ETV Bharat / sports

ಪೀಲೆಗೆ ಎದುರಾದ ಆರೋಗ್ಯ ಸಮಸ್ಯೆ; ಕರುಳಿನ ಕ್ಯಾನ್ಸರ್​ನಿಂದ ಪಾರಾಗುವುದು ಹೇಗೆ?

author img

By

Published : Dec 10, 2022, 1:47 PM IST

ಫುಟ್‌ಬಾಲ್ ಆಟಗಾರ ಪೀಲೆಯಲ್ಲಿ ಕಾಣಿಸಿಕೊಂಡಿರುವ ಕರುಳಿನ ಕ್ಯಾನ್ಸರ್ ಭಾರತದಲ್ಲಿಯೂ ಸಹ ಅತ್ಯಂತ ಪ್ರಚಲಿತದಲ್ಲಿರುವ ಕಾಯಿಲೆ. ಇದರ ಕುರಿತು ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್, ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಮತ್ತು ಇಂದೋರ್ ಕ್ಯಾನ್ಸರ್ ಫೌಂಡೇಶನ್‌ನ ಸಂಸ್ಥಾಪಕ ಡಾ. ದಿಗ್ಪಾಲ್ ಧಾರ್ಕರ್ ಒಂದಿಷ್ಟು ವಿಷಯಗಳನ್ನು ತಿಳಿಸಿದ್ದಾರೆ. ಹಾಗಾದರೆ ಅವುಗಳ ಕುರಿತು ತಿಳಿಯೋಣ ಬನ್ನಿ.

Pele's health problem; How to get rid of colon cancer?
ಪೀಲೆಗೆ ಎದುರಾದ ಆರೋಗ್ಯ ಸಮಸ್ಯೆ; ಕರುಳಿನ ಕ್ಯಾನ್ಸರ್​ನಿಂದ ಪಾರಾಗುವುದು ಹೇಗೆ?

ಬ್ರೆಜಿಲ್‌ನ ಶ್ರೇಷ್ಠ ಫುಟ್‌ಬಾಲ್ ಆಟಗಾರ ಪೀಲೆ ಅವರು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದು ಗೊತ್ತೆ ಇದೆ. ಆದರೆ ಇದೀಗ ಬಂದಿರುವ ಅವರ ಆರೋಗ್ಯ ಸಂಬಂಧಿ ಹೊಸ ವರದಿ ಪೀಲೆ ಅವರ ಅಭಿಮಾನಿಗಳನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಅದೇನಪ್ಪ ಮತ್ತೆ ಹೊಸ ಸಮಸ್ಯೆ ಪೀಲೆಗೆ ಎದುರಾಗಿದೆ ಎಂದರೆ ಇತ್ತೀಚೆಗೆ ಅವರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಇದರಿಂದ ಅವರ ಮೇಲೆ ಇದ್ದ ಅಭಿಮಾನಿಗಳ ಕಾಳಜಿ ಇನ್ನೂ ಹೆಚ್ಚಾಗಿದೆ. ಮೊದಲೇ ಅವರು ತಮ್ಮ ಕರುಳಿನ ಕ್ಯಾನ್ಸರ್ ವಿರುದ್ಧ ಸೆಣೆಸಾಡುತ್ತಿದ್ದಾರೆ. ಈಗಂತೂ ಕಾಣಿಸಿಕೊಂಡಿರುವ ಕೋವಿಡ್​ನಿಂದಾಗಿ ಅವರ ಆರೋಗ್ಯ ಸ್ಥಿತಿಯ ಮೇಲೆ ತೀರಾ ನಿಗವಹಿಸಬೇಕಾಗಿದೆ.

