ETV Bharat / sports

ರಾಷ್ಟ್ರೀಯ ಗೇಮ್ಸ್​​ನ ಟಿಟಿಯಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮಾನ್ವ - ದೇಸಾಯಿ - ಮಾನ್ವ ಹಾಗೂ ದೇಸಾಯಿ ಚಿನ್ನದ ಪದಕ

ಗುಜರಾತ್​ನ ಸೂರತ್​ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗೇಮ್ಸ್​ನಲ್ಲಿ ಸ್ಥಳೀಯ ಜೋಡಿ ಮಾನ್ವ ಹಾಗೂ ದೇಸಾಯಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Manav Thakkar and Harmeet Desai
Manav Thakkar and Harmeet Desai
author img

By

Published : Sep 23, 2022, 12:13 PM IST

ಸೂರತ್​​(ಗುಜರಾತ್​): ಸೂರತ್​ನಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್​​ ಪುರುಷರ ಟೇಬಲ್​ ಟೆನ್ನಿಸ್​​​ನಲ್ಲಿ ಮಾನ್ವ ಠಕ್ಕರ್ ಹಾಗೂ ಹರ್ಮೀತ್​ ದೇಸಾಯಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಪದಕವನ್ನ ಸೂರತ್​ ಜನರಿಗೆ ಅರ್ಪಣೆ ಮಾಡಿದ್ದಾರೆ. ಸೂರತ್​​​ನಲ್ಲಿ ನಡೆದ 36ನೇ ರಾಷ್ಟ್ರೀಯ ಗೇಮ್ಸ್​​​ನಲ್ಲಿ ಭಾಗಿಯಾಗಿದ್ದ ಈ ಜೋಡಿ ಟಿಟಿ ಪುರುಷರ ವಿಭಾಗದಲ್ಲಿ ಎದುರಾಳಿ ದೆಹಲಿ ಆಟಗಾರರ ವಿರುದ್ಧ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದೆ.

ಇದನ್ನೂ ಓದಿ: IND vs AUS 2nd T20: ಸರಣಿ ಗೆಲುವಿನತ್ತ ಕಾಂಗರೂ ಚಿತ್ತ.. ತಿರುಗೇಟು ನೀಡುತ್ತಾ ರೋಹಿತ್​ ಬಳಗ?

ಚಿನ್ನ ಗೆದ್ದ ಬೆನ್ನಲ್ಲೇ ಮಾತನಾಡಿದ ಮಾನ್ವ ಠಕ್ಕರ್​, ಗೇಮ್ಸ್​​ನಲ್ಲಿ ಚಿನ್ನ ಗೆದ್ದಿರುವುದು ಸಂತಸ ಮೂಡಿಸಿದೆ. ಪದಾರ್ಪಣೆ ಟೂರ್ನಿಯಲ್ಲೇ ಪದಕಕ್ಕೆ ಮುತ್ತಿಕ್ಕಿದ್ದು, ನನ್ನ ಉತ್ಸಾಹವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ. ನಾನು ಕೇವಲ ಗುಜರಾತ್​​ಗೋಸ್ಕರ ಅಲ್ಲ, ದೇಶಕ್ಕಾಗಿ ಆಡಿದ್ದೇನೆ ಎಂದರು. ಇದೇ ವೇಳೆ ಮಾತನಾಡಿರುವ ಹರ್ಮಿತ್​ ದೇಸಾಯಿ, ಸೂರತ್​ ನನಗೆ ಯಾವಾಗಲೂ ಅದೃಷ್ಟ ಕೈ ಹಿಡಿದಿದೆ. ಚಿಕ್ಕವನಾಗಿದಾಗಿನಿಂದಲೂ ನಾನು ಅನೇಕ ಟೂರ್ನಿಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.