ETV Bharat / sports

ಐಎಸ್ಎಸ್ಎಫ್ ವಿಶ್ವಕಪ್​ ಟೂರ್ನಿ: ಬೆಳ್ಳಿಗೆದ್ದ ಭಾರತ ಮಹಿಳಾ ಶೂಟರ್ಸ್​​​​ ತಂಡ - ಭಾರತ ಕ್ರೀಡೆ ಸುದ್ದಿ

ಕೀರ್ತಿ ಗುಪ್ತಾ, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿಯಿದ್ದ ಮಹಿಳಾ ಶೂಟರ್​ಗಳ ತಂಡ, ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ಐಎಸ್ಎಸ್ಎಫ್) ವಿಶ್ವಕಪ್ ಶಾಟ್‌ಗನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

Shotgun World Cup
ಭಾರತ ಮಹಿಳಾ ಶೂಟರ್​ ತಂಡ
author img

By

Published : Mar 5, 2021, 9:35 AM IST

ಕೈರೋ: ಭಾರತದ ಮಹಿಳಾ ಶೂಟರ್​ಗಳ ತಂಡದ ಮೂವರು ವರ್ಷದ ಮೊದಲ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಶಾಟ್‌ಗನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕೀರ್ತಿ ಗುಪ್ತಾ, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿ ಅವರು ರಷ್ಯಾ ವಿರುದ್ಧ 4-6 ಅಂಕಗಳ ಅಂತರದಿಂದ ಸೋತು ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಈ ಮೂವರು ಫೈನಲ್​​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ಪ್ರತಿ ತಂಡಕ್ಕೆ 15-ಶಾಟ್‌ಗಳ ಕೊನೆಯ ಸರಣಿಯಲ್ಲಿ ಅವರು ಸೋಲು ಕಂಡು ಎರಡನೆ ಸ್ಥಾನ ಪಡೆದಿದ್ದಾರೆ.

ಇನ್ನು ಪುರುಷರ ತಂಡವು ಪಂದ್ಯಾವಳಿಯಲ್ಲಿ ಮೊದಲು ಕಂಚಿನ ಪದಕವನ್ನು ಗಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.