ಬೆಂಗಳೂರು: ಆಗಸ್ಟ್ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ ಆರಂಭಗೊಳ್ಳಲಿದ್ದು, ಕರ್ನಾಟಕದಿಂದ ಅರ್ಹತೆ ಪಡೆದುಕೊಂಡಿರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ.
ಈಗಾಗಲೆ ಒಲಿಂಪಿಕ್ಸ್ನಲ್ಲಿ ಭಾರತ 7 ಪದಕ ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಇದೀಗ ಭಾರತದಿಂದ 54 ಪ್ಯಾರಾ ಕ್ರೀಡಾಪಟುಗಳು ಮಹಾಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದು, ಅವರೂ ಕೂಡ ಹಿಂದಿನ ಪದಕಗಳಿಗಿಂತ ಹೆಚ್ಚು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದು, ಕ್ರಿಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ 5 ಕೋಟಿ ರೂ , ಬೆಳ್ಳಿ ಗೆದ್ದರೆ 3 ಕೋಟಿ ರೂ ಹಾಗೂ ಕಂಚಿನ ಪದಕ ಗೆದ್ದರೆ 2 ಕೋಟಿ ರೂ ಬಹುಮಾನ ನೀಡುವುದಾಗಿ ಸಚಿವ ಡಾ. ನಾರಾಯಣಗೌಡ ಸೋಮವಾರ ಘೋಷಿಸಿದ್ದಾರೆ.
ಶಕೀನ್ ಖಾತುನ್ ಪ್ಯಾರಾ ಪವರ್ ಲಿಪ್ಟಿಂಗ್‍ನ ಮತ್ತು ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 2012ರ ಪ್ಯಾರಾಲಿಂಪಿಕ್ಸ್ನಲ್ಲಿ ಕರ್ನಾಟಕದ ಗಿರೀಶ್ ಭಾರತಕ್ಕೆ ಏಕೈಕ ಪದಕ ತಂದುಕೊಟ್ಟಿದ್ದರು. ಅವರು ಹೈ ಜಂಪ್ನಲ್ಲಿ 1.74 ಮೀಟರ್ ಜಿಗಿದು ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನು ಓದಿ:Tokyo Paralympics-2020: ಇಬ್ಬರು ಸ್ಪರ್ಧಾರ್ಥಿಗಳಿಗೆ ಸನ್ಮಾನ, ತಲಾ 10ಲಕ್ಷ ರೂ. ಪ್ರೋತ್ಸಾಹಧನ