ETV Bharat / sports

KIYG 2021:ಜಿಮ್ನಾಸ್ಟಿಕ್ಸ್‌ನಲ್ಲಿ 5 ಚಿನ್ನದ ಪದಕ ಮುಡಿಗೇರಿಸಿ ಕೊಂಡ ಸಂಯುಕ್ತಾ - ಖೇಲೋ ಇಂಡಿಯಾ ಯೂತ್ ಗೇಮ್ಸ್‌

ಈಗ 16 ವರ್ಷದ ಸಂಯುಕ್ತಾ ತನ್ನ ಬಾಲ್ಯದಲ್ಲಿ ಜನಪ್ರಿಯ ಕ್ರೀಡೆಗಳಾದ ಟೆನಿಸ್, ಫುಟ್ಬಾಲ್​ ಮತ್ತು ಕ್ರಿಕೆಟ್ ಸೇರಿದಂತೆ ಹಲವನ್ನು ಪ್ರಯತ್ನಿಸಿದರು. ಆದರೆ, ನಂತರ ಅವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಜಿಮ್ನಾಸ್ಟಿಕ್​. ಇದು ಮ್ಯಾಜಿಕ್‌ನಂತಿತ್ತು. ಅದರ ನಂತರ ನನಗೆ ಬೇರೆ ಯಾವುದೇ ಕ್ರೀಡೆಯ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ ಎಂದು ಸಂಯುಕ್ತಾ ಹೇಳುತ್ತಾರೆ.

Sanyukta
ಸಂಯುಕ್ತಾ ಕಾಳೆ
author img

By

Published : Jun 8, 2022, 1:32 PM IST

ಅಂಬಾಲಾ (ಹರಿಯಾಣ): ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮಹಾರಾಷ್ಟ್ರದ ಸಂಯುಕ್ತಾ ಕಾಳೆ ಅವರು ಜಿಮ್ನಾಸ್ಟಿಕ್ಸ್​ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಾನು ಯಾವುದಾದರೊಂದು ಕ್ರೀಡೆಯಲ್ಲಿ ಗುರುತಿಸಿಕೊಳ್ಳಲು ಬಾಲ್ಯದಿಂದಲೂ ಬಯಸಿದ್ದೆ. ಆದರೆ, ಇದೇ ಕ್ರೀಡೆ ಎಂದು ಗುರುತು ಮಾಡಿಕೊಂಡಿರಲಿಲ್ಲ. ಜಿಮ್ನಾಸ್ಟಿಕ್​ ಎಂ​​ದರೇನು ಎಂದು ನನಗೆ ಬಾಲ್ಯದಲ್ಲಿ ಸರಿಯಾಗಿ ಗೊತ್ತಿರಲೇ ಇಲ್ಲ ಎನ್ನುತ್ತಾರೆ ಸಂಯುಕ್ತಾ ಕಾಳೆ.

ಈಗ 16 ವರ್ಷದ ಸಂಯುಕ್ತಾ ತನ್ನ ಬಾಲ್ಯದಲ್ಲಿ ಜನಪ್ರಿಯ ಕ್ರೀಡೆಗಳಾದ ಟೆನಿಸ್, ಫುಟ್ಬಾಲ್​ ಮತ್ತು ಕ್ರಿಕೆಟ್ ಸೇರಿದಂತೆ ಹಲವನ್ನು ಪ್ರಯತ್ನಿಸಿದ್ದರು. ಆದರೆ, ನಂತರ ಅವಳು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಜಿಮ್ನಾಸ್ಟಿಕ್​​. ಇದು ಮ್ಯಾಜಿಕ್‌ನಂತಿತ್ತು. ಅದರ ನಂತರ ನನಗೆ ಬೇರೆ ಯಾವುದೇ ಕ್ರೀಡೆಯ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ ಎಂದು ಸಂಯುಕ್ತಾ ಹೇಳುತ್ತಾರೆ.

