ಕೌಲಾಲಂಪುರ್ (ಮಲೇಷ್ಯಾ): ಮಲೇಷ್ಯಾ ಮಾಸ್ಟರ್ಸ್ 2022ರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಎಂಟ್ರಿ ಕೊಟ್ಟಿದ್ದಾರೆ. 16ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಜಾಂಗ್ ಯಿಮಾನ್ ಅವರನ್ನು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಸೋಲಿಸಿದ್ದಾರೆ.
28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪಿ.ವಿ.ಸಿಂಧು 21-12, 21-10 ಅಂತರದಲ್ಲಿ ಚೀನಾದ ಜಾಂಗ್ ಯಿಮಾನ್ ಅವರನ್ನು ಮಣಿಸಿದರು. ಎರಡೂ ಸುತ್ತುಗಳಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.
ಏತನ್ಮಧ್ಯೆ, ಬಿ.ಸಾಯಿ ಪ್ರಣೀತ್ 16ರ ಸುತ್ತಿನ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಚೀನಾದ ಲಿ ಶಿಫೆಂಗ್ ವಿರುದ್ಧದ 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-14, 21-17 ಅಂತರದಲ್ಲಿ ಪ್ರಣೀತ್ ಸೋಲು ಕಂಡರು.
ಇದನ್ನೂ ಓದಿ: ವಿಂಬಲ್ಡನ್: ಹೊಟ್ಟೆನೋವಿನ ಮಧ್ಯೆಯೂ ಹೋರಾಡಿ ಸೆಮಿಫೈನಲ್ ತಲುಪಿದ ನಡಾಲ್