ಮೆಲ್ಬೋರ್ನ್ : ವಿಶ್ವದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ಪೇನ್ನ ರಾಫೆಲ್ ನಡಾಲ್ 3ನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
2ನೇ ಸುತ್ತಿನ ಪಂದ್ಯದಲ್ಲಿ 126ನೇ ಶ್ರೇಯಾಂಕದ ಜರ್ಮನ್ನ ಯನ್ನಿಕ್ ಹ್ಯಾನ್ಫ್ಮ್ಯಾನ್ ವಿರುದ್ಧ 2 ಗಂಟೆ 42 ನಿಮಿಷಗಳ ಕಾಲ ನಡೆದ 6-2,6-3 ಮತ್ತು 6-4 ರಲ್ಲಿ ಜಯ ಸಾಧಿಸಿದರು.
ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದಿರುವ ನಡಾಲ್ ತಮ್ಮ ಮುಂದಿನ ಸುತ್ತಿನಲ್ಲಿ 28ನೇ ಶ್ರೇಯಾಂಕದ ರಷ್ಯನ್ ಆಟಗಾರ ಕರೆನ್ ಖಚನೊವ್ ವಿರುದ್ಧ ಶುಕ್ರವಾರ ಕಾದಾಡಲಿದ್ದಾರೆ.
ಈಗಾಗಲೇ ಸ್ಪೇನ್ ಸ್ಟಾರ್ 20 ಗ್ರ್ಯಾಂಡ್ ಸ್ಲಾಮ್ ಗೆದ್ದು ಸರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ ಜೊತೆಯಲ್ಲಿ ಅತ್ಯಧಿಕ ಗ್ರ್ಯಾಂಡ್ಸ್ಲಾಮ್ ಗೆದ್ದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ಗಾಯದ ಕಾರಣ ಫೆಡರರ್ ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿದಿದ್ದರೆ, ಜೊಕೊವಿಕ್ ಕೋವಿಡ್ ಲಸಿಕೆ ಪಡೆಯದಿದ್ದರಿಂದ ಆಸ್ಟ್ರೇಲಿಯಾ ಸರ್ಕಾರ ಗಡಿಪಾರು ಮಾಡಿತ್ತು.
ಇದನ್ನೂ ಓದಿ:ಟೆನಿಸ್ ಅಭಿಮಾನಿಗಳಿಗೆ ಶಾಕ್... ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಾನಿಯಾ ಮಿರ್ಜಾ