ನವದೆಹಲಿ: ಈಜಿಪ್ಟ್‌ನ ಕೈರೊದಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಬುಧವಾರ ವೇದಿಕೆ ಸಜ್ಜುಗೊಂಡಿದೆ. ಕೊರೊನಾ ಲಾಕ್ಡೌನ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ (ಐಎಸ್‌ಎಸ್‌ಎಫ್) ಸ್ಪರ್ಧೆ ಇದಾಗಿದ್ದು, ಭಾರತದ 13 ಮಂದಿಯ ತಂಡ ಭಾಗಿಯಾಗಿದೆ. ಬಹುತೇಕ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್ ಕೂಟ ನಡೆಯುತ್ತಿದೆ.
33 ದೇಶಗಳ 191 ಶೂಟರ್‌ಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್ ಪಾಯಿಂಟ್ಸ್ ಆಧಾರದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಕೊನೆಯ ಅವಕಾಶ ಆಗಿರುವುದರಿಂದ ಕೈರೊ ವಿಶ್ವಕಪ್ ಇನ್ನಷ್ಟು ಮಹತ್ವ ಎನಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್, ಪುರುಷರ 25 ಮೀ ಕ್ಷಿಪ್ರ ಫೈರ್ ಪಿಸ್ತೂಲ್‌ನಲ್ಲಿ ಭಾರತದ ಭವಿಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಭಾಗದಲ್ಲಿ ಅನೀಶ್ ಸ್ಪರ್ಧಿಸುತ್ತಾರೆ. ನಾವು ಎಲ್ಲರಿಗೂ ಶುಭ ಹಾರೈಸುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.