ETV Bharat / sports

ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​: 10 ಪದಕಗಳಿಗೆ ಕೊರಳೊಡ್ಡಿದ ಭಾರತದ ಮಹಿಳಾ ಬಾಕ್ಸರ್ಸ್​

ಈ ಬಾರಿಯ ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮುಗಿದಿದೆ. ಟೂರ್ನಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್‌ಗಳು 10 ಪದಗಳನ್ನು ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಎತ್ತರಿಸಿದ ಕ್ರೀಡಾಪಟುಗಳ ಮಾಹಿತಿ ಇಲ್ಲಿದೆ..

Asian Boxing Championships
ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​
author img

By

Published : May 31, 2021, 7:40 AM IST

ದುಬೈ (ಯುಎಇ): ದುಬೈನಲ್ಲಿ ನಡೆಯುತ್ತಿರುವ ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಮಹಿಳಾ ಬಾಕ್ಸರ್​ಗಳು 10 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಮುಗಿಸಿದರು.

ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕ ಸಾಧನೆಯನ್ನು ಭಾರತೀಯ ಮಹಿಳಾ ಬಾಕ್ಸರ್​​ಗಳು ಮಾಡಿದ್ದಾರೆ. ಒಲಿಂಪಿಕ್​ ಬೌಂಡ್​ ಬಾಕ್ಸರ್​ ಪೂಜಾ ರಾಣಿ ಚಾಂಪಿಯನ್​ಶಿಪ್​ನಲ್ಲಿ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಭಾನುವಾರ ನಡೆದ 75 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ​ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೋವಾ ವಿರುದ್ಧ 5-0ಯಲ್ಲಿ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. 2019ರ ಆವೃತ್ತಿಯಲ್ಲಿ 81 ಕೆ.ಜಿ ವಿಭಾಗದಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದರು.

ಇತರೆ ಫೈನಲ್ ಪಂದ್ಯಗಳಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್​ (51) ಮತ್ತು ಲಾಲ್​ಬೌತ್ಸಾಹಿ (64 ಕೆಜಿ), ಅನುಪಮಾ (+ 81 ಕೆಜಿ) ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಸಿಮ್ರಂಜಿತ್ ಕೌರ್ (60 ಕೆಜಿ), ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಜೈಸ್ಮೈನ್ (57 ಕೆಜಿ), ಸಾಕ್ಷಿ ಚೌಧರಿ (54 ಕೆಜಿ), ಮೋನಿಕಾ (48 ಕೆಜಿ) ಮತ್ತು ಸವೀತಿ (81 ಕೆಜಿ) ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.