ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿರುವ ಪುರುಷರ ಜಾವಲಿನ್ ಥ್ರೋ ಶ್ರೇಯಾಂಕದಲ್ಲಿ 2022ರ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ವಿಶ್ವದ ನಂಬರ್ ಒನ್ ಎಸೆತ ಗಾರರಾಗಿ ಸ್ಥಾನ ಪಡೆದಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನೀರಜ್ ವಿಶ್ವದ ನಂಬರ್ 1 ಆಟಗಾರಾಗಿ ಹೊರ ಹೊಮ್ಮಿದ್ದಾರೆ. ಸದ್ಯ ಚೋಪ್ರಾ 1,455 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಗ್ರಾನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ (1,433) ಅವರಿಗಿಂತ 22 ಅಂಕ ಮುಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಜ್ 1,416 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
25 ವರ್ಷದ ಚೋಪ್ರಾ ಕಳೆದ ವರ್ಷ ಆಗಸ್ಟ್ 30 ರಂದು ಬಿಡುಗಡೆಯಾಗಿದ್ದ ಜಾವಲಿನ್ ಥ್ರೋ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದರು. ಬಳಿಕ ಪೀಟರ್ಸ್ ಅನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಋತುವನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿರುವ ಚೋಪ್ರಾ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನ ಜಾವಲಿನ್ ಥ್ರೋ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 88.67 ಮೀಟರ್ ದೂರದವರೆಗೆ ಥ್ರೋ ಮಾಡುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ 2022 ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದರು. ಲೀಗ್ನಲ್ಲಿ 89.63 ಮೀಟರ್‌ಗಳಷ್ಟು ದೂರಕ್ಕೆ ಜಾವಲಿನ್ ಎಸೆದು ಮೊದಲ ಸ್ಥಾನ ಪಡೆದಿದ್ದರು. ಈ ಮೂಲಕ ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ನಂತರ ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ದೂರಉಳಿದಿದ್ದರು.
ಇದೀಗ ನೆದರ್‌ಲ್ಯಾಂಡ್ಸ್‌ನಲ್ಲಿ ಜೂನ್ 4 ರಂದು ನಡೆಯಲಿರುವ FBK ಗೇಮ್ಸ್ 2023 ರಲ್ಲಿ ಸ್ಪರ್ಧಿಸಲಿರುವ ನೀರಜ್ ಚೋಪ್ರಾಗೆ ನಂ.1 ಶ್ರೇಯಾಂಕವು ಮತ್ತಷ್ಟು ಬಲ ನೀಡಲಿದೆ. ಇದಾದ ಬಳಿಕ ಜೂನ್ 13 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ಪಾವೊ ನೂರ್ಮಿ ಗೇಮ್ಸ್ 2023ರ ಲೀಗ್ನಲ್ಲೂ ಅವರು ಭಾಗವಹಿಸುವುದಾಗಿ ಹೇಳಿದ್ದಾರೆ.
-
Many congratulations to @Neeraj_chopra1 on attaining the World Number 1 Rank in Men’s Javelin throw category.
— Mallikarjun Kharge (@kharge) May 23, 2023 " class="align-text-top noRightClick twitterSection" data="
Every Indian is proud of your extraordinary achievement !
Your hard work and never give up attitude has earned this feat.
Best wishes for future endeavours. pic.twitter.com/eBfgmqLYIH
">Many congratulations to @Neeraj_chopra1 on attaining the World Number 1 Rank in Men’s Javelin throw category.
— Mallikarjun Kharge (@kharge) May 23, 2023
Every Indian is proud of your extraordinary achievement !
Your hard work and never give up attitude has earned this feat.
Best wishes for future endeavours. pic.twitter.com/eBfgmqLYIHMany congratulations to @Neeraj_chopra1 on attaining the World Number 1 Rank in Men’s Javelin throw category.
— Mallikarjun Kharge (@kharge) May 23, 2023
Every Indian is proud of your extraordinary achievement !
Your hard work and never give up attitude has earned this feat.
Best wishes for future endeavours. pic.twitter.com/eBfgmqLYIH
ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ.. ಪುರುಷರ ಜಾವಲಿನ್ ಥ್ರೋ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ನೀರಜ್ ಚೋಪ್ರಾ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಅಭಿನಂದಿಸಿದ್ದಾರೆ ಮತ್ತು ಅವರ ಸಾಧನೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುತ್ತಾರೆ ಎಂದು ಹೇಳಿದರು.
ಈ ಕುರಿತು ಟ್ವಿಟ್ ಮಾಡಿರುವ ಖರ್ಗೆ, '' ಚೋಪ್ರಾ ಅವರ ಕಠಿಣ ಪರಿಶ್ರಮ ಮತ್ತು ಛಲದ ಮನೋಭಾವವು ಈ ಸಾಧನೆ ಮಾಡಲು ಕಾರಣವಾಗಿದೆ. ಪುರುಷರ ಜಾವಲಿನ್ ಥ್ರೋ ವಿಭಾಗದಲ್ಲಿ ವಿಶ್ವ ನಂಬರ್ 1 ರ್ಯಾಂಕ್ ಗಳಿಸಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯರೂ ನಿಮ್ಮ ಅಸಾಧಾರಣ ಸಾಧನೆಗೆ ಹೆಮ್ಮೆ ಪಡುತ್ತಾರೆ! ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು" ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಇಂದು IPL ಕ್ವಾಲಿಫೈಯರ್: ಹಾರ್ದಿಕ್ vs ದೋನಿ- ಯಾರಿಗೆ ಸಿಗಲಿದೆ ಫೈನಲ್ ಟಿಕೆಟ್?