ಫುಟ್ಬಾಲ್​ ಆಟಗಾರ ಪೀಲೆಯಲ್ಲಿ ಕಾಣಿಸಿಕೊಂಡಿರುವ ಕರುಳಿನ ಕ್ಯಾನ್ಸರ್ ಭಾರತದಲ್ಲಿಯೂ ಸಹ ಅತ್ಯಂತ ಪ್ರಚಲಿತದಲ್ಲಿರುವ ಕಾಯಿಲೆ. ಇದರ ಕುರಿತು ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್, ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಮತ್ತು ಇಂದೋರ್ ಕ್ಯಾನ್ಸರ್ ಫೌಂಡೇಶನ್‌ನ ಸಂಸ್ಥಾಪಕ ಡಾ. ದಿಗ್ಪಾಲ್ ಧಾರ್ಕರ್ ಒಂದಿಷ್ಟು ವಿಷಯಗಳನ್ನು ತಿಳಿಸಿದ್ದಾರೆ.

ಕರುಳಿನ ಕ್ಯಾನ್ಸರ್,ಕಾರಣಗಳು ಮತ್ತು ರೋಗಲಕ್ಷಣಗಳು ಯಾವುವು?

  • ಈ ಕ್ಯಾನ್ಸರ್​ಗೆ ವಯಸ್ಸಿನ ಮಿತಿ ಇಲ್ಲ ಆದರೆ ಇದು ಹೆಚ್ಚಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತದೆ.
  • ಸಾಮಾನ್ಯವಾಗಿ ಇದು ದೊಡ್ಡ ಕರುಳಿನ ಗೋಡೆಯ ಒಳಗಿನ ಪದರದಲ್ಲಿ ಸಂಭವಿಸುತ್ತದೆ.
  • ಜಡ ಜೀವನಶೈಲಿ ವಿಶೇಷವಾಗಿ ಕೆಟ್ಟ ಆಹಾರವು ಕರುಳಿನ ಕ್ಯಾನ್ಸರ್​ಗೆ ದೊಡ್ಡ ಕಾರಣ.

ಇದಲ್ಲದೇ ಕೆಂಪು ಮಾಂಸ ಅಥವಾ ಕಾರ್ಸಿನೋಜೆನಿಕ್ ಪರಿಣಾಮವನ್ನು ಹೊಂದಿರುವ ಇತರ ಆಹಾರಗಳು ಅಂದರೆ ಕ್ಯಾನ್ಸರ್ - ಹೆಚ್ಚಿಸುವ ವಸ್ತುಗಳು ಕರುಳಿನ ಕ್ಯಾನ್ಸರ್​ ರೋಗಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಂತೂ ಜನರು ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ಸ್ಯಾಚುರೇಟೆಡ್​ನಂತಹ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ ಹಾಗಾಗಿ ಇದು ಕೂಡ ದೇಹದಲ್ಲಿ ಕರುಳಿನ ಕ್ಯಾನ್ಸರ್ ಮಾತ್ರವಲ್ಲದೇ ಇತರ ರೀತಿಯ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ.

ಕರುಳಿನ ಕ್ಯಾನ್ಸರ್ ಲಕ್ಷಣಗಳು: ಕರುಳಿನ ಚಲನೆಯಲ್ಲಿ ತೊಂದರೆ ಅನುಭವಿಸುತ್ತದ್ದರೆ ಅದರ ಸಂಬಂಧಿ ನಿರಂತರ ಸಮಸ್ಯೆಗಳು ಜೊತೆಗೆ ಮುಖ್ಯವಾಗಿ ಹೊಟ್ಟೆಯು ಶುದ್ಧವಾಗಿಲ್ಲದಿರುವುದು ಕರುಳಿನ ಕ್ಯಾನ್ಸರ್​ನ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಡಾ. ಧಾರ್ಕರ್ ವಿವರಿಸುತ್ತಾರೆ. ಅಲ್ಲದೇ ಮಲದಲ್ಲಿ ರಕ್ತ ಅಥವಾ ಮಲದಲ್ಲಿ ಸಣ್ಣ ಅಥವಾ ದೊಡ್ಡ ಮಟ್ಟದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ನಿರಂತರ ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ಕ್ಯಾನ್ಸರ್​ನ ಲಕ್ಷಣಗಳಾಗಿ ಪರಿಣಮಿಸುತ್ತದೆ.

