ETV Bharat / sports

ಫುಟ್ಬಾಲ್‌: 54 ವರ್ಷಗಳ ನಂತರ ಸಂತೋಷ್ ಟ್ರೋಫಿ ಗೆದ್ದು ಸಂಭ್ರಮಿಸಿದ ಕರ್ನಾಟಕ! - ETV Bharat kannada News

5 ದಶಕಗಳ ನಂತರ ಕರ್ನಾಟಕ ಫುಟ್ಬಾಲ್ ತಂಡ ಸಂತೋಷ್ ಟ್ರೋಫಿ ಗೆದ್ದುಕೊಂಡಿದೆ. ಮೇಘಾಲಯ ವಿರುದ್ಧ 3-2 ಗೋಲುಗಳ​ ಅಂತರದಲ್ಲಿ ವಿಜಯ ಸಾಧಿಸಿತು.

Karnataka Football Team
ಕರ್ನಾಟಕ ಫುಟ್ಬಾಲ್​ ತಂಡ
author img

By

Published : Mar 5, 2023, 8:45 AM IST

Updated : Mar 5, 2023, 8:54 AM IST

ರಿಯಾದ್​ (ಸೌದಿ ಅರೇಬಿಯಾ): ಕರ್ನಾಟಕ ಫುಟ್ಬಾಲ್ ತಂಡವು 54 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂತೋಷ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೇಘಾಲಯ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 3-2 ಗೋಲುಗಳ ಅಂತರದ ಗೆದ್ದ ತಂಡದ ಆಟಗಾರರು ಪ್ರತಿಷ್ಟಿತ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು. 76ನೇ ಆವೃತ್ತಿಯ ಟೂರ್ನಿಯುದ್ಧಕ್ಕೂ ಆಕರ್ಷಕ ಪ್ರದರ್ಶನ ನೀಡಿದ ರಾಜ್ಯ ತಂಡ ಕೊನೆಗೂ ಐದು ದಶಕಗಳ ಪ್ರಶಸ್ತಿ ಬರ ನೀಗಿಸಿದೆ.

ಫೈನಲ್​ ಪಂದ್ಯಾರಂಭವಾದ ಮೊದಲ ಎರಡು ನಿಮಿಷದಲ್ಲೇ ಕರ್ನಾಟಕ ಗೋಲು ಬಾರಿಸಿ ಖಾತೆ ತೆರೆಯಿತು. ಸೆಮಿಫೈನಲ್‌ನಲ್ಲಿ ಗೋಲು​ ಹೊಡೆದು ಗೆಲುವು ತಂದುಕೊಟ್ಟಿದ್ದ ಎಂ.ಸುನಿಲ್ ಕುಮಾರ್ ಮೊದಲ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ತನ್ನ ಆಕ್ರಮಣಕಾರಿ ಆಟದಿಂದಲೇ ಫೈನಲ್​ಗೇರಿದ್ದ ಮೇಘಾಲಯ ಸಮಬಲ ಸಾಧಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಕರ್ನಾಟಕದ ಆಟಗಾರ ಫೌಲ್​ ಮಾಡಿದ ಕಾರಣ ಆ ತಂಡಕ್ಕೆ 8ನೇ ನಿಮಿಷದಲ್ಲಿ ಸುಲಭವಾಗಿ ಗೋಲು​ ಹೊಡೆಯುವ ಪೆನಾಲ್ಟಿ ಅವಕಾಶ ದೊರೆಯಿತು. 9ನೇ ನಿಮಿಷದಲ್ಲಿ ಬ್ರೊಲಿಂಗ್ಡನ್​ ಗೋಲು ಬಾರಿಸಿ ಸಮಬಲ ಸಾಧಿಸಿ ಮೇಘಾಲಯ ತಂಡಕ್ಕೆ ಆಸರೆಯಾದರು.

