ಚೆನ್ನೈ: ಮಲೇಷ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 4-3 ಗೋಲುಗಳ ಅಂತರದ ಗೆಲುವು ಸಾಧಿಸಿದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶನಿವಾರ ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ಆರಂಭದಲ್ಲಿ ಮಲೇಷ್ಯಾ ಅಮೋಘ ಆಟವಾಟ ಪ್ರದರ್ಶಿಸಿದರೂ, ಅಂತಿಮ ಘಟ್ಟದಲ್ಲಿ ಪುನರಾಗಮನ ತೋರಿದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು.
ಮೊದಲಾರ್ಧದಲ್ಲಿ ಮಲೇಷ್ಯಾವು ಆಕ್ರಮಣಕಾರಿಯಾಗಿ ಆಟವಾಡಿದ್ದರಿಂದ ಎದುರಾಳಿಯನ್ನು ನಿಯಂತ್ರಿಸಲು ಭಾರತೀಯರು ಹರಸಾಹಸಪಟ್ಟರು. ಅರ್ಧ ಆಟದ ಮುಕ್ತಾಯದ ವೇಳೆಗೆ ಮಲೇಷ್ಯಾ 3-1ರಿಂದ ಭಾರತಕ್ಕಿಂತ ಮುಂದಿತ್ತು. ಮೂರನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ಭಾರತ 3-3ರಿಂದ ಸಮಬಲ ಸಾಧಿಸಿತು.
ಮಲೇಷ್ಯಾದ ಕನಸು ಭಗ್ನ: ಬಳಿಕ ನಾಲ್ಕನೇ ಅರ್ಧದಲ್ಲಿ ಆಕಾಶದೀಪ್ ಸಿಂಗ್ ಬಾರಿಸಿದ ಅದ್ಭುತ ಗೋಲಿನಿಂದ ಭಾರತ 4-3 ಅಂತರದಲ್ಲಿ ಮಲೇಷ್ಯಾವನ್ನು ಸೋಲಿಸಿ ದಾಖಲೆಯ ನಾಲ್ಕನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಪಂದ್ಯದ ಸೋಲಿನೊಂದಿಗೆ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಗೆಲ್ಲುವ ಮಲೇಷ್ಯಾದ ಕನಸು ಭಗ್ನಗೊಂಡಿದೆ.
-
We are the Champions 🏆
— Hockey India (@TheHockeyIndia) August 12, 2023 " class="align-text-top noRightClick twitterSection" data="
This is just the beginning, on to the Hangzhou Asian Games next.#HockeyIndia #IndiaKaGame #HACT2023 pic.twitter.com/ofXc9xLIw4
">We are the Champions 🏆
— Hockey India (@TheHockeyIndia) August 12, 2023
This is just the beginning, on to the Hangzhou Asian Games next.#HockeyIndia #IndiaKaGame #HACT2023 pic.twitter.com/ofXc9xLIw4We are the Champions 🏆
— Hockey India (@TheHockeyIndia) August 12, 2023
This is just the beginning, on to the Hangzhou Asian Games next.#HockeyIndia #IndiaKaGame #HACT2023 pic.twitter.com/ofXc9xLIw4
ಭಾರತ ಪರ 9ನೇ ನಿಮಿಷದಲ್ಲಿ ಜುಗರಾಜ್ ಸಿಂಗ್ ಪ್ರಥಮ ಗೋಲು ದಾಖಲಿಸಿದರು. ಮಲೇಷ್ಯಾ ಪರ ಅಜ್ರಾಯಿ ಅಬು ಕಮಾಲ್ 14ನೇ ನಿಮಿಷ, ರಹೀಮ್ ರಾಜಿ 18ನೇ ನಿಮಿಷ ಮತ್ತು ಮುಹಮ್ಮದ್ ಅಮಿನುದ್ದೀನ್ 28ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಲೇಷ್ಯಾ ಅರ್ಧ ಸಮಯದವರೆಗೆ ಅತ್ಯಂತ ಆಕ್ರಮಣಕಾರಿ ಆಟದ ಮೂಲಕ ಭಾರತ ತಂಡದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು.
ಮೂರನೇ ಕ್ವಾರ್ಟರ್‌ನ ಕೊನೆಯ 1 ನಿಮಿಷದಲ್ಲಿ ಭಾರತ ಎರಡು ಗೋಲು ಗಳಿಸಿ 3-3ರ ಸಮಬಲ ಸಾಧಿಸಿತು. 44ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಆಗ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಗೋಲು ಬಾರಿಸಿ, ಸ್ಕೋರ್ನ್ನು 2-3 ಮಾಡಿದರು. ಕೆಲವು ಸೆಕೆಂಡುಗಳ ನಂತರ, ಗುರ್ಜಂತ್ ಸಿಂಗ್ ಫೀಲ್ಡ್ ಗೋಲು ಗಳಿಸಿ ಸ್ಕೋರ್ನ್ನು 3-3 ಸಮಬಲಕ್ಕೆ ತಂದರು. ತದನಂತರ ಭಾರತದ ಸ್ಟಾರ್ ಆಟಗಾರ ಆಕಾಶದೀಪ್ ಸಿಂಗ್ ಭಾರತದ ಪರ ಮಹತ್ವದ ಗೋಲು ದಾಖಲಿಸಿದರು. ನಿಗದಿತ ಸಮಯದ ಮುಕ್ತಾಯಕ್ಕೆ ಭಾರತವು 4-3 ರಿಂದ ಮಲೇಷ್ಯಾವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ: ಈ ಗೆಲುವಿನೊಂದಿಗೆ ಟೀಂ ಇಂಡಿಯಾ ದಾಖಲೆಯ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಇದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಸಲ ಈ ಟ್ರೋಫಿ ಗೆದ್ದಿವೆ. ಇದೀಗ ಫೈನಲ್‌ನಲ್ಲಿ ಮಲೇಷ್ಯಾವನ್ನು 4-3 ಅಂತರದಿಂದ ಸೋಲಿಸಿದ ಭಾರತ ಇತಿಹಾಸ ನಿರ್ಮಿಸಿದೆ.
ಉಭಯ ತಂಡಗಳ ಫೈನಲ್ ಪಯಣ ಹೀಗಿತ್ತು: ಮಲೇಷ್ಯಾ ತಂಡ ಸೆಮಿಫೈನಲ್ 1ರಲ್ಲಿ ದಕ್ಷಿಣ ಕೊರಿಯಾವನ್ನು 6-2 ಗೋಲುಗಳಿಂದ ಸೋಲಿಸಿ ಫೈನಲ್ ತಲುಪಿತ್ತು. ಇನ್ನೊಂದೆಡೆ ಭಾರತವು ಸೆಮಿಫೈನಲ್ 2ರಲ್ಲಿ ಜಪಾನ್ನ್ನು 5-0 ಗೋಲುಗಳಿಂದ ಮಣಿಸಿ ಫೈನಲ್‌ಗೇರಿತ್ತು.
ಇದನ್ನೂ ಓದಿ: Asian Champions Trophy: ಫೈನಲ್‌ನಲ್ಲಿ ಭಾರತಕ್ಕೆ ಮಲೇಷ್ಯಾ ಎದುರಾಳಿ.. ನಾಲ್ಕನೇ ಪ್ರಶಸ್ತಿ ಪಡೆಯುವತ್ತ ಟೀಮ್ ಚಿತ್ತ