ETV Bharat / sports

1970ರ ದಶಕದ ಖ್ಯಾತ ಅಥ್ಲೆಟಿಕ್ಸ್​ ಕರ್ನಾಟಕದ ಕೆನ್ನೆತ್ ಪೊವೆಲ್ ನಿಧನ.. ಎಎಫ್​ಒ ಸಂತಾಪ

1970ರ ದಶಕದ ಸ್ಪ್ರಿಂಟರ್​ ಆಗಿದ್ದ ಒಲಂಪಿಯನ್​, ಏಷ್ಯನ್​ ಗೇಮ್ಸ್​ ಕಂಚಿನ ಪದಕ ವಿಜೇತ ಕರ್ನಾಟಕದ ಕೋಲಾರ ಜಿಲ್ಲೆಯ ಕೆನ್ನೆತ್ ಪೊವೆಲ್ ಅವರು ಬೆಂಗಳೂರಿನಲ್ಲಿ ಭಾನುವಾರ ನಿಧನರಾದರು.

kenneth-powell-passes-away
ಕೆನ್ನೆತ್ ಪೊವೆಲ್ ನಿಧನ
author img

By

Published : Dec 12, 2022, 9:58 AM IST

ನವದೆಹಲಿ: ಒಲಿಂಪಿಯನ್ ಮತ್ತು 1970 ರ ಏಷ್ಯನ್ ಗೇಮ್ಸ್ 4x100 ಮೀ ರಿಲೇ ಕಂಚಿನ ಪದಕ ವಿಜೇತ ಕರ್ನಾಟಕದ ಕೆನ್ನೆತ್ ಪೊವೆಲ್ ಅವರು ವಯೋಸಹಜ ಕಾರಣದಿಂದಾಗಿ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇದಕ್ಕೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಸಂತಾಪ ಸೂಚಿಸಿದೆ.

ಕರ್ನಾಟಕದ ಗಡಿ ಜಿಲ್ಲೆಯಾದ ಕೋಲಾರದಲ್ಲಿ 1940 ರಲ್ಲಿ ಜನಿಸಿದ್ದ ಕೆನ್ನೆತ್​ ಪೊವೆಲ್​, ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. 1960 ರ ದಶಕದಲ್ಲಿ ದೇಶದ ಅಗ್ರ ಓಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 1964ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ 4x100 ಮೀಟರ್ಸ್ ರಿಲೇ ಓಟದಲ್ಲಿ ಭಾರತ ತಂಡ ಸೆಮಿಫೈನಲ್​ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದರ ನಂತರ 1966 ರಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪೊವೆಲ್ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ 1970 ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 4x100 ಮೀಟರ್ ರಿಲೇಯಲ್ಲಿ ಮಿಂಚಿನಂತೆ ಓಡಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದರು.

ಪ್ರಶಸ್ತಿಗಳು: ಪೊವೆಲ್​ ಅವರ ಚಿರತೆ ಓಟದಿಂದ ನ್ಯಾಷನಲ್ ಓಪನ್ ಚಾಂಪಿಯನ್‌ಶಿಪ್ ಮತ್ತು ನ್ಯಾಷನಲ್ ಇಂಟರ್‌ಸ್ಟೇಟ್ ಗೇಮ್ಸ್‌ ಸೇರಿದಂತೆ 19 ಪ್ರಶಸ್ತಿಗಳನ್ನು ಗೆದ್ದಿದ್ದರು. ಅರ್ಜುನ್​ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪೊವೆಲ್ ಅವರ ನಿಧನಕ್ಕೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ.

ಓದಿ: ಎರಡನೇ ಟಿ20: ಸೂಪರ್ ಓವರ್​ನಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತದ ವನಿತೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.