ETV Bharat / sports

ಸೌತ್​ ಏಷ್ಯನ್​ ಗೇಮ್ಸ್ 2019​: ಭಾರತ ಕಬಡ್ಡಿ ತಂಡಕ್ಕೆ 'ಪವನ್​ ಶೇರ್'​ವತ್ ಉಪನಾಯಕ - ಬೆಂಗಳೂರು ಬುಲ್ಸ್​

ಮುಂದಿನ ತಿಂಗಳು ನೇಪಾಳದಲ್ಲಿ ನಡೆಯಲಿರುವ ಸೌತ್​ ಏಷ್ಯನ್​ ಗೇಮ್ಸ್​ನಲ್ಲಿ ಪವನ್​ ಶೆರಾವತ್​ ಭಾರತ ತಂಡದ ಉಪ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.

ಪವನ್​ ಕುಮಾರ್​ ಶೆರಾವತ್
South Asian Games 2019
author img

By

Published : Nov 26, 2019, 5:24 PM IST

ನವದೆಹಲಿ: ಡಿಸೆಂಬರ್​ 4 ರಿಂದ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್​ ಏಷ್ಯನ್ ಗೇಮ್ಸ್​ಗೆ ಪ್ರಕಟಗೊಂಡಿರುವ ಕಬಡ್ಡಿ ತಂಡದಲ್ಲಿ ಬೆಂಗಳೂರು ಬುಲ್ಸ್​ ತಂಡದ ಪವನ್ ಶೆರಾವತ್​​ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ.

2018-2109ರ ಪ್ರೋ ಕಬಡ್ಡಿ ಲೀಗ್​ನಲ್ಲಿ ಸತತ 2ನೇ ಬಾರಿಗೆ ಟಾಪ್​ ರೈಡರ್​ ಆಗಿರುವ ಪವನ್ ಕುಮಾರ್​ ಶೆರಾವತ್​ ಬೆಂಗಳೂರು ಬುಲ್ಸ್​ ತಂಡವನ್ನು ಏಕಾಂಗಿಯಾಗಿ ಹೋರಾಡಿ 2018ರಲ್ಲಿ ಚಾಂಪಿಯನ್​​ ಮಾಡಿದ್ದರು. ಇವರು 2019ರ ಆವೃತ್ತಿಯಲ್ಲಿ ತಂಡವನ್ನು ಸೆಮಿಫೈನಲ್​ವರೆಗೂ ತಂದಿದ್ದರು.

ಇದೀಗ ಪವನ್​ ಭಾರತ ತಂಡದ ಪರ ಕಣಕ್ಕಿಳಿಯಲಿದ್ದು, ತಮ್ಮ ತಾಕತ್ತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಆಲ್​ರೌಂಡರ್​ ದೀಪಕ್​ ನಿವಾಸ್​ ಹೂಡಾ ಮುನ್ನಡೆಸಲಿದ್ದಾರೆ.

ಪ್ರಸ್ತುತ ಪ್ರೋ ಕಬಡ್ಡಿ ಲೀಗ್​ನಲ್ಲಿ ಅತ್ಯುತ್ತಮವಾಗಿ ಆಡುತ್ತಿರುವ ನವೀನ್​ ಕುಮಾರ್​, ಪರ್ದೀಪ್​ ನರ್ವಾಲ್​, ಅಮಿತ್​ ಹಾಗು ವಿಕಾಸ್​ ಕೂಡ ಟೀಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡ:

ದೀಪಕ್​ ನಿವಾಸ್​ ಹೂಡಾ(ನಾಯಕ) ಪವನ್​ ಕುಮಾರ್​ ಶೆರಾವತ್​(ಉಪ ನಾಯಕ), ನಿತೀಶ್​ ಕುಮಾರ್​, ವಿಕಾಶ್​ ಕಂಡೋಲ,ವಿಶಾಲ್​ ಭಾರಧ್ವಜ್​, ಸುನಿಲ್​ ಕುಮಾರ್​, ಪರ್ವೇಶ್​ ಭೈನ್ಸ್ವಾಲ್​, ನವೀನ್​ ಕುಮಾರ್​​, ಅಮಿತ್​ ಹೂಡಾ, ಸುರಿಂದರ್​ ನಾಡ, ದರ್ಶನ್​ ಕಡೈನ್

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.