ಸಂಯುಕ್ತಾ ಅವರ ತಾಯಿ ಅರ್ಚನಾ ಕಾಳೆ ಅವರು ಭಾವಪರವಶರಾಗಿ, ‘ಅವಳು ಚೆನ್ನಾಗಿ ಜಿಮ್ನಾಸ್ಟಿಕ್ಸ್ ಮಾಡುತ್ತಾಳೆ ಎಂದು ನಾವು ನಿರೀಕ್ಷಿಸುತ್ತಿದ್ದೆವು. ಆದರೆ, ಇದು ನಿಜವಾಗಿಯೂ ನಮ್ಮ ನಿರೀಕ್ಷೆಗಳನ್ನು ಮೀರಿದ ಪ್ರದರ್ಶನ ನೀಡಿದ್ದಾರೆ’ ಎಂದು ಅವರು ಹೇಳಿದರು.

ಇದು ಆರಂಭವಷ್ಟೇ ಎಂದು ಸಂಯುಕ್ತಾ ಹೇಳುತ್ತಾರೆ. ನನ್ನ ಮೊದಲ ಗುರಿ ಭಾರತ ತಂಡವನ್ನು ಸೇರುವುದು. ಹಾಗೇ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಶಿಪ್, ವಿಶ್ವ ಚಾಂಪಿಯನ್‌ಶಿಪ್ ಭಾಗವಹಿಸುವ ಕನಸಿದೆ ಎಂದು ಹೇಳಿದ್ದಾರೆ.

ನನ್ನ ಕನಸಿನ ದಾರಿ ಸರಳವಾಗಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ, ನನ್ನ ಬಹುತೇಕ ಸಮಯವನ್ನು ಜಿಮ್ನಾಸ್ಟಿಕ್ಸ್‌ಗೆ ಮೀಸಲಿಟ್ಟಿದ್ದೇನೆ. ನಾನು ಗೆದ್ದ ಎಲ್ಲ ಪದಕಗಳಿಗೆ ನನ್ನ ಗುರು ಪೂಜಾ ಸುರ್ವೆ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರ ಮಾರ್ಗದರ್ಶನದಿಂದಾಗಿ ನಾನು ಚಾಂಪಿಯನ್​ ಆಗಿದ್ದೇನೆ ಎನ್ನುತ್ತಾರೆ ಸಂಯುಕ್ತ ಕಾಳೆ.

ಮಹಾರಾಷ್ಟ್ರ ಜಿಮ್ನಾಸ್ಟಿಕ್ ತಂಡದ ಕೋಚ್ ಪ್ರವೀಣ್ ಧಾಗೆ ಮಾತನಾಡಿ, ಸಂಯುಕ್ತಾ ಭರವಸೆಯ ಅಥ್ಲೀಟ್ ಆಗಿದ್ದಾರೆ. ಅವರಿಂದ ದೇಶಕ್ಕೆ ಇನ್ನಷ್ಟು ಪದಕಗಳ ನಿರೀಕ್ಷೆ ಮಾಡಬಹುದು. ರಿದಮಿಕ್ ಜಿಮ್ನಾಸ್ಟಿಕ್ಸ್ ಹಗ್ಗ, ಹೂಪ್, ಬಾಲ್, ಕ್ಲಬ್‌ಗಳು ಮತ್ತು ರಿಬ್ಬನ್‌ಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ ಪ್ರತಿಯೊಂದಕ್ಕೂ ಸಾಕಷ್ಟು ಚುರುಕುತನದ ಅಗತ್ಯ ಇರುತ್ತದೆ. ಸಂಯುಕ್ತಾ ಅವರು ತುಂಬಾ ಚನ್ನಾಗಿ ಇವುಗಳಲ್ಲಿ ನುರಿತವರಂತೆ ಪ್ರದರ್ಶನ ನೀಡಿದ್ದಾರೆ ಎಂದರು.

ಇದನ್ನೂ ಓದಿ: IND vs SA: ಟಿ-20 ವಿಶ್ವಕಪ್​ ದೃಷ್ಟಿಯಿಂದ ಕಾರ್ತಿಕ್​, ಹಾರ್ದಿಕ್ ಮೇಲೆ ಎಲ್ಲರ ಕಣ್ಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.