ETV Bharat / sports

ಹಾಕಿ: ವರ್ಷದ ಶ್ರೇಷ್ಠ ಗೋಲ್‌ಕೀಪರ್‌ ಆಗಿ ಭಾರತದ ಶ್ರೀಜೇಶ್ - ಸವಿತಾ ಆಯ್ಕೆ - ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್

ಎಫ್‌ಐಹೆಚ್ ವರ್ಷದ ಶ್ರೇಷ್ಠ ಗೋಲ್‌ಕೀಪರ್‌ಗಳಾಗಿ ಭಾರತದ ಪಿಆರ್ ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಆಯ್ಕೆಯಾಗಿದ್ದಾರೆ.

indias-sreejesh-and-savita-voted-fih-mens-and-womens-goalkeepers-of-the-year
ಹಾಕಿ: ವರ್ಷದ ಶ್ರೇಷ್ಠ ಗೋಲ್‌ಕೀಪರ್‌ ಆಗಿ ಭಾರತದ ಶ್ರೀಜೇಶ್ - ಸವಿತಾ ಆಯ್ಕೆ
author img

By

Published : Oct 5, 2022, 10:50 PM IST

ನವದೆಹಲಿ: ಭಾರತದ ಪಿಆರ್ ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅವರು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್‌)ನ ವರ್ಷದ ಶ್ರೇಷ್ಠ ಗೋಲ್‌ಕೀಪರ್‌ಗಳು ಎನಿಸಿಕೊಂಡಿದ್ದಾರೆ. ಸತತ ಎರಡನೇ ಬಾರಿಗೆ ಇಬ್ಬರು ಕೂಡ ಕ್ರಮವಾಗಿ ಎಫ್‌ಐಹೆಚ್ ಪುರುಷರ ಮತ್ತು ಮಹಿಳಾ ಗೋಲ್‌ಕೀಪರ್‌ಗಳಾಗಿ ಆಯ್ಕೆಯಾದರು.

16 ವರ್ಷದಿಂದ ಭಾರತ ರಾಷ್ಟ್ರೀಯ ತಂಡದಲ್ಲಿರುವ ಶ್ರೀಜೇಶ್‌, ಈ ಬಾರಿಯ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಎಲ್ಲ 16 ಪಂದ್ಯಗಳನ್ನು ಆಡಿದ್ದರು. ತಂಡವು ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಂಡ ಆಡಿದ ಆರು ಪಂದ್ಯಗಳಲ್ಲೂ ಅವರು ಇದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿತು.

ಶ್ರೇಷ್ಠ ಗೋಲ್‌ಕೀಪರ್‌ ಆಯ್ಕೆ ನಡೆದ ಮತದಾನದಲ್ಲಿ 34 ವರ್ಷದ ಶ್ರೀಜೇಶ್ ಒಟ್ಟು 39.9 ಅಂಕಗಳನ್ನು ಪಡೆದರೆ, ನಂತರದ ಸ್ಥಾನದಲ್ಲಿ ಬೆಲ್ಜಿಯಂನ ಲೊಯಿಕ್ ವ್ಯಾನ್ ಡೊರೆನ್ (26.3 ಅಂಕ) ಮತ್ತು ನೆದರ್ಲೆಂಡ್ಸ್‌ನ ಪ್ರಿಮಿನ್ ಬ್ಲ್ಯಾಕ್ (23.2 ಅಂಕ) ಇದ್ದಾರೆ.

ಇನ್ನು, 32 ವರ್ಷದ ಸವಿತಾ ಪೂನಿಯಾ 37.6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಅರ್ಜೆಂಟೀನಾದ ದಂತಕಥೆ ಬೆಲ್ನ್ ಸುಸಿ 26.4 ಅಂಕಗಳೊಂದಿಗೆ ಎರಡನೇ ಅತಿ ಹೆಚ್ಚು ಅಂಕಗಳನ್ನು ಪಡೆದರು. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟಾಲ್ವಾರ್ಟ್ ಜೋಸ್ಲಿನ್ ಬಾರ್ಟಮ್ (16 ಅಂಕಗಳು) ಇದ್ದಾರೆ. 2014ರಲ್ಲಿ ಪ್ರಶಸ್ತಿ ಪ್ರಾರಂಭವಾದಾಗಿನಿಂದ ಸತತ ಎರಡು ವರ್ಷಗಳಿಂದ ವರ್ಷದ ಗೋಲ್‌ಕೀಪರ್ (ಮಹಿಳೆಯರು) ಆಯ್ಕೆಯಾದ ಮೂರನೇ ಅಥ್ಲೀಟ್ ಆಗಿದ್ದಾರೆ.

ಇದನ್ನೂ ಓದಿ: 2023ರ ಏಕದಿನ ವಿಶ್ವಕಪ್ ನನ್ನ ಗುರಿ: ಶಿಖರ್​ ಧವನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.