ETV Bharat / sports

ವಿಶ್ವ ಬಾಕ್ಸಿಂಗ್​​ ಚಾಂಪಿಯನ್‌ಶಿಪ್‌: ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ನಿಖತ್ ಜರೀನ್ - ನಿಖತ್ ಜರೀನ್

ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್​​ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಬಾಕ್ಸರ್ ನಿಖತ್ ಜರೀನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

nikhat-starts-campaign-with-scintillating-win-cruises-to-second-round
ವಿಶ್ವ ಬಾಕ್ಸಿಂಗ್​​ ಚಾಂಪಿಯನ್‌ಶಿಪ್‌ : ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ನಿಖತ್ ಜರೀನ್
author img

By

Published : Mar 16, 2023, 7:21 PM IST

ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್​ (ಐಬಿಎ)ನ ಮಹಿಳಾ ವಿಶ್ವ ಬಾಕ್ಸಿಂಗ್​​ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್, ಭಾರತದ ಭರವಸೆಯ ಬಾಕ್ಸರ್ ನಿಖತ್ ಜರೀನ್ ಗೆಲುವಿನ ಮೂಲಕ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. 50 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಅನಾಖನಿಮ್ ಇಸ್ಮಾಯಿಲೋವಾ ವಿರುದ್ಧ ಆರ್‌ಎಸ್‌ಸಿ (referee stops contest) ನೊಂದಿಗೆ ಜಯ ಸಾಧಿಸಿದ್ದಾರೆ.

ಇಲ್ಲಿನ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನಿಖತ್ ಜರೀನ್ ಆರಂಭದಲ್ಲಿ ಎದುರಾಳಿ ಅನಾಖನಿಮ್ ಇಸ್ಮಾಯಿಲೋವಾ ಅವರನ್ನು ನಿರ್ಣಯಿಸಲು ಸಮಯ ತೆಗೆದುಕೊಂಡರು. ಆದರೆ, ಒಮ್ಮೆ ಅಜೆರ್ಬೈಜಾನ್ ಆಟಗಾರ್ತಿಯ ಆಟವನ್ನು ಅರಿತುಕೊಂಡ ನಿಖತ್ ಜರೀನ್ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: IND vs AUS, ODI Series: ವಿಶ್ವಕಪ್​ ತಯಾರಿ, ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ

ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ, ಹಾಲಿ ಚಾಂಪಿಯನ್ ಆಗಿರುವ ನಿಖತ್, ನಮ್ಮ ಎದುರಾಳಿಯ ಮೇಲೆ ಕಾಂಬಿನೇಷನ್ ಪಂಚ್‌ಗಳ ಸುರಿಮಳೆಯನ್ನೇ ಹರಿಸಿದರು. ತಮ್ಮ ಆಕ್ರಮಣಕಾರಿ ಅತ್ಯುತ್ತಮ ಪ್ರದರ್ಶನ ನೀಡಿದರು. ರಿಂಗ್‌ನಲ್ಲಿ ಸ್ಪಷ್ಟ ಪ್ರಾಬಲ್ಯ ಪ್ರದರ್ಶಿಸಿದರು. ಎರಡನೇ ಸುತ್ತಿನಲ್ಲಿ ಸ್ಪರ್ಧೆಯನ್ನು ನಿಲ್ಲಿಸುವ ಮೊದಲು ರೆಫರಿ ಅಜೆರ್ಬೈಜಾನ್ ಆಟಗಾರ್ತಿ ಇಸ್ಮಾಯಿಲೋವಾಗೆ ಮೂರು ಬಾರಿ ಎಣಿಕೆ ಮಾಡಿ ಎದ್ದೇಳಲು ಅವಕಾಶ ನೀಡಬೇಕಾಗಿತ್ತು.

ಗೆಲುವಿನ ಓಟ ಮುಂದುವರಿಸುತ್ತೇನೆ- ನಿಖತ್ ಜರೀನ್ ಪಂದ್ಯದ ನಂತರ ತಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಮಾತನಾಡಿದ ನಿಖತ್ ಜರೀನ್, ಭಾರತದ ಗೆಲುವಿನೊಂದಿಗೆ ಮೊದಲ ದಿನ ಆರಂಭಗೊಂಡಿರುವುದು ಸಂತಸ ತಂದಿದೆ. ಇಂದಿನ ಪಂದ್ಯದಲ್ಲಿ ಬೌಟ್ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮುಂಬರುವ ಪಂದ್ಯಗಳಲ್ಲೂ ನನ್ನ ಗೆಲುವಿನ ಓಟವನ್ನು ಮುಂದುವರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 32ರ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ 2022ರ ಆಫ್ರಿಕನ್ ಚಾಂಪಿಯನ್ ರೌಮೈಸಾ ಬೌಲಮ್ ಅವರನ್ನು ಜರೀನ್​ ಎದುರಿಸಲಿದ್ದಾರೆ. ಈ ಕುರಿತ ಪ್ರತಿಕ್ರಿಯಿಸಿದ ಅವರು, ನನಗೆ ಆ ಬಾಕ್ಸರ್ ರೌಮೈಸಾ ಬೌಲಮ್ ಮಾಹಿತಿ ಇದೆ. ಆದರೆ, ನಾನು ಅವರ ವಿರುದ್ಧ ಆಡಿಲ್ಲ. ಸದ್ಯ ಭಾರತದ ಮೊದಲ ಬೌಟ್ ನನ್ನೊಂದಿಗೆ ಪ್ರಾರಂಭವಾಗಿದೆ. ಇದು ನನಗೆ ಸಂತೋಷವಾಗಿದೆ. ಗೆಲುವಿನೊಂದಿಗೆ ಪಂದ್ಯ ಕೊನೆಗೊಳಿಸುವುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.

ಶ್ರೇಯಾಂಕ ರಹಿತ ಆಟಗಾರ್ತಿಯಾಗಿರುವ ನಿಖತ್ ಜರೀನ್, ಕಳೆದ ವರ್ಷ 52 ಕೆಜಿ ತೂಕ ವಿಭಾಗದಲ್ಲಿ ನಿಖತ್ ಚಿನ್ನ ಗೆದ್ದಿದ್ದರು. ಆದರೆ, ಈ ವರ್ಷ ಅವರು 50 ಕೆಜಿ ವಿಭಾಗಕ್ಕೆ ಬದಲಾಗಿದ್ದಾರೆ. ಮತ್ತೊಂದೆಡೆ, 52 ಕೆಜಿ ವಿಭಾಗದಲ್ಲಿ ಸಾಕ್ಷಿ ಪ್ರಾಥಮಿಕ ಸುತ್ತಿನಲ್ಲಿ ಕೊಲಂಬಿಯಾದ ಜೋಸ್ ಮರಿಯಾ ಮಾರ್ಟಿನೆಜ್ ಅವರನ್ನು 5-0 ಅಂತರದಿಂದ ಅವಿರೋಧವಾಗಿ ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಸಾಕ್ಷಿ ಮತ್ತು ಜೋಸ್ ವೇಗದ ಕಾದಾಟಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಡೇವಿಡ್ ವಾರ್ನರ್ ಅರಸಿ ಬಂದ ಅದೃಷ್ಟ! ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.