ETV Bharat / sports

PKL 2022: ಡೆಲ್ಲಿ ವಿರುದ್ಧ ಜೈಪುರ್​, ಟೈಟನ್ಸ್​ ವಿರುದ್ಧ ತಮಿಳ್​ ತಲೈವಾಸ್​ಗೆ ಭರ್ಜರಿ ಜಯ - ದಬಾಂಗ್​ ಡೆಲ್ಲಿ vs ಜೈಪುರ್ ಪಿಂಗ್ ಪ್ಯಾಂಥರ್ಸ್​

ತೆಲುಗು ಟೈಟನ್ಸ್ ವಿರುದ್ಧ ಪ್ರಾಬಲ್ಯ ಪ್ರದರ್ಶನ ತೋರಿದ ತಮಿಳ್​ ತಲೈವಾಸ್ 43-25ರ ಅಂತರದಲ್ಲಿ ಗೆದ್ದು 11ನೇ ಸ್ಥಾನದಿಂದ ನೇರ 5ನೇ ಸ್ಥಾನಕ್ಕೇ ಜಿಗಿತ ಕಂಡಿದೆ. ಮತ್ತೊಂದು ಪಂದ್ಯದಲ್ಲಿ ಜೈಪುರ್​​ ಪಿಂಕ್​ ಪ್ಯಾಂಥರ್ಸ್ ಟೇಬಲ್​ ಟಾಪರ್ ದಬಾಂಗ್​ ಡೆಲ್ಲಿ ವಿರುದ್ಧ 36-30ರಲ್ಲಿ ಜಯ ಸಾಧಿಸಿತು.

Pro kabaddi league
ಪ್ರೊ ಕಬಡ್ಡಿ ಲೀಗ್
author img

By

Published : Feb 3, 2022, 10:45 PM IST

ಬೆಂಗಳೂರು: ನಾಯಕ ದೀಪಕ್​ ನಿವಾಸ್​ ಹೂಡ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಜೈಪುರ್​​ ಪಿಂಕ್​ ಪ್ಯಾಂಥರ್ಸ್ ಟೇಬಲ್​ ಟಾಪರ್ ದಬಾಂಗ್​ ಡೆಲ್ಲಿ ವಿರುದ್ಧ 36-30ರ ಅಂತರದಲ್ಲಿ ​ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ರೈಡಿಂಗ್​ನಲ್ಲಿ ಎರಡೂ ತಂಡಗಳೂ 21 ಅಂಕ ಪಡೆದು ಸಮಬಲ ಸಾಧಿಸಿದವು. ಆದರೆ ಜೈಪುರ 12 ಟ್ಯಾಕಲ್ ಅಂಕ ಪಡೆದರೆ, ಡೆಲ್ಲಿ ಕೇವಲ 7 ಅಂಕ ಪಡೆಯಿತು.

ಜೈಪುರ ಪರ ದೀಪಕ್ 12 ಅಂಕಪಡೆದರೆ, ಕಳೆದ ಪಂದ್ಯದ ಹೀರೋ ಅರ್ಜುನ್ ದೇಶ್ವಾಲ್​ ಇಂದು ವೈಫಲ್ಯ ಅನುಭವಿಸಿ ಕೇವಲ 6 ಅಂಕ ಪಡೆದರು. ಸಚಿನ್ 4, ಶೌಲ್​ ಕುಮಾರ್​ 3, ಸಂದೀಪ್​ ಧುಲ್ 3 ಅಂಕ ಪಡೆದರು.

ಡೆಲ್ಲಿ ಪರ ವಿಜಯ್ ಮಲಿಕ್​ 16 ಅಂಕ ಪಡೆದರು ಸೋಲು ಸೂಕ್ತ ಬೆಂಬಲವಿಲ್ಲದೆ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಅನ್ಶು ಮಲಿಕ್​ 5, ಮಂಜೀತ್ ಚಿಲ್ಲರ್ 2 ಅಂಕ ಪಡೆದರು. ಈ ಪಂದ್ಯದಲ್ಲಿ ಸೋಲು ಕಂಡರು ಡೆಲ್ಲಿ 16 ಪಂದ್ಯಗಳಲ್ಲಿ 9 ಜಯ ಮತ್ತು 5 ಸೋಲು, 2 ಡ್ರಾ ಸಾಧಿಸಿ 54 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದೆ.

ತಮಿಳ್​ ತಲೈವಾಸ್​ಗೆ ಭರ್ಜರಿ ಜಯ

ತೆಲುಗು ಟೈಟನ್ಸ್ ವಿರುದ್ಧ ಪ್ರಾಬಲ್ಯ ಪ್ರದರ್ಶನ ತೋರಿದ ತಮಿಳ್​ ತಲೈವಾಸ್ 43-25ರ ಅಂತರದಲ್ಲಿ ಗೆದ್ದು 11ನೇ ಸ್ಥಾನದಿಂದ ನೇರ 5ನೇ ಸ್ಥಾನಕ್ಕೇ ಜಿಗಿತ ಕಂಡಿದೆ.

ಸೋತು ಸುಣ್ಣವಾಗಿರುವ ಟೈಟನ್ಸ್ ವಿರುದ್ಧ ರೈಡಿಂಗ್​ನಲ್ಲಿ 21 ಮತ್ತು ಡಿಫೆಂಡಿಂಗ್​ನಲ್ಲಿ 17 ಅಂಕ ಪಡೆಯಿತು, ಟೈಟನ್ಸ್​ 13 ರೈಡ್​ ಮತ್ತು 9 ಟ್ಯಾಕಲ್ ಅಂಕ ಪಡೆಯಿತು. ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್​ 10, ಮಂಜಿತ್​ 9, ಡಿಫೆಂಡರ್​ ಸಾಗರ್​ 9, ಸಾಹಿಲ್ ಸಿಂಗ್ 4 ಅಂಕ ಪಡೆದು ಗೆಲುವಿನ ರೂವಾರಿಗಳಾದರು.

ಇದನ್ನೂ ಓದಿ: ಬಡತನದಲ್ಲಿ ಅರಳಿದ ಚಿಕ್ಕಮಗಳೂರಿನ ಪ್ರತಿಭೆ: ಈಗ ಅಂತಾರಾಷ್ಟ್ರೀಯ ಕಬಡ್ಡಿ ಪ್ಲೇಯರ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.