ರಿಯಾದ್ (ಸೌದಿ ಅರೇಬಿಯಾ): ಭಾರತದ ದೇಶೀಯ ಟೂರ್ನಿಗಳಲ್ಲೇ ಪ್ರತಿಷ್ಠಿತವಾದ ಹಿರೋ ಸಂತೋಷ್ ಟ್ರೋಫಿಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವು 47 ವರ್ಷಗಳ ನಂತರದ ಫೈನಲ್ಗೆ ಲಗ್ಗೆ ಇಟ್ಟಿದೆ. ರಿಯಾದ್ನ ಕಿಂಗ್ ಫಹದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ 3-1 ಗೋಲುಗಳ ಅಂತರದಿಂದ ಕರ್ನಾಟಕ ಜಯಭೇರಿ ಬಾರಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯಿಂದಲೂ ಕರ್ನಾಟಕವು ಫುಟ್ಬಾಲ್ ಆಡುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದಿಂದ ರಾಜ್ಯವು ದಿಗ್ಗಜ ಫುಟ್ಬಾಲ್ ಆಟಗಾರರನ್ನು ನೀಡಿದೆ. ಈ ಪ್ರತಿ ಆಟಗಾರರು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಆದರೂ, ಕಳೆದ ಐದು ದಶಕಗಳಿಂದ ಸಂತೋಷ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿಲ್ಲ. 1975-76ರ ಆವೃತ್ತಿಯಲ್ಲಿ ಕೊನೆಯ ಬಾರಿಗೆ ರಾಜ್ಯದ ಆಟಗಾರರು ಫೈನಲ್ ತಲುಪಿದ್ದರು. ಅಂದಿನಿಂದ ಇದುವರೆಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡಲು ಸಾಧ್ಯವಾಗಿಲ್ಲ.
-
FULL-TIME! Karnataka make it to the Final for the first time in 4⃣7⃣ years 😱
— Indian Football Team (@IndianFootball) March 1, 2023 " class="align-text-top noRightClick twitterSection" data="
A sublime comeback by @ksfaofficial 👏👏👏
SER 1⃣-3⃣ KAR
📺 @FanCode & @ddsportschannel #SERKAR ⚔️ #HeroSantoshTrophy 🏆 #IndianFootball ⚽ pic.twitter.com/XOW0UYwCMB
">FULL-TIME! Karnataka make it to the Final for the first time in 4⃣7⃣ years 😱
— Indian Football Team (@IndianFootball) March 1, 2023
A sublime comeback by @ksfaofficial 👏👏👏
SER 1⃣-3⃣ KAR
📺 @FanCode & @ddsportschannel #SERKAR ⚔️ #HeroSantoshTrophy 🏆 #IndianFootball ⚽ pic.twitter.com/XOW0UYwCMBFULL-TIME! Karnataka make it to the Final for the first time in 4⃣7⃣ years 😱
— Indian Football Team (@IndianFootball) March 1, 2023
A sublime comeback by @ksfaofficial 👏👏👏
SER 1⃣-3⃣ KAR
📺 @FanCode & @ddsportschannel #SERKAR ⚔️ #HeroSantoshTrophy 🏆 #IndianFootball ⚽ pic.twitter.com/XOW0UYwCMB
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ
ಆದಾಗ್ಯೂ, ಕಿಂಗ್ ಫಹದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಸಂರ್ಪೂಣವಾಗಿ ಪರಿಸ್ಥಿತಿ ಬದಲಾಯಿತು. ಎಂಟು ಬಾರಿಯ ಚಾಂಪಿಯನ್ ಪಂಜಾಬ್‌ವನ್ನು ಮೇಘಾಲಯ ಮಣಿಸಿ, ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿತು. ಇದರ ನಂತರದಲ್ಲಿ ಫೈನಲ್ ಸುತ್ತಿಗೆ ಎಂಟ್ರಿ ಕೊಡುವ ಸರದಿ ಕರ್ನಾಟಕದದ್ದಾಗಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಪ್ರಬಲ ಸ್ಪರ್ಧಿಯಾದ ಸರ್ವಿಸಸ್ ವಿರುದ್ಧ ಕರ್ನಾಟಕ ತಂಡವು ವಿರೋಚಿತ ಗೆಲುವು ಸಾಧಿಸಿತು.
