ETV Bharat / sports

ಪ್ರೊ ಕಬಡ್ಡಿ ಫೈನಲ್​: ರೋಚಕ ಹಣಾಹಣಿಯಲ್ಲಿ ಪಾಟ್ನಾ ವಿರುದ್ಧ ಗೆದ್ದು ಚಾಂಪಿಯನ್​​ ಆದ ಡೆಲ್ಲಿ ದಬಾಂಗ್​ - ಪ್ರೊ ಕಬಡ್ಡಿ ಫೈನಲ್ ಪಂದ್ಯ

ಪಾಟ್ನಾ- ದಬಾಂಗ್​ ಡೆಲ್ಲಿ ಮಧ್ಯೆ ನಡೆದ ರೋಚಕ ಫೈನಲ್​​ ಪಂದ್ಯದಲ್ಲಿ ಕೇವಲ 1 ಪಾಯಿಂಟ್​​ ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಡೆಲ್ಲಿ ತಂಡ 8ನೇ ಆವೃತ್ತಿ ಪ್ರೊ ಕಬಡ್ಡಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

Pro Kabaddi League 2022
Pro Kabaddi League 2022
author img

By

Published : Feb 25, 2022, 10:30 PM IST

ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿ ಪೈನಲ್​ ಪಂದ್ಯದಲ್ಲಿ ರೋಚಕವಾಗಿ ಗೆಲುವು ದಾಖಲು ಮಾಡುವ ಮೂಲಕ ಡೆಲ್ಲಿ ದಬಾಂಗ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ಪ್ರಶಸ್ತಿಗಾಗಿ ನಡೆದ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್​​ ವಿರುದ್ಧ ಡೆಲ್ಲಿ ದಬಾಂಗ್​​ 37-36 ಅಂಕಗಳಿಂದ ಗೆಲುವು ದಾಖಲು ಮಾಡಿದೆ.

ಸೆಮೀಸ್​ನಲ್ಲಿ ಯುಪಿ ಯೋಧಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಪಾಟ್ನಾ ಫೈನಲ್​ಗೆ ಪ್ರವೇಶ ಪಡೆದುಕೊಂಡಿತ್ತು. ಮತ್ತೊಂದೆಡೆ ಬೆಂಗಳೂರು ಬುಲ್ಸ್​ ವಿರುದ್ಧ ಗೆದ್ದ ದಬಾಂಗ್​ ಡೆಲ್ಲಿ ಫೈನಲ್​ಗೆ ಎಂಟ್ರಿ ನೀಡಿತ್ತು. ಇಂದು ನಡೆದ ಪಂದ್ಯ ಕೊನೆಯ ಕ್ಷಣದವರೆಗೂ ಉಭಯ ತಂಡಗಳ ನಡುವೆ ರೋಚಕ ಹಣಾಹಣಿಗೆ ಕಾರಣವಾಯಿತು. ಆದರೆ, ಕೊನೆಯ ಕ್ಷಣದಲ್ಲಿ ಡೆಲ್ಲಿ ತಂಡ ಒಂದು ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿದೆ. ಈ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್​ ಆಗುವ ಕನಸು ಕಾಣುತ್ತಿದ್ದ ಪಾಟ್ನಾ ಕನಸು ನುಚ್ಚುನೂರಾಗಿದೆ. ಈ ಹಿಂದೆ 2016, 17 ಹಾಗೂ 18ರಲ್ಲಿ ಪಾಟ್ನಾ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಈ ಸಲ ದಬಾಂಗ್ ಡೆಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಫೈನಲ್ ಪಂದ್ಯದಲ್ಲಿ ಪಾಟ್ನಾ ತಂಡ 29 ರೈಡ್ ಪಾಯಿಂಟ್​ಗಳಿಕೆ ಮಾಡಿದ್ರೆ, ದಬಾಂಗ್ ಡೆಲ್ಲಿ 27 ಪಾಯಿಂಟ್ ಗಳಿಕೆ ಮಾಡಿತು. ಉಳಿದಂತೆ ಉಭಯ ತಂಡಗಳು ಟ್ಯಾಕಲ್​ ಮೂಲಕ 4 ಪಾಯಿಂಟ್​​ ಹಾಗೂ ಆಲೌಟ್ ಮೂಲಕ 2 ಪಾಯಿಂಟ್​ಗಳಿಸಿದವು. ಆದರೆ, ದಬಾಂಗ್​ ಡೆಲ್ಲಿ ಇತರ 4 ಪಾಯಿಂಟ್​ಗಳಿಕೆ ಮಾಡಿದ್ರೆ, ಪಾಟ್ನಾ ಕೇವಲ 1 ಪಾಯಿಂಟ್​ಗಳಿಕೆ ಮಾಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.