ETV Bharat / sports

2ನೇ ಸೆಮೀಸ್​ನಲ್ಲಿ ಮೊರಾಕ್ಕೊ ಫ್ರಾನ್ಸ್​ ಫೈಟ್​: ಫೈನಲ್​​​​​ನಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸೋರ್‍ಯಾರು?

ಫಿಫಾ ವಿಶ್ವಕಪ್​ನಲ್ಲಿ ಇಂದು ಮಧ್ಯರಾತ್ರಿ ನಡೆಯುವ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ಮತ್ತು ಫ್ರಾನ್ಸ್​ ಸೆಣಸಾಡಲಿವೆ. ಗೆಲ್ಲುವ ತಂಡ ಪೈನಲ್​ಗೇರುವ ಮೂಲಕ ಅರ್ಜೆಂಟೀನಾ ವಿರುದ್ಧ ಪ್ರಶಸ್ತಿಗಾಗಿ ಗುದ್ದಾಟ ನಡೆಸಲಿದೆ.

morocco-vs-france-second-semi-final
2ನೇ ಸೆಮೀಸ್​ನಲ್ಲಿ ಮೊರಾಕ್ಕೊ ಫ್ರಾನ್ಸ್​ ಫೈಟ್
author img

By

Published : Dec 14, 2022, 1:28 PM IST

ದೋಹಾ: ಕ್ರೊಯೇಷಿಯಾವನ್ನು ಮಣಿಸಿ ಫೈನಲ್​ ತಲುಪಿರುವ ಅರ್ಜೆಂಟೀನಾ ವಿರುದ್ಧ ಫೈನಲ್​ನಲ್ಲಿ ಸೆಣಸಾಡಲು ಇಂದಿನ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ಮತ್ತು ಮೊರಾಕ್ಕೊ ಕಾದಾಡಲಿವೆ. ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್​, ಮೊದಲ ಬಾರಿಗೆ ಫೈನಲ್​ ಪ್ರವೇಶಿಸಲು ಹಾತೊರೆಯುತ್ತಿರುವ ಮೊರಾಕ್ಕೊ ಮಧ್ಯೆ ಅದೃಷ್ಟ ಯಾರ ಪರವಾಗಿದೆ ಎಂಬುದು ಮಧ್ಯರಾತ್ರಿ ಗೊತ್ತಾಗಲಿದೆ.

2018ರ ವಿಶ್ವಕಪ್​ ಜಯಿಸಿರುವ ಫ್ರಾನ್ಸ್​ ಮತ್ತೊಂದು ಫಿಫಾ ಪ್ರಶಸ್ತಿ ಜಯಿಸಲು ತಯಾರಿ ನಡೆಸಿದ್ದರೆ, ಮೊದಲ ಬಾರಿಗೆ ಸೆಮಿಫೈನಲ್‌ಗೆ ಬಂದಿರುವ ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರ ಮೊರಾಕ್ಕೊ ಫೈನಲ್​ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸುವ ತುದಿಗಾಲಲ್ಲಿದೆ.

ಫ್ರಾನ್ಸ್ ಇದುವರೆಗೆ ಒಟ್ಟು 3 ಬಾರಿ ಫೈನಲ್ ತಲುಪಿದ್ದು, ಈ ಪೈಕಿ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. 2022ರ ಫಿಫಾ ವಿಶ್ವಕಪ್ ಗೆದ್ದರೆ ಬ್ರೆಜಿಲ್ ದಾಖಲೆ ಸರಿಗಟ್ಟಲಿದೆ. ಬ್ರೆಜಿಲ್ ಈ ಹಿಂದೆ 1958 ಮತ್ತು 1962 ರಲ್ಲಿ ಸತತ ಎರಡು ಬಾರಿ ಫುಟ್ಬಾಲ್​ನ ಅತ್ಯುನ್ನತ ಪ್ರಶಸ್ತಿ ಜಯಿಸಿದೆ.

