ಹ್ಯಾಂಗ್ಝೌ (ಚೀನಾ): ಇತ್ತೀಚಿನ ವರ್ಷಗಳಲ್ಲಿ ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಏಷ್ಯಾಡ್ನಲ್ಲಿ ನಡೆಯುವ ಬುಹುತೇಕ ಎಲ್ಲಾ ಕ್ರೀಡೆಗಳಲ್ಲೂ ಅಥ್ಲೀಟ್ಗಳು ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಹ್ಯಾಂಗ್ಝೌ ಕ್ರೀಡಾಕೂಟಕ್ಕೆ ದೇಶದಿಂದ 655 ಅಥ್ಲೀಟ್ಗಳು ಭಾಗವಹಿಸಿದ್ದು, 100 ಪದಕ ದಾಖಲೆಯನ್ನು ಈ ಬಾರಿ ಬರೆಯಲಿದೆ. 2018ರಲ್ಲಿ 70 ಪದಕ ಗೆದ್ದಿರುವುದು ಅತ್ಯಧಿಕ ಪದಕ ಸಾಧನೆಯಾಗಿತ್ತು. ಈ ಬಾರಿ ಇದನ್ನೂ ಮೀರಿ ಮೂರಂಕಿಗೆ ತಲುಪಲಿದೆ.
ಏಷ್ಯಾಡ್ನ 13ನೇ ದಿನವಾದ ಇಂದು (ಅಕ್ಟೋಬರ್ 6 ,ಶುಕ್ರವಾರ) ಕುಸ್ತಿಯಲ್ಲಿ ಸೋನಮ್ ಮಲಿಕ್ ಕಂಚಿನ ಪದಕ ಗೆಲ್ಲುವುದರೊಂದಿಗೆ 100ನೇ ಪದಕ ಗೆಲ್ಲುವುದು ಖಚಿತವಾಯಿತು. ಸದ್ಯಕ್ಕೆ ದೇಶಕ್ಕೆ ಮತ್ತೊಂದು ಕಂಚಿನ ಪದಕವನ್ನು ಕುಸ್ತಿಯಲ್ಲಿ ಕಿರಣ್ ಬಿಷ್ಣೋಯ್ ತಂದುಕೊಟ್ಟಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ 76 ಕೆ.ಜಿಯಲ್ಲಿ ಕಿರಣ್ ಕಂಚಿಗೆ ಮುತ್ತಿಕ್ಕಿದರು. ಈ ಮೂಲಕ ಭಾರತ ಒಟ್ಟಾರೆ 92 ಪದಕವನ್ನು ತನ್ನದಾಗಿಸಿಕೊಂಡಿದೆ. ಇದಲ್ಲದೇ ಬಜರಂಗ್ ಪುನಿಯಾ (ಪುರುಷರ ಫ್ರೀಸ್ಟೈಲ್ 65 ಕೆ.ಜಿ) ಮತ್ತು ಅಮನ್ ಸೆಹ್ರಾವತ್ (ಪುರುಷರ ಫ್ರೀಸ್ಟೈಲ್ 57 ಕೆ.ಜಿ) ಅವರಿಂದ ಕುಸ್ತಿಯಲ್ಲಿ ಇನ್ನೆರಡು ಕಂಚು ನಿರೀಕ್ಷೆ ಇದೆ.
