ಬೆಂಗಳೂರು: ಡಿಸೆಂಬರ್ 22ರಿಂದ ಆರಂಭಗೊಳ್ಳಲಿರುವ 8ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನ ರೈಡರ್ ಪವನ್ ಶೆರಾವತ್ ಮುನ್ನಡೆಸಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಬುಲ್ಸ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ತಂಡದ ಕ್ಯಾಪ್ಟನ್ ಆಗಿದ್ದ ರೋಹಿತ್ ಕುಮಾರ್ ಗಾಯಗೊಂಡಿದ್ದ ಕಾರಣ ಕೆಲವೊಂದು ಪಂದ್ಯಗಳಲ್ಲಿ ನಾಯಕನಾಗಿ ಪವನ್ ತಂಡ ಮುನ್ನಡೆಸಿದ್ದರು. ಆದರೆ, ಈ ಸಲದ ಆವೃತ್ತಿಯಲ್ಲಿ ಪೂರ್ಣಾವಧಿ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ. ಇವರ ಜೊತೆಗೆ ಉಪನಾಯಕನಾಗಿ ಮಹೇಂದ್ರ ಸಿಂಗ್ ಆಯ್ಕೆಯಾಗಿದ್ದಾರೆ.
-
When you are a legend
— Bengaluru Bulls (@BengaluruBulls) December 14, 2021 " class="align-text-top noRightClick twitterSection" data="
Leadership is only a matter of time...@pawan_kumar17#FullChargeMaadi #vivoProKabaddiIsBack #BengaluruBulls #kabaddi #VivoPKL8 #VivoProKabaddiLeague #Season8 #KhelKabaddi #prokabaddileague2021 pic.twitter.com/NMuMia18Gg
">When you are a legend
— Bengaluru Bulls (@BengaluruBulls) December 14, 2021
Leadership is only a matter of time...@pawan_kumar17#FullChargeMaadi #vivoProKabaddiIsBack #BengaluruBulls #kabaddi #VivoPKL8 #VivoProKabaddiLeague #Season8 #KhelKabaddi #prokabaddileague2021 pic.twitter.com/NMuMia18GgWhen you are a legend
— Bengaluru Bulls (@BengaluruBulls) December 14, 2021
Leadership is only a matter of time...@pawan_kumar17#FullChargeMaadi #vivoProKabaddiIsBack #BengaluruBulls #kabaddi #VivoPKL8 #VivoProKabaddiLeague #Season8 #KhelKabaddi #prokabaddileague2021 pic.twitter.com/NMuMia18Gg
ಕಳೆದ ಎಂಟು ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್ ಸೀಸನ್ 6ರಲ್ಲಿ ಗುಜರಾತ್ ಫಾರ್ಚೂನ್ಜೈಂಟ್ಸ್ ತಂಡವನ್ನ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿದೆ. ಕಳೆದ ಋತುವಿನಲ್ಲಿ ಅತ್ಯಂತ ಯಶಸ್ವಿ ರೈಡರ್ ಆಗಿ ಹೊರಹೊಮ್ಮಿರುವ ಪವನ್, ಇದೀಗ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಬುಲ್ಸ್ ತಂಡದ ನಾಯಕ ಪವನ್ ಇಲ್ಲಿಯವರೆಗೆ 80 ಪಂದ್ಯಗಳಿಂದ 716 ಅಂಕ ಗಳಿಸಿದ್ದು, ರೇಡಿಂಗ್ನಲ್ಲಿ 682 ಹಾಗೂ ಟ್ಯಾಕಲ್ನಲ್ಲಿ 34 ಅಂಕ ಗಳಿಸಿದ್ದಾರೆ. ಡಿಸೆಂಬರ್ 22ರಿಂದ ಈ ಸಲದ ಪ್ರೊ ಕಬಡ್ಡಿ ಲೀಗ್ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಬುಲ್ಸ್-ಯು ಮುಂಬಾ ಸೆಣಸಾಟ ನಡೆಸಲಿವೆ.