ETV Bharat / sports

ಮಹಿಳೆಯರ ಏಷ್ಯಾಕಪ್ ಹಾಕಿ: ಜಪಾನ್​ ವಿರುದ್ಧ ಸೋತ ಭಾರತ! - ಪಂದ್ಯದಲ್ಲಿ ಜಪಾನ್​ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಭಾನುವಾರ ನಡೆದ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯ ಎರಡನೇ ಪೂಲ್ ಎ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್ ವಿರುದ್ಧ 0-2 ಗೋಲುಗಳಿಂದ ಸೋಲು ಅನುಭವಿಸಿತು.

Women Asia Cup Hockey, Women Asia Cup Hockey 2022,  Japan thrash India, Japan thrash India in hockey match, ಮಹಿಳೆಯರ ಏಷ್ಯಾಕಪ್ ಹಾಕಿ, ಮಹಿಳೆಯರ ಏಷ್ಯಾಕಪ್ ಹಾಕಿ 2022, ಜಪಾನ್​ ವಿರುದ್ಧ ಭಾರತಕ್ಕೆ ಸೋಲು, ಪಂದ್ಯದಲ್ಲಿ ಜಪಾನ್​ ವಿರುದ್ಧ ಭಾರತಕ್ಕೆ ಹೀನಾಯ ಸೋಲು,
ಜಪಾನ ವಿರುದ್ಧ ಸೋತ ಹಾಲಿ ಚಾಂಪಿಯನ್​ ಭಾರತ
author img

By

Published : Jan 24, 2022, 11:15 AM IST

Updated : Jan 24, 2022, 12:28 PM IST

ಜಪಾನಿನ ನಾಗಾ ಯೂರಿ ಮತ್ತು ಸಾಕಿ ತನಕಾ ಗೋಲುಗಳು ಬಾರಿಸುವ ಮೂಲಕ ಭಾರತೀಯರನ್ನು ಕಂಗೆಡಿಸಿದರು. ಪಂದ್ಯ ಆರಂಭಗೊಂಡು ಎರಡನೇ ನಿಮಿಷದಲ್ಲಿ ನಾಗೈ ಯೂರಿ ಗೋಲ್​ ಬಾರಿಸುವ ಮೂಲಕ ಜಪಾನ್ ಮುನ್ನಡೆ ಸಾಧಿಸಿದಾಗ ಭಾರತೀಯ ವನಿತೆಯರಿಗೆ ನಿಧಾನಗತಿ ಆರಂಭವು ದುಬಾರಿಯಾಗಿ ಪರಿಣಮಿಸಿತು.

ಅನಿರೀಕ್ಷಿತ ಗೋಲು ಬಿಟ್ಟುಕೊಟ್ಟ ನಂತರ ಎಚ್ಚೆತ್ತುಕೊಂಡ ಭಾರತೀಯರು ಅಲ್ಲಿಂದ ಮೊದಲ ಕ್ವಾರ್ಟರ್‌ನಲ್ಲಿ ಕೆಲ ಮಟ್ಟಿಗೆ ಜಪಾನ್​​​​​​​​​​ ತಂಡವನ್ನು ನಿಯಂತ್ರಿಸಿದರು. ಮೊದಲ 15 ನಿಮಿಷಗಳಲ್ಲಿ ಭಾರತ ತಂಡ ಎರಡು ಪೆನಾಲ್ಟಿ ಕಾರ್ನರ್​​ಗಳನ್ನು ಪಡೆದರು ಅವುಗಳನ್ನು ಗೋಲ್​​ಗಳಾಗಿ ಪರಿವರ್ತನೆ ಮಾಡುವಲ್ಲಿ ವಿಫಲರಾದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹಲವು ಅವಕಾಶಗಳನ್ನು ಪಡೆದ ಭಾರತೀಯರು ಗೋಲು ಗಳಿಸಲು ವಿಫಲರಾದ ಕಾರಣ ಜಪಾನ್ ರಕ್ಷಣಾತ್ಮಕ ಆಟವನ್ನು ಕಾಯ್ದುಕೊಂಡಿತು. ಜಪಾನ್ ಅಂತಿಮವಾಗಿ ಅರ್ಧ ಆಟದ ವಿರಾಮಕ್ಕೆ 1-0 ಮುನ್ನಡೆ ಸಾಧಿಸಿತು. 42ನೇ ನಿಮಿಷದಲ್ಲಿ ತನಕಾ ಗೋಲು ಬಾರಿಸುವ ಮೂಲಕ ಜಪಾನ್​​​​​​ ಮತ್ತೊಂದು ಗೋಲ್​ ಮುನ್ನಡೆ ಪಡೆದು ಭಾರತವನ್ನು ಅಚ್ಚರಿಗೊಳಿಸಿತು.

ಎರಡು ಗೋಲುಗಳ ಹಿನ್ನಡೆಯೊಂದಿಗೆ ಭಾರತೀಯ ನಾರಿಯರು ಆಕ್ರಮಣಕಾರಿ ಆಟವಾಡಲು ಮುಂದಾದರು. ಆದರೂ ಸಹ ಅದೃಷ್ಟ ಭಾರತೀಯರ ಕೈ ಹಿಡಿಯಲಿಲ್ಲ. ಕೊನೆಯದಾಗಿ ಭಾರತ ತಂಡವನ್ನು ಜಪಾನ್ 2-0 ಮೂಲಕ ಸೋಲಿಸಿತು. ಜಪಾನ್​ ತಂಡ ಪೂಲ್ A ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಭಾರತವು ತನ್ನ ಆರಂಭಿಕ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 9-0 ಗೆಲುವು ಪಡೆದಿರುವುದರಿಂದ ಎರಡನೇ ಸ್ಥಾನದಲ್ಲಿದೆ.

ಭಾರತ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಸೋಮವಾರ ಸಿಂಗಾಪುರವನ್ನು ಎದುರಿಸಲಿದೆ. ಎರಡೂ ಪೂಲ್‌ಗಳಿಂದ ಅಗ್ರ ಎರಡು ತಂಡಗಳು ಪಂದ್ಯಾವಳಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿ ಫೈನಲ್​ಗೆ ಪ್ರವೇಶ ಪಡೆಯುವ ತಂಡಗಳು ವಿಶ್ವಕಪ್​ಗೆ ಅರ್ಹತೆ ಪಡೆಯುತ್ತವೆ.

ಇದನ್ನು ಓದಿ:SA Vs IND: ಅಂತಿಮ ಪಂದ್ಯದಲ್ಲೂ 4 ರನ್​ಗಳಿಂದ ಸೋತ ಭಾರತ.. ದ.ಆಫ್ರಿಕಾ ವಿರುದ್ಧ 3-0 ಸರಣಿ ಮುಖಭಂಗ

Last Updated : Jan 24, 2022, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.