ETV Bharat / sports

ಗರ್ಭಿಣಿಯಾಗಿದ್ದರೂ ಚೆಸ್ ಒಲಿಂಪಿಯಾಡ್​ನಲ್ಲಿ ಆಡುವೆ: ಗ್ರ್ಯಾಂಡ್​ಮಾಸ್ಟರ್ ದ್ರೋಣವಲ್ಲಿ ಹರಿಕಾ

44 ನೇ ಚೆಸ್ ಒಲಿಂಪಿಯಾಡ್ ಜುಲೈ 28 ರಂದು ಚೆನ್ನೈನಲ್ಲಿ ಭವ್ಯ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ. ಭಾರತವು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಒಲಿಂಪಿಯಾಡ್ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ ದ್ರೋಣವಲ್ಲಿ ಹರಿಕಾ.

Playing in Chess Olympiad despite being pregnant: Grandmaster Dronavalli Harika

author img

By

Published : Jul 26, 2022, 4:49 PM IST

Updated : Jul 26, 2022, 4:56 PM IST

ಹೈದರಾಬಾದ್: ತಾವು ಗರ್ಭಿಣಿಯಾಗಿದ್ದರೂ ತವರು ನೆಲ ಭಾರತದಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್​ನಲ್ಲಿ ಆಡಲಿರುವುದಾಗಿ ಗ್ರ್ಯಾಂಡ್​ ಮಾಸ್ಟರ್ ದ್ರೋಣವಲ್ಲಿ ಹರಿಕಾ ಹೇಳಿದ್ದಾರೆ. ಈ ಬಾರಿಯ ಒಲಿಂಪಿಯಾಡ್​ನಲ್ಲಿ ಆಡುತ್ತಿರುವ ಭಾರತದ ಎಲ್ಲ ತಂಡಗಳು ಬಲಿಷ್ಠವಾಗಿವೆ ಎಂದು ಅವರು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಚೆನ್ನೈನಲ್ಲಿ ನಡೆಯಲಿರುವ ಒಲಿಂಪಿಯಾಡ್​ಗೂ ಮುನ್ನ ಭಾರತ ತಂಡದ ಅವಕಾಶಗಳು ಮತ್ತು ತಮ್ಮ ಪ್ರದರ್ಶನದ ಬಗ್ಗೆ ಈಟಿವಿ ಭಾರತನೊಂದಿಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ ಹರಿಕಾ.

ಗರ್ಭಿಣಿಯಾಗಿದ್ದರೂ ಪರವಾಗಿಲ್ಲ.. ಒಲಿಂಪಿಯಾಡ್​ನಲ್ಲಿ ಆಡುವೆ: ಚೆಸ್ ಒಲಿಂಪಿಯಾಡ್ ನಮಗೆ ಒಲಿಂಪಿಕ್ಸ್ ಇದ್ದಂತೆ. ನಾನು ಗರ್ಭಿಣಿಯಾಗಿದ್ದರೂ ಟೂರ್ನಿಯಲ್ಲಿ ಆಡಲು ನಿರ್ಧರಿಸಿರುವೆ. ಭಾರತದಲ್ಲಿ ಮೊದಲ ಬಾರಿಗೆ ಈ ಚೆಸ್ ಒಲಿಂಪಿಯಾಡ್ ಆಯೋಜಿಸಲಾಗುತ್ತಿದೆ. ನಾನು ಪ್ರತಿ ಬಾರಿ ತಂಡಕ್ಕಾಗಿ ಆಡುತ್ತೇನೆ, ಹೀಗಿರುವಾಗ ತವರು ನೆಲದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಆಡದಿದ್ದರೆ ಹೇಗೆ ಎಂದು ಯೋಚಿಸಿದೆ.

ಇದಲ್ಲದೆ, ನಾವು ಟಾಪ್​ ಸೀಡ್ ಆಗಿದ್ದೇವೆ. ಇನ್ನು, ಚೆನ್ನೈಗೆ ಇಲ್ಲಿಂದ ಕೇವಲ ಒಂದು ಗಂಟೆಯಲ್ಲಿ ವಿಮಾನದ ಮೂಲಕ ತಲುಪಬಹುದಾಗಿದ್ದರಿಂದ ಯಾವುದೇ ತೊಂದರೆ ಇಲ್ಲ. ರಷ್ಯಾದಲ್ಲಿ ಪಂದ್ಯಾವಳಿ ನಡೆದಿದ್ದರೆ, ಹೋಗಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ನಾನು ವಿಮಾನ ಪ್ರಯಾಣ ಮಾಡುವುದು ಸಾಧ್ಯವಾಗದಿದ್ದರೆ, ರಸ್ತೆ ಮೂಲಕವಾದರೂ ಹೋಗಲು ಬಯಸುತ್ತೇನೆ" ಎಂದು ಹರಿಕಾ ಹೇಳಿದರು.

