ಟೋಕಿಯೋ: ಭಾರತದ ಒಲಿಂಪಿಕ್ಸ್ ಕ್ರೀಡಾಪಟುಗಳ ತಂಡ ಐತಿಹಾಸಿಕ ಟೋಕಿಯೋ ಗೇಮ್ಸ್ ಯಶಸ್ವಿಯಾಗಿ ಮುಗಿಸಿ ಸೋಮವಾರ ನವದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಅಥ್ಲೀಟ್ಸ್ಗಳ ತಂಡ ಸೋಮವಾರ ತವರಿಗೆ ಮರಳಿದೆ.
" ಅಥ್ಲೆಟಿಕ್ಸ್ ತಂಡ ಟೋಕಿಯೋದಿಂದ ತವರಿಗೆ ಮರಳಿದೆ. ಅವರನ್ನು ಚಿಯರ್ ಫಾರ್ ಇಂಡಿಯಾ ಸಂದೇಶದ ಮೂಲಕ ಸ್ವಾಗತ ಕೋರೋಣ ಮತ್ತು ಮುಂದಿನ ಸ್ಪರ್ಧೆಗಳಿಗೆ ಬೆಂಬಲಿಸೋಣ" ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(BAI) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ.
-
🇮🇳 Athletics team is back from #Tokyo2020
— SAIMedia (@Media_SAI) August 9, 2021 " class="align-text-top noRightClick twitterSection" data="
Let's welcome them by sharing our #Cheer4India messages and encourage them for their future competitions. #Olympics #TeamIndia pic.twitter.com/UOubtFBas2
">🇮🇳 Athletics team is back from #Tokyo2020
— SAIMedia (@Media_SAI) August 9, 2021
Let's welcome them by sharing our #Cheer4India messages and encourage them for their future competitions. #Olympics #TeamIndia pic.twitter.com/UOubtFBas2🇮🇳 Athletics team is back from #Tokyo2020
— SAIMedia (@Media_SAI) August 9, 2021
Let's welcome them by sharing our #Cheer4India messages and encourage them for their future competitions. #Olympics #TeamIndia pic.twitter.com/UOubtFBas2
ಭಾರತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಗರಿಷ್ಠ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕ ಜಯಿಸಿದೆ. ಅದರಲ್ಲೂ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪಕದ ಗೆಲ್ಲುವ ಮೂಲಕ ಭಾರತದ 100 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.
ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್, ಬ್ಯಾಡ್ಮಿಂಟನ್ನಲ್ಲಿ ಪಿವಿ ಸಿಂಧು, ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಪಡೆದರೆ, ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚನು ಮತ್ತು ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದಿದ್ದರು.