ಗೋಲ್ಡನ್ ಬೂಟ್‌ ರೇಸ್​ನಲ್ಲಿರುವ ಓಲಿವಿಯರ್​ ಗಿರೌಡ್

ಫ್ರಾನ್ಸ್​ಗೆ ಸೆಮೀಸ್​ ಕಂಟಕ: ಫ್ರಾನ್ಸ್​ ಇದುವರೆಗೂ ಮೂರು ಬಾರಿ ಸೆಮೀಸ್​ನಲ್ಲಿ ಸೋಲು ಕಂಡಿದೆ. 1958, 1982, 1986 ರಲ್ಲಿ ಸೆಮಿಫೈನಲ್​ ಬಂದು ಸೋಲು ಕಂಡಿತ್ತು. ಮೂರು ಫೈನಲ್​ ಆಡಿದ್ದು ಎರಡು (1998, 2018) ಬಾರಿ ಪ್ರಶಸ್ತಿ ಜಯಿಸಿದೆ. ಯುವತಾರೆ ಕೀಲಿಯಸ್​ ಎಂಬಾಪೆ, ಓಲಿವಿಯರ್​ ಗಿರೌಡ್​ ವಿಶ್ವಕಪ್​ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ್ದು, ಗಿರೌಡ್​ ಗೋಲ್ಡನ್ ಬೂಟ್‌ಗಾಗಿ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಕೈಲಿಯನ್ ಎಂಬಪ್ಪೆ ಈ ವಿಶ್ವಕಪ್‌ನಲ್ಲಿ ಎರಡು ಅದ್ಭುತ ಗೋಲುಗಳನ್ನು ಬಾರಿಸಿದ್ದು, ಈವರೆಗೂ 9 ಗೋಲು ದಾಖಲಿಸಿದ್ದಾರೆ. ಇದು ದಿಗ್ಗಜ ಆಟಗಾರ ಪೀಲೆ ಅವರ 7 ಗೋಲುಗಳ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಅವರು ತಮ್ಮ ವೃತ್ತಿಜೀವನದಲ್ಲಿ ಮಾಡಿದ ಸಾಧನೆಯನ್ನು ಎಂಬಾಪ್ಪೆ ಕೇವಲ 24 ನೇ ವಯಸ್ಸಿನಲ್ಲಿಯೇ ಸಾಧಿಸಿದ್ದಾರೆ.

ಮೊರಾಕ್ಕೊಗೆ ದಾಖಲೆ ಸೃಷ್ಟಿಸುವ ತವಕ: ಇದೇ ಮೊದಲ ಬಾರಿಗೆ ಸೆಮಿಫೈನಲ್​ ತಲುಪಿರುವ ದಕ್ಷಿಣ ಆಫ್ರಿಕಾ ತಂಡವಾದ ಮೊರಾಕ್ಕೊ ಫೈನಲ್​ ತಲುಪುವ ಧಾವಂತದಲ್ಲಿದೆ. ಕ್ವಾರ್ಟರ್​ ಫೈನಲ್​ನಲ್ಲಿ ವಿಶ್ವದ ಬಲಿಷ್ಠ ಪೋರ್ಚುಗಲ್​ ತಂಡವನ್ನು ಮಣಿಸಿ ಸೆಮೀಸ್​ಗೇರಿದೆ. ಇದೇ ಉತ್ಸಾಹದಲ್ಲಿ ಫ್ರಾನ್ಸ್​ ತಂಡವನ್ನು ಮೀರಿಸಿ ಫೈನಲ್​ ಕನಸು ಕಾಣುತ್ತಿದೆ.

ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮೊರಾಕ್ಕೊ ಆಟಗಾರರನ್ನು ತಡೆಯುವುದು ಸ್ವಲ್ಪ ಕಷ್ಟವೇ ಎಂದು ಫ್ರಾನ್ಸ್​ ಕೋಚ್​ ಒಪ್ಪಿಕೊಂಡಿದ್ದಾರೆ. ಮೊರಾಕ್ಕೊದ ಗೋಲ್​ಕೀಪರ್​ ಸಾಹಸದಿಂದ ಈವರೆಗೂ ತಂಡ ಒಂದೇ ಒಂದು ಗೊಲು ಬಿಟ್ಟುಕೊಟ್ಟಿಲ್ಲ. ಒಂದು ಗೋಲು ದಾಖಲಾಗಿದ್ದರೂ ಅದು ತಂಡದ ಆಟಗಾರನ ತಪ್ಪಿನಿಂದಲೇ ಸ್ವತಃ ಗೋಲು ಬಿಟ್ಟುಕೊಟ್ಟಿತ್ತು.

ಓದಿ: ಫಿಫಾ ವಿಶ್ವಕಪ್​: ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.