ಆಟಕ್ಕೆ ಮಾನಸಿಕವಾಗಿ ಸಿದ್ಧ: ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಒಲಿಂಪಿಯಾಡ್​ನ ಎಲ್ಲ ಹಂತದ ಎಲ್ಲ ಆಟಗಳನ್ನು ಆಡದಿದ್ದರೂ ಪರವಾಗಿಲ್ಲ. ಕೆಲವಾದರೂ ಪಂದ್ಯಗಳನ್ನು ಆಡಿದರೂ ನನಗೆ ಸಾಕು. ಒತ್ತಡದ ಬಗ್ಗೆ ಈಗಲೇ ಹೇಳಲಾರೆ. ಹಲವು ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು, ಚೆಸ್ ಅಭ್ಯಾಸ ಬಿಟ್ಟು ಬೇರೇನೂ ಮಾಡಿಲ್ಲ.

ನಾನು ಮಾನಸಿಕವಾಗಿ ಆಟಕ್ಕೆ ಸಿದ್ಧಳಾಗಿದ್ದೇನೆ. ಚೆಸ್ ದೈಹಿಕ ಕ್ರೀಡೆಯಲ್ಲವಾದ್ದರಿಂದ, ವೈದ್ಯರು ಕೂಡ ಆಟವಾಡುವಂತೆ ಸಲಹೆ ನೀಡಿದ್ದಾರೆ. ಈ ಹಿಂದೆ 3 ಮತ್ತು 4 ತಿಂಗಳ ಗರ್ಭಿಣಿಯರು ಕೆಲ ಬಾರಿ ಆಟವಾಡಿದ್ದಾರೆ. ಆದರೆ, ಹಲವು ತಿಂಗಳ ಗರ್ಭಾವಸ್ಥೆಯೊಂದಿಗೆ ಆಟವಾಡುತ್ತಿರುವ ಮೊದಲ ಮಹಿಳೆ ನಾನು ಎಂದು ಭಾವಿಸುತ್ತೇನೆ'' ಎಂದು ಅವರು ತಮ್ಮ ಮನದಾಳದ ಮಾತು ಹಂಚಿಕೊಂಡರು.

ಸ್ವಿಸ್ ಮಾದರಿ ಮತ್ತು 11 ಸುತ್ತಿನ ಪಂದ್ಯಾವಳಿ: ಮೇಲ್ನೋಟಕ್ಕೆ ಭಾರತ ತಂಡ ಅತ್ಯಂತ ಬಲಿಷ್ಠವಾಗಿ ಕಾಣುತ್ತದೆ ಹಾಗೂ ಅಗ್ರ ಸೀಡ್​ನಲ್ಲಿದೆ. ಆದರೆ, ಇದು ಸ್ವಿಸ್ ಮಾದರಿ ಮತ್ತು 11 ಸುತ್ತಿನ ಪಂದ್ಯಾವಳಿಯಾಗಿದೆ. ಒಂದೇ ಸುತ್ತಿನ ವ್ಯತ್ಯಾಸವೂ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. 2020 ಮತ್ತು 2021 ರಲ್ಲಿ ಆನ್‌ಲೈನ್‌ನಲ್ಲಿ ಒಲಿಂಪಿಯಾಡ್ ನಡೆದಿತ್ತು. ನಾವು 2018 ರಲ್ಲಿ ಕೊನೆಯ ಬಾರಿಗೆ ಲೈವ್ ಆಡಿದ್ದೆವು. ಈಗ ಮತ್ತೊಮ್ಮೆ ಲೈವ್ ಆಡುತ್ತಿದ್ದೇವೆ. ಯಾರು ಯಾವ ಫಾರ್ಮ್​​ನಲ್ಲಿದ್ದಾರೋ ಗೊತ್ತಿಲ್ಲ. ಟೂರ್ನಮೆಂಟ್ ಪ್ರಾರಂಭವಾಗುವವರೆಗೂ ಅದು ತಿಳಿಯದು. ಕೊರೊನಾ ಅವಧಿಯಲ್ಲಿ ಎಲ್ಲ ಪಂದ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು ಎಂದರು ಹರಿಕಾ.

