ETV Bharat / sports

ಕೋವಿಡ್ ಎಫೆಕ್ಟ್.. ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಮುಂದೂಡಿಕೆ - ಪ್ರೊ ಕಬಡ್ಡಿ ಸೀಸನ್ 8

ಆಟಗಾರರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಪ್ರೊ ಕಬಡ್ಡಿ ಸೀಸನ್ ಎಂಟನ್ನು ಮುಂದೂಡಿದ್ದೇವೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ..

Pro Kabaddi season 8 postponed due to Covid-19
ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಮುಂದೂಡಿಕೆ
author img

By

Published : Nov 29, 2020, 4:00 PM IST

ಹೈದರಾಬಾದ್ : ಕೋವಿಡ್‌-19 ಕಾರಣದಿಂದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಮುಂದೂಡಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಕೋವಿಡ್ ಸೋಂಕಿನಿಂದ ಅನೇಕ ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಆ ಸಾಲಿಗೆ ಪ್ರೋ ಕಬ್ಬಡಿ ಕೂಡ ಸೇರ್ಪಡೆಯಾಗಿದೆ. "ಕೋವಿಡ್‌-19 ಕಾರಣದಿಂದ 8ನೇ ಪ್ರೊ ಕಬಡ್ಡಿ ಲೀಗ್‌ ಪಂದ್ಯಾವಳಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಆಟಗಾರರ ಸುರಕ್ಷತೆ ನಮಗೆ ಮುಖ್ಯವಾಗಿದೆ. ಮತ್ತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಮುಂದಿನ ವರ್ಷ ಆಯೋಜಿಸುವ ಯೋಜನೆ ಇದೆ" ಎಂದು ತಿಳಿಸಿದ್ದಾರೆ.

"ಈಗಿನ ಪರಿಸ್ಥಿತಿಯಲ್ಲಿ ಮಾರ್ಗಸೂಚಿಗಳು ಮತ್ತು ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರೊ ಕಬಡ್ಡಿ ಲೀಗ್ ಸೀಸನ್ ಎಂಟನ್ನು ಮುಂದೂಡಿದ್ದೇವೆ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ಪ್ರೊಕಬ್ಬಡಿ ಲೀಗ್ ಅಧಿಕೃತ ಟ್ವಿಟರ್ ಪೇಜ್​ನಲ್ಲಿ ಟ್ವೀಟ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.