ETV Bharat / sports

ದುಬಾರಿ ಕಾರುಗಳ ಒಡೆಯ.. ಕಾಲ್ಚೆಂಡಿನ ದಾಖಲೆ ಸರದಾರ ರೊನಾಲ್ಡೊ: ಇಲ್ಲಿದೆ ಅವರ ಕಾರುಗಳ ಕಲೆಕ್ಷನ್​ ಮಾಹಿತಿ - ETV Bharath Kannada news

ಫೆಬ್ರವರಿ 5 ರಂದು 38ನೇ ಜನ್ಮದಿನಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ದುಬಾರಿ ಕಾರುಗಳ ಸಂಗ್ರಹದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.

Portuguese footballer Cristiano Ronaldo
ಕ್ರಿಸ್ಟಿಯಾನೊ ರೊನಾಲ್ಡೊ
author img

By

Published : Feb 6, 2023, 4:08 PM IST

ನವದೆಹಲಿ: ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸಗಳಿರುತ್ತದೆ. ಅದರಲ್ಲೂ ಆಟಗಾರರಿಗೆ ಕಾರು ಕಲೆಕ್ಷನ್​ ಮಾಡುವ ಅಭ್ಯಾಸಗಳು ಹೆಚ್ಚಿರುತ್ತದೆ. ಭಾರತದ ಕ್ರಿಕೆಟ್​ ದೇವರು ಸಚಿನ್​, ಕೂಲ್​ ಕ್ಯಾಪ್ಟನ್​ ಧೋನಿ, ರನ್​ ಮಷಿನ್​ ವಿರಾಟ್​ ಕೊಹ್ಲಿ ದುಬಾರಿ ಕಾರುಗಳನ್ನು ಸಂಗ್ರಹಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಆದರೆ, ಈಗ ದುಬಾರಿ ಕಾರುಗಳಿಂದ ಹೆಸರು ಮಾಡುತ್ತಿರುವುದು ಭಾರತೀಯ ಆಟಗಾರರಲ್ಲ. ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ.

Portuguese footballer Cristiano Ronaldo
ರೊನಾಲ್ಡೊ ಅವರ ಬಳಿ ಇರುವ ಕಾರು

ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫ್ಯಾಷನ್ ಮತ್ತು ದುಬಾರಿ ಹವ್ಯಾಸ ಟ್ರೆಂಡ್​ ಕ್ರಿಯೇಟ್​ ಮಾಡಿದೆ. ಪೋರ್ಚುಗೀಸ್ ವೃತ್ತಿಪರ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫೆಬ್ರವರಿ 5 ರಂದು ತಮ್ಮ 38ನೇ ಜನ್ಮದಿನವನ್ನು ಆಚರಿಸಿಕೊಂಡರು. ಈ ವೇಳೆ, ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ವೈರಲ್​ ಆಗಿದೆ.

Portuguese footballer Cristiano Ronaldo
ರೊನಾಲ್ಡೊ ಅವರ ಬಳಿ ಇರುವ ಕಾರು

ರೊನಾಲ್ಡೊ ಅವರಿಗೆ ಕಾರುಗಳ ಕ್ರೇಜ್​ ತುಂಬಾ ಇದೆ. ಅವರು ಹಲವಾರು ನೂತನ ವಿನ್ಯಾಸ ಮತ್ತು ದುಬಾರಿ ಕಾರುಗಳನ್ನು ಸಂಗ್ರಹಿಸಿದ್ದಾರೆ. ಇತ್ತೀಚೆಗೆ ಅವರು ಇಂಗ್ಲೆಂಡ್​ನ ಮ್ಯಾಂಚೆಸ್ಟರ್ ಯುನೈಟೆಡ್​ ಫುಟ್ಬಾಲ್​ ಕ್ಲಬ್​ನಿಂದ ಹೊರಬಂದು ಸೌದಿ ಅರೇಬಿಯಾ ಕ್ಲಬ್​ಗೆ ಸೇರಿದ್ದರು. ಕಾಲ್ಚೆಂಡಿನ ಇತಿಹಾಸದ ದಾಖಲೆ ಮೊತ್ತಕ್ಕೆ ರೊನಾಲ್ಡೊ ದುಬೈ ಕ್ಲಬ್​ಗೆ ಸೇರಿದ್ದರು. ದಾಖಲೆಗಳ ಸರದಾರ ರೊನಾಲ್ಡೊಗೆ ಅರೇಬಿಯಾ ಕ್ಲಬ್ ಬರೋಬ್ಬರಿ 4,400 ಕೋಟಿ ರೂಪಾಯಿಗೆ 2 ವರ್ಷಗಳ ಒಪ್ಪಂದ ಮಾಡಿಕೊಂಡು ತಂಡಕ್ಕೆ ಸೇರಿಸಿಕೊಂಡಿತ್ತು.