ಪದಕ ಗೆಲ್ಲುವ ಹೇರಳ ಅವಕಾಶ: ನಾವು 2020 ರಲ್ಲಿ ಚಿನ್ನ (ರಷ್ಯಾ ಜೊತೆಯಲ್ಲಿ) ಮತ್ತು 2021 ರಲ್ಲಿ ಕಂಚು ಗೆದ್ದಿದ್ದೇವೆ. ಈಗ ಮತ್ತೆ ಹಳೆಯ ರೀತಿಯಲ್ಲಿ ಆಟ ನಡೆಯಲಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ಇರಲಿವೆ. ಐದು ಆಟಗಾರರಲ್ಲಿ ನಾಲ್ವರು ಆಟಗಳನ್ನು ಆಡುತ್ತಾರೆ. ಓರ್ವ ಆಟಗಾರ ರಿಸರ್ವ್​​ನಲ್ಲಿರುತ್ತಾರೆ.

ಉಕ್ರೇನ್, ಜಾರ್ಜಿಯಾ, ಕಝಾಕಿಸ್ತಾನ್ ಮತ್ತು ಪೋಲೆಂಡ್‌ನ ಆಟಗಾರರು ಹೆಚ್ಚಿನ ಪೈಪೋಟಿ ನೀಡಬಹುದು. ಭಾರತ ಪುರುಷರ ತಂಡ ಎರಡನೇ ಶ್ರೇಯಾಂಕಿತವಾಗಿ ಕಣಕ್ಕಿಳಿದಿದೆ. ಮಹಿಳಾ ತಂಡದಂತೆ ಇದು ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಪುರುಷರು ಮತ್ತು ಮಹಿಳೆಯರು ಈ ಬಾರಿ ಪದಕ ಗೆಲ್ಲುವ ಸಮಾನ ಅವಕಾಶಗಳನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.

ಆತಿಥೇಯ ರಾಷ್ಟ್ರಕ್ಕೆ ಮತ್ತೊಂದು ತಂಡ ಕಣಕ್ಕಿಳಿಸುವ ಅವಕಾಶ: ಚೆಸ್ ಒಲಿಂಪಿಯಾಡ್‌ನಲ್ಲಿ ಒಂದು ದೇಶದಿಂದ ಎರಡು ತಂಡಗಳು (ಪುರುಷರು ಮತ್ತು ಮಹಿಳೆಯರು) ಮಾತ್ರ ಭಾಗವಹಿಸಬೇಕು. ಆದರೆ, ಆತಿಥೇಯ ರಾಷ್ಟ್ರಕ್ಕೆ ಮತ್ತೊಂದು ತಂಡವನ್ನು ಕಣಕ್ಕಿಳಿಸುವ ಅವಕಾಶವಿದೆ. ಅದಕ್ಕಾಗಿಯೇ ಎ ಮತ್ತು ಬಿ ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಅಗ್ರ 5ರಲ್ಲಿರುವ ಆಟಗಾರರು ಎ ತಂಡದಲ್ಲಿದ್ದಾರೆ. 5 ರಿಂದ 10ನೇ ಸ್ಥಾನದಲ್ಲಿರುವ ಆಟಗಾರರು ಬಿ-ಟೀಮ್‌ನಲ್ಲಿದ್ದಾರೆ. ಭಾಗವಹಿಸುವ ದೇಶಗಳ ಸಂಖ್ಯೆ ಬೆಸ ಸಂಖ್ಯೆಯಾಗಿರುವುದರಿಂದ ಸಿ-ತಂಡಗಳನ್ನು ಸಹ ಆಯ್ಕೆ ಮಾಡಲಾಗಿದೆ. ಹಾಗಾಗಿ ಭಾರತದ 30 ಆಟಗಾರರು ಮೈದಾನದಲ್ಲಿದ್ದಾರೆ. ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಇಷ್ಟೊಂದು ಆಟಗಾರರು ಆಡುತ್ತಿರುವುದು ಇದೇ ಮೊದಲು. ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸುತ್ತೇನೆ ಎನ್ನುವ ಮೂಲಕ ತಮ್ಮ ಮಾತು ಮುಗಿಸಿದರು.

ಇದನ್ನು ಓದಿ:ಫ್ರಾನ್ಸ್​ನ ಗುಸ್ತಾವ್​ ದಾಖಲೆ.. ಟಿ-20ಯಲ್ಲಿ ಶತಕ ಸಿಡಿಸಿದ ಅತಿ ಕಿರಿಯ

Last Updated : Jul 26, 2022, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.