ETV Bharat / sports

ಪವನ್​ ಶೆರಾವತ್​ ಮಿಂಚಿನ ರೈಡಿಂಗ್... ತಮಿಳ್​ ತಲೈವಾಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್ - ತಮಿಳ್​ ತಲೈವಾಸ್​ ವಿರುದ್ಧ 32-21 ರಿಂದ ಗೆದ್ದ ಬುಲ್ಸ್

7ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನಲ್ಲಿ ತಮಿಳರ ಅಡ್ಡಕ್ಕೆ ನುಗ್ಗಿದ ತಮಿಳ್​ ತಲೈವಾಸ್​ ವಿರುದ್ಧ 32-21 ಅಂಕಗಳ ಅಂತರದಿಂದ ಬಗ್ಗುಬಡಿದಿದೆ.  ಎಂದಿನಂತೆ ತಮ್ಮ ಚಾಣಾಕ್ಷ್ಯ ಪ್ರದರ್ಶನ ಮುಂದುವರಿಸಿದ ಪವನ್​ ಶೆರಾವತ್​ ಇಂದೂ ಕೂಡ 11 ಅಂಕ ಸಾಂಪಾದಿಸಿ ಗೆಲುವಿನ ರೂವಾರಿಯಾದರು.

PKL 2019
author img

By

Published : Aug 17, 2019, 10:16 PM IST

Updated : Aug 17, 2019, 10:26 PM IST

ಚೆನ್ನೈ: ಪವನ್​ ಶೆರಾವರ್​ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್​ ತಂಡ ತಮಿಳ್​ ತಲೈವಾಸ್​ ತಂಡವನ್ನು ಬಗ್ಗುಬಡಿದಿದೆ.

7ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನಲ್ಲಿ ತಮಿಳರ ಅಡ್ಡಕ್ಕೆ ನುಗ್ಗಿದ ತಮಿಳ್​ ತಲೈವಾಸ್​ ವಿರುದ್ಧ 32-21 ಅಂಕಗಳ ಅಂತರದಿಂದ ಬಗ್ಗುಬಡಿದಿದೆ. ಎಂದಿನಂತೆ ತಮ್ಮ ಚಾಣಾಕ್ಷ್ಯ ಪ್ರದರ್ಶನ ಮುಂದುವರಿಸಿದ ಪವನ್​ ಶೆರಾವತ್​ ಇಂದೂ ಕೂಡ 11 ಅಂಕ ಸಾಂಪಾದಿಸಿ ಗೆಲುವಿನ ರೂವಾರಿಯಾದರು.

ಮೊದಲಾರ್ಧದಲ್ಲಿ 17-10 ರಲ್ಲಿ ಮುನ್ನಡೆ ಕಾಯ್ದುಕೊಂಡ ಬುಲ್ಸ್​ ಧ್ವಿತಿಯಾರ್ಧದಲ್ಲೂ ತಮ್ಮ ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಪವನ್​ಗೆ ಸಾತ್​ ನೀಡಿದ ಸೌರಭ್​ 5 ಅಂಕ ಪಡೆದು ಮಿಂಚಿದರು.

ನೀರಸ ಪ್ರದರ್ಶನ ತೋರಿದ ಅನುಭವಿಗಳ ದಂಡನ್ನೇ ಹೊಂದಿರುವ ತಮಿಳ್​ ತಲೈವಾಸ್​ ಪರ ಠಾಕೂರ್​ 4, ರಣ್​ಸಿಂಗ್​ 4, ಅಜಿತ್​ ಕುಮಾರ್​ 4, ಶಬೀರ್​ ಬಾಪು 3 ಅಂಕಗಳಿಸಿದರು. ಅನುಭವಿ ಆಲ್​ರೌಂಡರ್​ ಮಂಜಿತ್​ ಹಾಗೂ ಮೋಹಿತ್​ ಕೇವಲ ಒಂದೊಧಂಉ ಅಂಕಗಳಿಸಿ ನಿರಾಶೆ ಮೂಡಿಸಿದರು.

ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಆಡಿರುವ ಎಂಟು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು 27 ಅಂಕಗಳನ್ನು ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಮತ್ತೊಂದು ಪಂದ್ಯದಲ್ಲಿ ದಬಾಂಗ್​ ಡೆಲ್ಲಿ, ಬೆಂಗಾಲ್​ ವಾರಿಯರ್ಸ್​ ವಿರುದ್ಧ 30-30ರಲ್ಲಿ ಡ್ರಾ ಸಾದಿಸಿದೆ.

Intro:Body:Conclusion:
Last Updated : Aug 17, 2019, 10:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.