ಕೌಲಾಲಂಪುರ (ಮಲೇಷ್ಯಾ): ಭಾರತದ ಸ್ಟಾರ್ ಷಟ್ಲರ್ ಹೆಚ್‌ಎಸ್ ಪ್ರಣಯ್ ಮಲೇಷ್ಯಾ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂದು ನಡೆದ ಸೆಮೀಸ್ನಲ್ಲಿ ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಅವರು ಪಂದ್ಯದ ನಡುವೆ ಗಾಯಕ್ಕೆ ತುತ್ತಾದರು ಇದರಿಂದ ಲೀಡ್ನಲ್ಲಿದ್ದ ಎಚ್‌ಎಸ್ ಪ್ರಣಯ್ ಫೈನಲ್ ಟಿಕೆಟ್ ಪಡೆದುಕೊಂಡರು.
-
Thanks Prannoy! Respect #MalaysiaMasters2023 pic.twitter.com/Ccu6O4ZzF1
— #MalaysiaMasters2023 (@BadmintonLive1) May 27, 2023 " class="align-text-top noRightClick twitterSection" data="
">Thanks Prannoy! Respect #MalaysiaMasters2023 pic.twitter.com/Ccu6O4ZzF1
— #MalaysiaMasters2023 (@BadmintonLive1) May 27, 2023Thanks Prannoy! Respect #MalaysiaMasters2023 pic.twitter.com/Ccu6O4ZzF1
— #MalaysiaMasters2023 (@BadmintonLive1) May 27, 2023
ಸೆಮಿಫೈನಲ್ನಲ್ಲಿ ವಿಶ್ವದ 9ನೇ ಶ್ರೇಯಾಂಕದ ಪ್ರಣಯ್ ಅವರು 19-17ರಲ್ಲಿ ಮುನ್ನಡೆಯಲ್ಲಿದ್ದರು, ಆಗ ಆದಿನಾಟಾ ಅವರು ಜಂಪ್ ರಿಟರ್ನ್ ನಂತರ ಲ್ಯಾಂಡಿಂಗ್ ಮಾಡುವಾಗ ಬ್ಯಾಲೆಂನ್ಸ್ ಕಳೆದುಕೊಂಡರು. ಇದರಿಂದ ಅವರ ಪಾದದ ಮೇಲೆ ಒತ್ತಡ ಹೆಚ್ಚಾಯಿತು ಮತ್ತು ಅವರ ಎಡ ಮೊಣಕಾಲು ಗಂಭೀರ ಗಾಯಕ್ಕೆ ಒಳಗಾಯಿತು. ನೋವು ತೀವ್ರವಾಗಿ ಇದ್ದ ಕಾರಣ ಅವರು ಗೇಮ್ ಕ್ವಿಟ್ ಮಾಡಿದರು, ಇದರಿಂದ ಮುನ್ನಡೆಯಲ್ಲಿದ್ದ ಪ್ರಣಯ್ ಅಂತಿಮ ಹಂತ ತಲುಪಿದರು.
ಪ್ರಣಯ್ ಅವರು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಮತ್ತು ಚೈನೀಸ್ ತೈಪೆಯ ಲಿನ್ ಚುನ್-ಯಿ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಇದು ಪ್ರಣಯ್ ಅವರ ಈ ಋತುವಿನಲ್ಲಿ ಮೊದಲ ಫೈನಲ್ ಆಗಿದ್ದು, ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ನಂತರ ಇದು ಎರಡನೇ ಪಂದ್ಯವಾಗಿದೆ.
-
Cedera saat bertanding membuat Christian Adinata harus mundur dari semifinal Malaysia Masters 2023.
— BADMINTON INDONESIA (@INABadminton) May 27, 2023 " class="align-text-top noRightClick twitterSection" data="
Info selengkapnya akan segera diupdate.
Lekas pulih CeA!#MalaysiaMasters2023 pic.twitter.com/WoN3G2Y43u
">Cedera saat bertanding membuat Christian Adinata harus mundur dari semifinal Malaysia Masters 2023.
— BADMINTON INDONESIA (@INABadminton) May 27, 2023
Info selengkapnya akan segera diupdate.
Lekas pulih CeA!#MalaysiaMasters2023 pic.twitter.com/WoN3G2Y43uCedera saat bertanding membuat Christian Adinata harus mundur dari semifinal Malaysia Masters 2023.
— BADMINTON INDONESIA (@INABadminton) May 27, 2023
Info selengkapnya akan segera diupdate.
