ETV Bharat / sports

ಯು ಮುಂಬಾ ಕನಸು ಭಗ್ನಗೊಳಿಸಿ ಪ್ಲೇ ಆಫ್​ಗೆ ಅರ್ಹತೆ ಪಡೆದ ಯುಪಿ ಯೋಧಾ - ಪಿಕೆಎಲ್ ಪ್ಲೇ ಆಫ್ ಪ್ರವೇಶಿಸಿದ ಯುಪಿ ಯೋಧಾ

ಲೀಗ್​ನ 22 ಪಂದ್ಯಗಳ ಕೋಟಾದಲ್ಲಿ ಯುಪಿ ಯೋಧಾ 10 ಗೆಲುವು 9 ಸೋಲು ಮತ್ತು 3 ಟೈಗಳ ನೆರವಿನಿಂದ 68 ಅಂಕ ಪಡೆದು ಪ್ಲೇ ಆಫ್​ಗೆ ಪ್ರವೇಶ ಪಡೆಯಿತು. ಇನ್ನು ಯು ಮುಂಬಾ 21 ಪಂದ್ಯಗಳಲ್ಲಿ 7 ಗೆಲುವು, 9 ಸೋಲು 5 ಟೈ ಸಹಿತ 54 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿಯಿತು. ಮುಂಬೈ ತನ್ನ ಕೊನೆಯ ಪಂದ್ಯವನ್ನು ಗುಜರಾತ್ ಜೈಂಟ್ಸ್​ ವಿರುದ್ಧ ಆಡಲಿದೆ.

UP Yoddha qualifies for playoffs after beat U mumba by 35-28
ಪ್ರೊ ಕಬಡ್ಡಿ ಲೀಗ್
author img

By

Published : Feb 17, 2022, 9:15 PM IST

ಬೆಂಗಳೂರು: ಪ್ರೋ ಕಬಡ್ಡಿ 8ನೇ ಆವೃತ್ತಿಯಲ್ಲಿ ಹಲವು ಏರಿಳಿತಗಳ ನಡುವೆಯೂ ಯೋಧಾ ಪ್ಲೇ ಆಫ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್​ ಪ್ರವೇಶಿಸಲು ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಯುಪಿ ತಂಡ 35-28ರ ಅಂತರದಲ್ಲಿ ಯು ಮುಂಬಾಗೆ ಸೋಲುಣಿಸುವಲ್ಲಿ ಯಶಸ್ವಿಯಾಯಿತು.

ಲೀಗ್​ನ 22 ಪಂದ್ಯಗಳ ಕೋಟಾದಲ್ಲಿ ಯುಪಿ ಯೋಧಾ 10 ಗೆಲುವು 9 ಸೋಲು ಮತ್ತು 3 ಟೈಗಳ ನೆರವಿನಿಂದ 68 ಅಂಕ ಪಡೆದು ಪ್ಲೇ ಆಫ್​ಗೆ ಪ್ರವೇಶ ಪಡೆಯಿತು. ಇನ್ನು ಯು ಮುಂಬಾ 21 ಪಂದ್ಯಗಳಲ್ಲಿ 7 ಗೆಲುವು, 9 ಸೋಲು 5 ಟೈ ಸಹಿತ 54 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿಯಿತು. ಮುಂಬೈ ತನ್ನ ಕೊನೆಯ ಪಂದ್ಯವನ್ನು ಗುಜರಾತ್ ಜೈಂಟ್ಸ್​ ವಿರುದ್ಧ ಆಡಲಿದೆ.

ಇನ್ನು ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಯೋಧಾ 18-12ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಕಮ್​ಬ್ಯಾಕ್ ಮಾಡಿದ ಮುಂಬೈ ಎದುರಾಳಿಯನ್ನು ಆಲೌಟ್ ಮಾಡಿ ಅಂಕಗಳ ಅಂತರವನ್ನು 20-20ರ ಸಮಬಲಕ್ಕೆ ತಂದಿತ್ತು. ಕೊನೆಯ ಎರಡು ನಿಮಿಷಗಳವರೆಗೂ ಎರಡೂ ತಂಡಗಳು 27-27ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಎರಡೂ ನಿಮಿಷದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಮುಂಬೈ ತಂಡವನ್ನು ಆಲೌಟ್​ ಮಾಡುವ ಮೂಲಕ ಜಯ ಸಾಧಿಸಿತು.

ಸುರೇಂದರ್ ಗಿಲ್​ 8, ಪರ್ದೀಪ್ ನರ್ವಾಲ್ 6, ಡಿಫೆಂಡರ್​ಗಳಾದ ಆಶು ಸಿಂಗ್, ಶುಭಮ್ ಕುಮಾರ್​, ಸುಮಿತ್​ ತಲಾ 3, ನಿತೇಶ್ ಕುಮಾರ್​, ಗುರ್ದೀಪ್​ ತಲಾ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬೈ ಪರ ರೈಡರ್​ಗಳಾದ ವಿ. ಅಜೀತ್ ಕುಮಾರ್​ 5, ಅಭಿಷೇಕ್ ಸಿಂಗ್ ಸಿಂಗ್ 4 ಅಂಕ ಪಡೆದರೆ, ಡಿಫೆಂಡರ್​ಗಳಾದ ರಿಂಕು 5 ಮತ್ತು ಹರೀಂದರ್​ ಕುಮಾರ್​ 4 ಅಂಕ ಪಡೆದರು.

ಇದನ್ನೂ ಓದಿ: ಇಂದು ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದೊಂದಿಗೆ ಬುಲ್ಸ್​ ಸೆಣಸಾಟ... ಗೆದ್ದರಷ್ಟೇ ಪ್ಲೇ ಆಫ್ ಚಾನ್ಸ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.