ನು ವಿನಮ್ರದಿಂದ ಗೌರವಿಸಿ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕೆ ಧುಮುಕುವೆ ಎಂದು ಹೇಳಿದ್ದಾರೆ.
-
With the warm support of my Fellow Athletes and National Federations I am humbled and honoured to accept and file for the Nomination of the President Of IOA!
— P.T. USHA (@PTUshaOfficial) November 26, 2022 " class="align-text-top noRightClick twitterSection" data="
">With the warm support of my Fellow Athletes and National Federations I am humbled and honoured to accept and file for the Nomination of the President Of IOA!
— P.T. USHA (@PTUshaOfficial) November 26, 2022With the warm support of my Fellow Athletes and National Federations I am humbled and honoured to accept and file for the Nomination of the President Of IOA!
— P.T. USHA (@PTUshaOfficial) November 26, 2022
ಡಿಸೆಂಬರ್ 10 ರಂದು ಐಒಎಗೆ ಚುನಾವಣೆ ಘೋಷಿಸಲಾಗಿದೆ. ಭಾನುವಾರ(ನವೆಂಬರ್ 27) ನಾಮಪತ್ರ ಸಲ್ಲಿಸುವ ಅಂತಿಮ ದಿನವಾಗಿದೆ. ಒಂದು ದಿನದ ಮುಂಚೆ ಪಿಟಿ ಉಷಾ ಅವರು ಈ ಅಚ್ಚರಿಯ ನಿರ್ಧಾರವನ್ನು ಘೋಷಿಸಿದ್ದಾರೆ.
ಐಒಎ ಅಥ್ಲೀಟ್ಗಳ ಆಯೋಗ ಪಿಟಿ ಉಷಾ ಸೇರಿದಂತೆ 8 ಜನರನ್ನು ನಾಮ ನಿರ್ದೇಶನ ಮಾಡಿದ್ದರು. ಶುಕ್ರವಾರದಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸಿಲ್ಲ, ನಾಳೆ ಕಡೆಯ ದಿನವಾಗಿದೆ ಎಂದು ಐಒಎ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ತಿಳಿಸಿದ್ದಾರೆ.
ಓದಿ: ಏಷ್ಯಾಕಪ್ ಆಡಲು ಪಾಕ್ಗೆ ಬರದಿದ್ರೆ, ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ: ರಮೀಜ್ ರಾಜಾ