ನಂತರದಲ್ಲಿ ಚೆಂಡಿನ ಮೇಲೆ ಹಿಡಿತ ಬಿಟ್ಟುಕೊಡದ ಕರ್ನಾಟಕ 19ನೇ ನಿಮಿಷದಲ್ಲಿ ಬೀಕೆ ಓರಮ್​ ಅವರ ತಂದುಕೊಟ್ಟ ಗೋಲು ಮತ್ತೆ ಮುನ್ನಡೆ ಒದಗಿಸಿತು. 44ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್​ ಮೂಲಕ ರಾಬಿನ್ ಯಾದವ್​ ನಿಬ್ಬೆರಗಾಗುವಂತಹ ಗೋಲು ದಾಖಲಿಸಿದ್ದು, ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಕರ್ನಾಟಕ 3-1 ಗೋಲು​ಗಳ ಮುನ್ನಡೆ ಪಡೆಯಲು ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಮೇಘಾಲಯ ತಂಡವೂ ಚೆಂಡಿನ ಮೇಲೆ ನಿಧಾನವಾಗಿ ಹಿಡಿತ ಸಾಧಿಸಲು ಮುಂದಾಯಿತು.

60ನೇ ನಿಮಿಷದಲ್ಲಿ ಶೀನ್​ ಸ್ಟೀವನ್ಸನ್ ಗೋಲು ಹೊಡೆದು ಅಂತರವನ್ನು 2-3ಕ್ಕಿಳಿಸಿದರು. ಕೊನೆಯ 20 ನಿಮಿಷಗಳಲ್ಲಿ ಗೋಲು​ ಹೊಡೆಯಲು ಎರಡೂ ತಂಡಗಳು ಹಲವು ರೀತಿಯ ಮ್ಯಾಜಿಕ್ ಮಾಡಿದವು. ಈ ವೇಳೆ ಕರ್ನಾಟಕ ಸಂಪೂರ್ಣ ನಿಯಂತ್ರಣ ಸಾಧಿಸಿತು. ಅತ್ತ ಮೇಘಾಲಯ ಚೊಚ್ಚಲ ಟ್ರೋಫಿ ಗೆಲ್ಲಲು ಹರಸಾಹಸಪಟ್ಟಿತು. ಆದರೆ ಪಂದ್ಯದ ಅಂತಿಮ ಘಟ್ಟದವರೆಗೂ ಗೋಲು ಗಳಿಸಲು ವಿಫಲವಾಗಿ ಪ್ರಶಸ್ತಿ ಕನಸು ಕನಸಾಗಿಯೇ ಉಳಿಯಿತು. ಕರ್ನಾಟಕದ ಆಟಗಾರರು ಕಪ್ ಗೆದ್ದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದರು.

ಈ ಹಿಂದೆ, ಮೈಸೂರು ಸಂಸ್ಥಾನವಿದ್ದಾಗ (1946-47ರಲ್ಲಿ) ರಾಜ್ಯ ಮೊದಲ ಬಾರಿಗೆ ಸಂತೋಷ್ ಟ್ರೋಫಿ ಗೆದ್ದಿತ್ತು. ನಂತರ ಮೈಸೂರು ತಂಡ 1952-53, 1967-68, 1968-69ರಲ್ಲಿ ಒಟ್ಟಾರೆ ನಾಲ್ಕು ಬಾರಿ ಪ್ರಶಸ್ತಿ ಗಳಿಸಿದೆ. ಕೊನೆಯದಾಗಿ 1975-76 ರಲ್ಲಿ ಗೆಲುವಿನ ನಿರೀಕ್ಷೆಯಲ್ಲೇ ಫೈನಲ್​ ತಲುಪಿದ ತಂಡವು ಬಂಗಾಳ ವಿರುದ್ಧ ಸೋತು ರನ್ನರ್​ ಆಫ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ: 2018ರಲ್ಲಿ ಗುಹೆಯಿಂದ ಪಾರಾಗಿದ್ದ ಫುಟ್ಬಾಲ್ ಆಟಗಾರ ಅನುಮಾನಾಸ್ಪದ ಸಾವು: ಲೈವ್​ನಲ್ಲಿ ಮಗನ ಅಂತ್ಯಕ್ರಿಯೆ ವೀಕ್ಷಿಸಿದ ಪೋಷಕರು

Last Updated : Mar 5, 2023, 8:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.