ಇದಾದ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಐಷಾರಾಮಿ ಜೀವನದ ಬಗ್ಗೆ ಹಲವಾರು ಚರ್ಚೆಗಳಾಗಿದ್ದವು. ರೊನಾಲ್ಡೊ ಸೌದಿ ಅರೇಬಿಯಾದ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದರು, ಅವರ ತಿಂಗಳ ಬಾಡಿಗೆ 2.5 ಕೋಟಿ ಎಂದು ಮಾಹಿತಿಗಳು ಹರಿದಾಡಿದ್ದವು. ಈಗ ಅವರ ಬಳಿ ಇರುವ ದುಬಾರಿ ಕಾರಿನ ಬಗ್ಗೆ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ಅಭಿಮಾನಿಗಳು ಸಿಆರ್​​7 ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕರೆಯುತ್ತಾರೆ. ಅದಕ್ಕೆ ಕಾರಣ ಅವರು ಧರಿಸುತ್ತಿದ್ದ ಜರ್ಸಿ ಸಂಖೇ 7 ಹೀಗಾಗಿ ಅವರ ಹೆಸರಿನ ಜೊತೆ ಸೇರಿಸಿ ಸಿಆರ್​7 ಎನ್ನುತ್ತಾರೆ.

Portuguese footballer Cristiano Ronaldo
75 ಕೋಟಿ ಬುಗಾಟಿ ಲಾ ವೊಯಿಚರ್ ನೊಯರ್

ರೊನಾಲ್ಡೊ ಬಳಿ ಪ್ರೀಮಿಯಂ ಬುಗಾಟ್ಟಿ ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ, ಅವುಗಳಲ್ಲಿ ಒಂದು ವೆಯ್ರಾನ್. ಇದರ ಬೆಲೆ ಸುಮಾರು 1.7 ಮಿಲಿಯನ್ ಯುಎಸ್ ಡಾಲರ್ ಎನ್ನಲಾಗಿದೆ. ಇದಲ್ಲದೇ ರೋಲ್ಸ್ ರಾಯ್ಸ್​ನ ಹಲವು ಮಾದರಿಯ ಕಾರುಗಳನ್ನು ಸಂಗ್ರಹಿಸಿದ್ದಾರೆ. ರೊನಾಲ್ಡೊ ಅವರ ಗೆಳತಿ ಜಾರ್ಜಿನಾ ರೋಡ್ರಿಗಸ್ ಕ್ರಿಸ್‌ಮಸ್ ಸಂದರ್ಭದಲ್ಲಿ ರೊನಾಲ್ಡೊ ಅವರಿಗೆ ಟೆಸ್ಟ್ - ಬ್ರಾಂಡ್ ರೋಲ್ಸ್ ರಾಯ್ಸ್ ಡಾನ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದಲ್ಲದೇ, ರೊನಾಲ್ಡೊ ಐದು ಫೆರಾರಿ ಕಾರುಗಳನ್ನು ಸಹ ಹೊಂದಿದ್ದು ಅವುಗಳಲ್ಲಿ ಒಂದು ಫೆರಾರಿ ಮೊನ್ಜಾ SP1, ಇದರ ಬೆಲೆ ಸುಮಾರು 1.6 ಮಿಲಿಯನ್ ಯುರೋಗಳಾಗಿದೆ.

ಪೋರ್ಚುಗೀಸ್ ಫುಟ್ಬಾಲ್ ಆಟಗಾರ ರೊನಾಲ್ಡೊ ಲಂಬೋರ್ಗಿನಿ ಅವೆಂಟಡಾರ್ LP 700-4 ಅನ್ನು ಹೊಂದಿದ್ದಾರೆ. ಇದಲ್ಲದೇ, ಅವರು ಈ ಹಿಂದೆ ಆಕರ್ಷಕವಾಗಿ ಕಾಣುವ ಮೆಕ್ಲಾರೆನ್ ಸೆನ್ನಾವನ್ನು ಸಹ ಖರೀದಿಸಿದ್ದರು. ಇವರ ಐಷಾರಾಮಿ ಕಾರುಗಳ ಸಂಗ್ರಗಹದಲ್ಲಿ ಮರ್ಸಿಡಿಸ್-ಎಎಂಜಿ ಜಿಎಲ್‌ಇ 63, ಪೋರ್ಷೆ 911 ಟರ್ಬೊ ಎಸ್, ಆಡಿ ಆರ್‌ಎಸ್7, ಬಿಎಂಡಬ್ಲ್ಯು ಎಂ6, ಪೋರ್ಷೆ ಕಯೆನ್ನೆ, ಮಾಸೆರಾಟಿ ಗ್ರಾನ್‌ಕ್ಯಾಬ್ರಿಯೊಗಳು ಸೇರಿವೆ.

ಇದನ್ನೂ ಓದಿ: ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಆರಂಭಕ್ಕೂ ಮುನ್ನ ಶಿಖರ್​ ಧವನ್​ ಭೇಟಿ​ಯಾದ ನಟ ಸುದೀಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.