ETV Bharat / sports

ಕಾಮನ್​ವೆಲ್ತ್​ ಗೇಮ್ಸ್​​: ಚಿನ್ನಕ್ಕೆ ಪಂಚ್​ ನೀಡಲು ಲವ್ಲಿನಾ, ನಿಖತ್​ ಸೇರಿ 12 ಬಾಕ್ಸರ್​ಗಳ ತಂಡ ರೆಡಿ

author img

By

Published : Jun 11, 2022, 8:03 PM IST

CWG 2022.. ಟ್ರಯಲ್ಸ್​ ಪಂದ್ಯದಲ್ಲಿ ಗಾಯಗೊಂಡು ಭಾರತದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್​ ಈಗಾಗಲೇ ಕಾಮನ್​ವೆಲ್ತ್​ ಗೇಮ್ಸ್​ನಿಂದ ಹೊರಬಿದ್ದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ನಿಖತ್​ ಜರೀನ್​, ಲವ್ಲಿನಾ ಬೊರ್ಗೊಹೇನ್​ ಪದಕದ ಆಶಾಕಿರಣವಾಗಿದ್ದಾರೆ.

ಚಿನ್ನಕ್ಕೆ ಪಂಚ್​ ನೀಡಲು ಲವ್ಲಿನಾ, ನಿಖತ್​ ಸೇರಿ 12 ಬಾಕ್ಸರ್​ಗಳ ತಂಡ ರೆಡಿ

ನವದೆಹಲಿ: ಕಾಮನ್​ವೆಲ್ತ್​ ಗೇಮ್ಸ್​ಗಾಗಿ ನಡೆಸಲಾದ ಆಯ್ಕೆ ಟ್ರಯಲ್ಸ್​ನಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ಮತ್ತು ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಟ್ರಯಲ್ಸ್​​ನ ಫೈನಲ್​ ಪಂದ್ಯದಲ್ಲಿ ಈ ಇಬ್ಬರು ಮೇರು ಆಟಗಾರ್ತಿಯರು ಎದುರಾಳಿಗಳನ್ನು ಮಣಿಸಿ ತಾವು ಕಾಮನ್​ವೆಲ್ತ್​ ಗೇಮ್ಸ್​ಗೆ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ.

ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂರು 3 ದಿನಗಳ ಟ್ರಯಲ್ಸ್‌ನಲ್ಲಿ ಸ್ಟಾರ್​ ಬಾಕ್ಸರ್​ ಲವ್ಲಿನಾ, ನಿಖತ್​ ಜರೀನ್​ ಸೇರಿದಂತೆ ನಿತು (48ಕೆಜಿ) ಮತ್ತು ಜೈಸ್ಮಿನ್ (60ಕೆಜಿ) ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಟ್ರಯಲ್ಸ್​ನ ಫೈನಲ್​ ಪಂದ್ಯದಲ್ಲಿ ಲವ್ಲಿನಾ 70 ಕೆಜಿ ವಿಭಾಗದಲ್ಲಿ ಪೂಜಾ ಅವರನ್ನು ಸೋಲಿಸಿದರೆ, ನಿಖತ್ 50 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಅವರನ್ನು ಮಣಿಸಿದರು. ಇವರು ಕ್ರಮವಾಗಿ 7-0 ಅಂತರದಲ್ಲಿ ಎದುರಾಳಿ ವಿರುದ್ಧ ಜಯ ಗಳಿಸಿದರು.

ಮಂಜು ರಾಣಿ ವಿರುದ್ಧ ನಿತು ಪರಾಕ್ರಮ: ದಿನದ ರೋಚಕ ಪಂದ್ಯದಲ್ಲಿ ಬಾಕ್ಸರ್​ ನಿತು, 2019 ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ ವಿರುದ್ಧ 5-2 ರಿಂದ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ನಿತು ಸೋತರೂ, ನಂತರದ ಸುತ್ತುಗಳಲ್ಲಿ ಕಠಿಣ ಸ್ಪರ್ಧಿ ಮಂಜು ರಾಣಿಯನ್ನು ಸದೆಬಡಿದು, ಆಯ್ಕೆಗೆ ಅರ್ಹತೆ ಪಡೆದರು.

ಇನ್ನೊಂದು ಪಂದ್ಯದಲ್ಲಿ ಜೈಸ್ಮಿನ್ ಅವರು ಕೂಡ 2022 ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಪರ್ವೀನ್ ಅವರ ಎದುರು ಫೈನಲ್‌ನಲ್ಲಿ ಕಠಿಣ ಸವಾಲನ್ನು ಎದುರಿಸಿದರು. ಅಂತಿಮವಾಗಿ 6-1 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿ ಕಾಮನ್​ವೆಲ್ತ್​ ಗೇಮ್ಸ್​ಗೆ ಅರ್ಹತೆ ಪಡೆದುಕೊಂಡರು.

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯುವ ಗೇಮ್ಸ್‌ಗಾಗಿ 8 ಪುರುಷ ಬಾಕ್ಸರ್‌ಗಳು ಮತ್ತು 4 ಮಹಿಳಾ ಬಾಕ್ಸರ್​ಗಳನ್ನು ಒಳಗೊಂಡ ಭಾರತೀಯ ಬಾಕ್ಸಿಂಗ್ ತಂಡವನ್ನು ಪ್ರಕಟಿಸಿದೆ.

ಪುರುಷರ ತಂಡ ಇಂತಿದೆ: ಶಿವ ಥಾಪಾ (63.5 ಕೆಜಿ), ಅಮಿತ್ ಪಂಗಲ್ (51 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ), ರೋಹಿತ್ ಟೋಕಾಸ್ (67 ಕೆಜಿ), ಸುಮಿತ್ (75 ಕೆಜಿ), ಆಶಿಶ್ ಕುಮಾರ್ (80 ಕೆಜಿ), ಸಂಜೀತ್ (92 ಕೆಜಿ) ಮತ್ತು ಸಾಗರ್ (+92 ಕೆಜಿ) ಸ್ಥಾನ ಪಡೆದಿದ್ದಾರೆ.

ಓದಿ: IPL ಟೂರ್ನಿ ಪ್ರಸಾರದ ಹಕ್ಕು ಮಾರಾಟ: ರೇಸ್​​ನಿಂದ ಅಮೆಜಾನ್​ ಔಟ್​​.. ಸ್ಪರ್ಧೆಯಲ್ಲಿ ಸೋನಿ, ಸ್ಟಾರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.