ಅಲ್ಮಾತಿ(ಕಜಕಿಸ್ತಾನ): ಫಿಡೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್ನ ಮಹಿಳೆಯರ ವಿಭಾಗದಲ್ಲಿ ಭಾರತೀಯ ಚೆಸ್ ಆಟಗಾರ್ತಿ ಕೊನೇರು ಹಂಪಿ ಬೆಳ್ಳಿ ಪದಕ ಪಡೆದುಕೊಂಡರು. 17 ಸುತ್ತುಗಳಲ್ಲಿ 12.5 ಅಂಕಗಳನ್ನು ಪಡೆದು ಎರಡನೇ ಸ್ಥಾನವನ್ನು ಬಾಚಿಕೊಂಡರು.
ಹಂಪಿ ಅವರು ಅಂತಿಮ ಸುತ್ತಿನಲ್ಲಿ ಇತ್ತೀಚೆಗಷ್ಟೇ ವಿಶ್ವ ರ್‍ಯಾಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಝೊಂಗ್ಯಿ ತಾನ್ ಅವರನ್ನು ಸೋಲಿಸಿದರು. 13 ಅಂಕ ಪಡೆದ ಕಜಕಸ್ತಾನದ ಬಿಬಿಸಾರ ಬಾಲಬಯೆವಾ ಚಿನ್ನದ ಪದಕ ಪಡೆದುಕೊಂಡರು.
ಇದೇ ಟೂರ್ನಿಯ ಮುಕ್ತ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ 16 ಅಂಕಗಳನ್ನು ಪಡೆದು ಚಾಂಪಿಯನ್ ಆದರು. ಭಾರತದ ಯಾವ ಆಟಗಾರರೂ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಭಾರತೀಯ ಆಟಗಾರ ಪೆಂಡ್ಯಾಲ ಹರಿಕೃಷ್ಣ ಅವರು 13 ಅಂಕಗಳೊಂದಿಗೆ 17 ನೇ ಸ್ಥಾನ ಪಡೆದರು. ನಿಹಾಲ್ ಸರಿನ್ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇದನ್ನೂ ಓದಿ: ಸೌದಿ ಅರೇಬಿಯಾ ಪಾಲಾದ ಕ್ರಿಶ್ಚಿಯಾನೊ ರೊನಾಲ್ಡೊ.. ದಾಖಲೆಯ ₹4400 ಕೋಟಿ ನೀಡಿದ ಕ್ಲಬ್