Lekas pulih CeA!#MalaysiaMasters2023 pic.twitter.com/WoN3G2Y43u
ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ 14-21, 17-21 ರಿಂದ ಸೆಮಿಪೈನಲ್ನಲ್ಲಿ ಸೋಲು ಅನುಭವಿಸಿದರು. ಇದರಿಂದ ಮಹಿಳೆಯರ ಸಿಂಗಲ್ಸ್ನ ಪ್ರಶಸ್ತಿ ನಿರೀಕ್ಷೆ ಹುಸಿಯಾಗಿದೆ. ಇಂಡೋನೇಷ್ಯಾದ ಆಟಗಾರ್ತಿ ವಿರುದ್ಧ ಇದುವರೆಗೂ ಸಿಂಧು ಸತತ ಏಳು ಗೆಲುವು ಕಂಡಿದ್ದರು, ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
ಸಿಂಧು ಕ್ವಾರ್ಟರ್-ಫೈನಲ್‌ನಲ್ಲಿ 21-16, 13-21, 22-20 ರಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ರೋಚಕ ಪಂದ್ಯದಲ್ಲಿ ಟೈ ಸಾಧಿಸಿ, ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರ ವಿರುದ್ಧ ಇಂದು ಕಣಕ್ಕಿಳಿದಿದ್ದರು. ಸಿಂಧು ಗಾಯದಿಂದಾಗ ಕಳೆದ ಒಂದು ವರ್ಷ ಆಟದಿಂದ ಹೊರಗುಳಿದಿದ್ದರು. ಇದಾದ ನಂತರ ಅವರು ಭಾಗವಹಿಸಿದ ಪಂದ್ಯಗಳನ್ನು ಫೈನಲ್ ಹಂತಕ್ಕೆ ತಲುಪಲು ಕಷ್ಟ ಪಡುತ್ತಿದ್ದರು. ಆದರೆ ಈ ಬಾರಿ ಸೆಮೀಸ್ ಪ್ರವೇಶಿಸದ ಅವರ ಮೇಲೆ ಭರವಸೆ ಹೆಚ್ಚಿಸಿತ್ತು.
-
Lekas pulih Christian. Kami semua mendukung dan mendoakanmu.#MalaysiaMasters2023 pic.twitter.com/QLiU0TGvqn
— BADMINTON INDONESIA (@INABadminton) May 27, 2023 " class="align-text-top noRightClick twitterSection" data="
">Lekas pulih Christian. Kami semua mendukung dan mendoakanmu.#MalaysiaMasters2023 pic.twitter.com/QLiU0TGvqn
— BADMINTON INDONESIA (@INABadminton) May 27, 2023Lekas pulih Christian. Kami semua mendukung dan mendoakanmu.#MalaysiaMasters2023 pic.twitter.com/QLiU0TGvqn
— BADMINTON INDONESIA (@INABadminton) May 27, 2023
ಇಂದಿನ ಪ್ರಣಯ್ ಆಟ: ಭಾರತದ ಶೆಟ್ಲರ್ ಕಿಡಂಬಿ ಶ್ರೀಕಾಂತ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿ ಸೆಮೀಸ್ಗೆ ಎಂಟ್ರಿ ಪಡೆದಿದ್ದ ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಅವರ ವಿರುದ್ಧ ಪ್ರಣಯ್ ಪ್ರಾಬಲ್ಯ ಮೆರೆದರು. ಆರಂಭದಿಂದಲೇ ತಮ್ಮ ಹಿಡಿತವನ್ನು ಸಾಧಿಸಿದ್ದರು. ಮೊದಲ ಹಂತದಲ್ಲಿ ಪ್ರಣಯ್ 11 -1 ರ ಮುನ್ನಡೆ ಪಡೆದಿದ್ದರು.
ಜಂಪ್ ಕ್ರಾಸ್ ಕೋರ್ಟ್ ಸ್ಮ್ಯಾಶ್ ಪ್ರಣಯ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಈ ಶಾಟ್ನಿಂದ ಅವರು ಹೆಚ್ಚಿನ ಅಂಕಗಳನ್ನು ಗಳಿಸಿದರು. ಆದರೆ ಕೆಲ ತಪ್ಪು ಜಡ್ಜಮೆಂಟ್ನಿಂದ ಪ್ರಣಯ್ ಬೃಹತ್ ಮುನ್ನಡೆ ಕಳೆದುಕೊಳ್ಳ ಬೇಕಾಯಿತು. ಪ್ರಣಯ್ 11 ರಿಂದ 14 ಕ್ಕೆ ಅಂಕ ಹೆಚ್ಚಿಸಿಕೊಳ್ಳುವ ಹೊತ್ತಿಗೆ, ಆದಿನಾಟಾ 1 ರಿಂದ 10ಕ್ಕೆ ಬಂದಿದ್ದರು. ಪ್ರಣಯ್ 16 ಅಂಕ ಗಳಿಸಿದ್ದಾಗ ಸಮಬಲವಾಗಿತ್ತು. ಆದರೆ ನಂತರ ಪ್ರಣಯ್ 19ರ ಮುನ್ನಡೆ ಪಡೆದರು ಈ ವೇಳೆ ಆದಿನಾಟಾ ಗಾಯಕ್ಕೆ ತುತ್ತಾದರು.