ಸರ್ವಿಸಸ್ ತಂಡ ಮತ್ತು ಕರ್ನಾಟಕ ನಡುವಿನ ಎರಡನೇ ಸೆಮಿಫೈನಲ್ ಪಂದ್ಯವು ಹಲವು ಘಟನಾತ್ಮಕ ಪಂದ್ಯವಾಗಿ ಮಾರ್ಪಟ್ಟಿತ್ತು. ಯಾಕೆಂದರೆ, ಆರಂಭದಿಂದಲೇ ಗಾಯಗಳು ಮತ್ತು ಹಲವಾರು ಅಡೆತಡೆಗಳ ಕಾರಣದಿಂದ 100 ನಿಮಿಷಗಳ ಕಾಲ ಪಂದ್ಯವು ವಿಸ್ತರಿಸಿತು. ಇದರ ನಡುವೆ ರಾಬಿನ್ ಯಾದವ್, ಪಿ.ಅಂಕಿತ್ ಮತ್ತು ಎಂ.ಸುನಿಲ್ ಕುಮಾರ್ ಅವರ ಗೋಲುಗಳ ನೆರವಿನೊಂದಿಗೆ ಕರ್ನಾಟಕ ತಂಡವು 3-1 ವಿಜೇತ ತಂಡವಾಗಿ ಹೊರಹೊಮ್ಮಿತು.
ಮೊದಲ ಬಾರಿಗೆ ವಿದೇಶದಲ್ಲಿ ಪಂದ್ಯಗಳು: ಫುಟ್ಬಾಲ್ ಆಟವನ್ನು ವಿವಿಧ ರಾಜ್ಯಗಳಲ್ಲಿ 2047ರ ವೇಳೆಗೆ ಹರಡಿಸುವ ಉದ್ದೇಶವನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಇಟ್ಟುಕೊಂಡಿದೆ. ಹೀಗಾಗಿ ಹೀರೋ ಸಂತೋಷ್ ಟ್ರೋಫಿಗೆ ಮತ್ತಷ್ಟು ಪುನಶ್ಚೇತನ ನೀಡುತ್ತಿದೆ. ಈ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಮೊದಲ ಬಾರಿಗೆ ವಿದೇಶದಲ್ಲಿ ಆಯೋಜಿಸಿದೆ. ಸೌದಿ ಅರೇಬಿಯಾದ ರಿಯಾದ್ ಇದರ ಆತಿಥ್ಯ ವಹಿಸಿದೆ.
ಮಾರ್ಚ್ 4ರಂದು ಫೈನಲ್: ರಿಯಾದ್‌ನಲ್ಲಿ ಮಾರ್ಚ್ 4ರಂದು ಸಂಜೆ 5.30ಕ್ಕೆ 3ನೇ ಸ್ಥಾನಕ್ಕಾಗಿ ಸರ್ವಿಸಸ್ ತಂಡ ಮತ್ತು ಪಂಜಾಬ್ ತಂಡ ಸೆಣಸಲಿವೆ. ನಂತರದಲ್ಲಿ 76ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಸಂತೋಷ್ ಟ್ರೋಫಿಗಾಗಿ ರಾತ್ರಿ 9 ಗಂಟೆಗೆ ಕರ್ನಾಟಕ ತಂಡವು ಮೇಘಾಲಯ ತಂಡವನ್ನು ಎದುರಿಸಿದೆ.
ಇದನ್ನೂ ಓದಿ: ಉದ್ದೀಪನ ಮದ್ದು ಸೇವನೆ ಸಾಬೀತು: ಟ್ರಿಪಲ್ ಜಂಪರ್ ಐಶ್ವರ್ಯಾಗೆ 4 ವರ್ಷ ನಿಷೇಧ