ಜೊತೆಗೆ ನಿಮ್ಮ ಆರೋಗ್ಯದಲ್ಲಿ ಹೊಟ್ಟೆ ನೋವಿನ ಸಮಸ್ಯೆಗಳು ಅಥವಾ ಚಡಪಡಿಕೆ ಆಗುವಂತದ್ದು, ತೂಕವನ್ನು ಕಳೆದುಕೊಳ್ಳುತ್ತಿದ್ದರೆ, ದಣಿದ ಭಾವನೆ ಮತ್ತು ಹಸಿವಾಗದಿರುವುದು ಇವೆಲ್ಲವು ಅದೇ ರೋಗದ ಲಕ್ಷಣಗಳಾಗಿರುತ್ತದೆ.

ಈ ಕಾಯಿಲೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಯಾವುದೇ ರೀತಿಯ ಕ್ಯಾನ್ಸರ್, ವಿಶೇಷವಾಗಿ ಕರುಳಿನ ಕ್ಯಾನ್ಸರ್​ ಅನ್ನು ತಡೆಯಬಹುದು ಎಂದು ಡಾ.ಧಾರ್ಕರ್ ವಿವರಿಸುತ್ತಾರೆ. ಹಸಿರು ತರಕಾರಿಗಳು, ಕಾಳುಗಳು, ಧಾನ್ಯಗಳು ಮತ್ತು ಸಲಾಡ್‌ಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ ಯಾಕೆಂದರೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ.

ನಾವು ಇದೇ ರೀತಿಯ ಆಹಾರಕ್ರಮವನ್ನು ಅನುಸರಿಸಿ ಕಾರ್ಸಿನೋಜೆನಿಕ್ ರೀತಿಯ ಆಹಾರಗಳನ್ನು ಕಡಿಮೆ ಮಾಡಿದರೆ, ಹೊಟ್ಟೆಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದರೊಂದಿಗೆ ಕ್ಯಾನ್ಸರ್​ನಿಂದಲೂ ಪರಾಗಬಹುದಾಗಿದೆ.

ಇದಲ್ಲದೇ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಧೂಮಪಾನ ಮತ್ತು ಮಾದಕ ದ್ರವ್ಯಗಳನ್ನು ಬಳಕೆಯನ್ನು ಬಿಡುವುದು ಉತ್ತಮ. ಎಲ್ಲಕ್ಕಿಂತ ದಿನನಿತ್ಯ ನಿಯಮಿತ ವ್ಯಾಯಾಮವನ್ನು ಮಾಡುವುದು ಹೆಚ್ಚು ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ದಿನಚರಿಯನ್ನು ಅನುಸರಿಸುವುದು ಮತ್ತು ತಿಂಗಳಿಗೊಮ್ಮೆಯಾದರು ಆರೋಗ್ಯ ಪ್ರಜ್ಞೆಯಿಂದ ನಿಯಮಿತ ತಪಾಸಣೆಗೆ ಒಳಗಾದರೆ ಕರುಳಿನ ಕ್ಯಾನ್ಸರ್ ಅಲ್ಲದೇ ಎಲ್ಲ ಆರೋಗ್ಯ ಸಮಸ್ಯೆಯಿಂದ ನಿಮ್ಮನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಡಾ. ದಿಗ್ಪಾಲ್ ಧಾರ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ; ಭಾರತದಲ್ಲಿ ಹೆಚ್ಚುತ್ತಿದೆ ಅನಿರೀಕ್ಷಿತ ಹೃದಯಾಘಾತ, ಪಾರ್ಶ್ವವಾಯು ಪೀಡಿತರ ಸಂಖ್ಯೆ.. ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.