ದೋಹಾ (ಕತಾರ್): ಕತಾರ್‌ನ ದೋಹಾದಲ್ಲಿ ಶನಿವಾರ ನಡೆದ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಶಾಟ್‌ಗನ್ ವಿಶ್ವಕಪ್ 2023 ರಲ್ಲಿ ಟ್ರ್ಯಾಪ್ ಶೂಟರ್ ಪೃಥ್ವಿರಾಜ್ ತೊಂಡೈಮಾನ್ ಕಂಚಿನ ಪದಕ ಗೆದ್ದಿದ್ದಾರೆ. ಕತಾರ್ ರಾಜಧಾನಿ ಲುಸೈಲ್ ಶೂಟಿಂಗ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
ಪೃಥ್ವಿರಾಜ್ ತೊಂಡೈಮಾನ್ ಅವರು ಅಂತಿಮ ಐದು ಶೂಟ್ಗಳಲ್ಲಿ ಮೂರನ್ನು ಕಳೆದುಕೊಂಡ ನಂತರ ಅವರು 20/25 ಅಂಕಗಳೊಂದಿಗೆ ಕಂಚಿಗೆ ತೃಪ್ತಿ ಪಡಬೇಕಾಯಿತು. ಟರ್ಕಿಯ ಎರಡು ಬಾರಿ ವಿಶ್ವ ಚಾಂಪಿಯನ್ ಓಗುಝಾನ್ ತುಜುನ್ 33/35 ಅಂಕದಿಂದ ಚಿನ್ನ ಜಯಿಸಿದರು. ಟೋಕಿಯೊ 2020 ರಲ್ಲಿ ಗ್ರೇಟ್ ಬ್ರಿಟನ್‌ನ ಕಂಚಿನ ಪದಕ ವಿಜೇತ ಮ್ಯಾಥ್ಯೂ ಜಾನ್ 30/35 ಅಂಕಗಳೊಂದಿಗೆ ಬೆಳ್ಳಿ ಗೆದ್ದರು.
ಇದಕ್ಕೂ ಮೊದಲು, ಪೃಥ್ವಿರಾಜ್ ತೊಂಡೈಮನ್ ತಮ್ಮ ಸೆಮಿಫೈನಲ್‌ನಲ್ಲಿ 22/25 ಸ್ಕೋರ್‌ನೊಂದಿಗೆ ಪದಕದ ಸುತ್ತಿಗೆ ಸ್ಥಾನ ಪಡೆದುಕೊಂಡರು. ಭಾರತದ ಶೂಟರ್ ಪೃಥ್ವಿರಾಜ್ ತೊಂಡೈಮಾನ್ 122 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನ ಪಡೆದರು. ಕಳೆದ ವರ್ಷ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ನ ಶಾಟ್‌ಗನ್ ವರ್ಲ್ಡ್ ಚಾಂಪಿಯನ್‌ಶಿಪ್ 2022 ನಲ್ಲಿ ಭೌನೀಶ್ ಮೆಂಡಿರಟ್ಟಾ ಅವರು ಐದು ಸುತ್ತುಗಳ ನಂತರ 120 ಅಂಕಗಳೊಂದಿಗೆ 27 ನೇ ಸ್ಥಾನ ಪಡೆದಿದ್ದರು. 2022ರ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 27ನೇ ಸ್ಥಾನ ಗಳಿಸಿದ ಭೌನೀಶ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದಿಂದ ಆಯ್ಕೆಯಾಗಿದ್ದರು. 118 ಸ್ಪರ್ಧಿಗಳ ಪೈಕಿ ಜೋರಾವರ್ ಸಿಂಗ್ ಸಂಧು (119) ಮತ್ತು ಕಿನಾನ್ ಚೆನೈ (118) ಕ್ರಮವಾಗಿ 38 ಮತ್ತು 49ನೇ ಸ್ಥಾನ ಪಡೆದರು.
ಇದನ್ನೂ ಓದಿ: ಮಹಿಳಾ ಐಪಿಎಲ್: ಕಾಪ್, ಶೆಫಾಲಿ ಅಬ್ಬರಕ್ಕೆ ನಲುಗಿದ ಗುಜರಾತ್; ಡೆಲ್ಲಿಗೆ 10 ವಿಕೆಟ್ ಗೆಲುವು!
ಮಹಿಳೆಯರ ಟ್ರ್ಯಾಪ್ ಶೂಟಿಂಗ್‌ನಲ್ಲಿ, ಡಬಲ್ ಟ್ರ್ಯಾಪ್‌ನಲ್ಲಿ 2018 ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶ್ರೇಯಸಿ ಸಿಂಗ್, ಸೆಮಿ-ಫೈನಲ್‌ಗೆ ಅರ್ಹತೆ ಪಡೆಯಲು 118 ರನ್ ಗಳಿಸಿದರು ಆದರೆ 21/25 ಸ್ಕೋರ್‌ನೊಂದಿಗೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಕೀರ್ತಿ ಗುಪ್ತಾ 110 ಅಂಕ ಗಳಿಸಿ 62 ಸ್ಪರ್ಧಿಗಳ ಪೈಕಿ 36ನೇ ಸ್ಥಾನ ಪಡೆದರು. ರಾಜೇಶ್ವರಿ ಕುಮಾರಿ (107) 46ನೇ ಸ್ಥಾನ ಪಡೆದರೆ, ಪ್ರೀತಿ ರಾಜಕ್ ಅವರ 105ನೇ ಸ್ಥಾನ ಗಳಿಸಿ 50ನೇ ಸ್ಥಾನ ಪಡೆದರು.
ಆಸ್ಟ್ರೇಲಿಯಾದ ಪೆನ್ನಿ ಸ್ಮಿತ್ ಶೂಟ್ ಆಫ್‌ನಲ್ಲಿ ಸ್ಲೋವಾಕಿಯಾದ ಜುಜಾನಾ ಸ್ಟೆಫೆಸೆಕೋವಾ ಅವರನ್ನು ಸೋಲಿಸಿ ಚಿನ್ನ ಗೆದ್ದರೆ, ಪದಕದ ಪಂದ್ಯದಲ್ಲಿ 20/25 ಗುಂಡು ಹಾರಿಸಿದ ಅಮೆರಿಕದ ಅಲಿಸಿಯಾ ಗಾಫ್ ಕಂಚಿನ ಪದಕ ಪಡೆದರು. ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಶಾಟ್‌ಗನ್ ವಿಶ್ವಕಪ್ 2023 ದೋಹಾದಲ್ಲಿ ಭಾನುವಾರ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಪಿಎಸ್ನಲ್ಲಿ ದಾಖಲೆಯ ಪಂದ್ಯ, ಟಿ20 ಎರಡು ಇನ್ನಿಂಗ್ 500ಕ್ಕೂ ಹೆಚ್ಚು ರನ್ ದಾಖಲೆ