ಚಂಡೀಗಢ: ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿರುವ ಲೆಜೆಂಡರಿ ಸ್ಪ್ರಿಂಟರ್ ಮಿಲ್ಖಾ ಸಿಂಗ್ ಆರೋಗ್ಯದಲ್ಲಿ ನಿರಂತರ ಸುಧಾರಣೆ ಕಂಡುಬರುತ್ತಿದೆ ಎಂದು ಇಲ್ಲಿನ ಪಿಜಿಐ ಆಸ್ಪತ್ರೆ ಮಂಗಳವಾರ ತಿಳಿಸಿದೆ.
ಕೋವಿಡ್ 19 ಚಿಕಿತ್ಸೆಗಾಗಿ ಜೂನ್ 3ರಂದು ಐಸಿಯುಗೆ ದಾಖಲಾಗಿದ್ದ ಮಿಲ್ಖಾ ಸಿಂಗ್ ಅವರು ಪ್ರಸ್ತುತ ಮೆಡಿಕಲ್ ಪ್ಯಾರಾಮೀಟರ್ಸ್ಗಳ ಆಧರಿಸಿದರೆ ಅವರ ಪರಿಸ್ಥಿತಿಯಲ್ಲಿ ನಿರಂತರ ಸುಧಾರಣೆ ಕಂಡು ಬಂದಿದೆ ಎಂದು ಪೋಸ್ಟ್ ಗ್ರಾಜುಯೇಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರೀಸರ್ಚ್(PGIMER) ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಮಿಲ್ಖಾ ಸಿಂಗ್ ಇನ್ಸ್ಟಿಟ್ಯೂಟ್ನ ಹಿರಿಯ ಅಧಿಕಾರಿಗಳನ್ನೊಳಗೊಂಡ ವೈದ್ಯಕೀಯ ತಂಡದ ಆರೋಗ್ಯದ ವೀಕ್ಷಣೆಯಲ್ಲಿದ್ದಾರೆ ಎಂದು ಪಿಜಿಐ ವಕ್ತಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ 91 ವರ್ಷದ ಮಿಲ್ಖಾ ಸಿಂಗ್ ಕೋವಿಡ್ 19 ಪಾಸಿಟಿವ್ ದೃಢಪಟ್ಟ ನಂತರ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ವಾರವಷ್ಟೇ ಅವರು ಡಿಸ್ಚಾರ್ಜ್ ಆಗಿದ್ದರು. ಆದರೆ, ಆಮ್ಲಜನದ ಪ್ರಮಾಣದ ಕುಸಿದ ಹಿನ್ನೆಲೆ ಅವರನ್ನು ಜೂನ್ 3ರಂದು PGIMERಗೆ ದಾಖಲಿಸಲಾಗಿತ್ತು.
ಕೋವಿಡ್ 19ನಿಂದ ಬಳಲುತ್ತಿರುವ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲಾ ಕೌರ್ ಇನ್ನೂ ಫೋರ್ಟಿಸ್ ಆಸ್ಪತ್ರೆಯ್ಲಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ಭಾರತಕ್ಕಿಂತ ಕಿವೀಸ್ WTC ಫೈನಲ್ ಗೆಲ್ಲುವ ನೆಚ್ಚಿನ ತಂಡ: ಆದರೆ ಕೊಹ್ಲಿ ಟಾಪ್ ಸ್ಕೋರರ್ : ಅಗರ್ಕರ್ ವಿಶ್ವಾಸ