-
An unprecedented achievement for 🇮🇳! Assured of 100 medals at the Asian Games, it's a moment of immense pride for every Indian. The dedication and hard work of our athletes is truly commendable. A big salute to the sports federations, coaches, support staff, and the vision of our…
— Abhinav A. Bindra OLY (@Abhinav_Bindra) October 6, 2023 " class="align-text-top noRightClick twitterSection" data="
">An unprecedented achievement for 🇮🇳! Assured of 100 medals at the Asian Games, it's a moment of immense pride for every Indian. The dedication and hard work of our athletes is truly commendable. A big salute to the sports federations, coaches, support staff, and the vision of our…
— Abhinav A. Bindra OLY (@Abhinav_Bindra) October 6, 2023An unprecedented achievement for 🇮🇳! Assured of 100 medals at the Asian Games, it's a moment of immense pride for every Indian. The dedication and hard work of our athletes is truly commendable. A big salute to the sports federations, coaches, support staff, and the vision of our…
— Abhinav A. Bindra OLY (@Abhinav_Bindra) October 6, 2023
ಇನ್ನುಳಿದಂತೆ 8 ಪದಕ ಗೆದ್ದರೆ ಭಾರತ ಪದಕಗಳ ಶತಕ ದಾಖಲಿಸುತ್ತದೆ. ಲೆಕ್ಕಾಚಾರದಂತೆ, ಏಷ್ಯನ್ ಗೇಮ್ಸ್ ಮುಕ್ತಾಯದ ಒಳಗೆ ಭಾರತ 100 ಪದಕಗಳನ್ನು ದಾಟಲಿದೆ. ಇನ್ನೂ ನಾಲ್ಕು ಚಿನ್ನದ ಪದಕ ಬರುವ ಭರವಸೆ ಇದೆ. ಇದೀಗ ಹಾಕಿ ಫೈನಲ್‌ನಲ್ಲಿ ಭಾರತ-ಜಪಾನ್ ಪೈಪೋಟಿ ನಡೆಯುತ್ತಿದೆ. ಈ ಗೇಮ್‌ನಲ್ಲಿ ಭಾರತ ಪ್ರಬಲ ಚಿನ್ನದ ಆಕಾಂಕ್ಷಿಯಾಗಿದೆ. ಇದಲ್ಲದೇ ಪುರುಷರ ಮತ್ತು ವನಿತೆಯರ ಕಬಡ್ಡಿ, ಪುರುಷರ ಕ್ರಿಕೆಟ್ನಲ್ಲೂ ಚಿನ್ನದ ಭರವಸೆ ಮೂಡಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ಶೂಟರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಶೂಟಿಂಗ್ ವಿಭಾಗದಲ್ಲೇ ಭಾರತೀಯರು 22 ಪದಕ ಗೆದ್ದಿದ್ದು, 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚು ಒಳಗೊಂಡಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಒಟ್ಟಾರೆ 29 ಪದಕ ಬಂದಿದ್ದು 6 ಚಿನ್ನ, 14 ಬೆಳ್ಳಿ ಮತ್ತು 9 ಕಂಚು ಇದರಲ್ಲಿದೆ. ಉಳಿದಂತೆ ಆರ್ಚರಿಯಲ್ಲಿ 3, ಸ್ಕ್ವಾಷ್ನಲ್ಲಿ 2, ಕ್ರಿಕೆಟ್, ಕುದುರೆ ಸವಾರಿ, ಟೆನಿಸ್ನಲ್ಲಿ ತಲಾ ಒಂದೊಂದರಂತೆ 21 ಚಿನ್ನ ಈಗಾಗಲೇ ಭಾರತದ ಪಾಲಾಗಿದೆ. ಹೀಗಾಗಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 2018ರಲ್ಲಿ ಭಾರತ ಕೇವಲ 16 ಚಿನ್ನ ಗೆದ್ದುಕೊಂಡಿತ್ತು. ಈ ಬಾರಿ 25ಕ್ಕೇರಿಕೆಯಾಗುವ ಸಾಧ್ಯತೆ ಇದೆ.
ಪದಕ ಭರವಸೆಯ ಪಂದ್ಯಗಳು: ಬಿಲ್ಲುಗಾರಿಕೆ: 3 - ಓಜಸ್ ಪ್ರವೀಣ್ ಡಿಯೋಟಾಲೆ (ಪುರುಷರ ವೈಯಕ್ತಿಕ ಸಂಯುಕ್ತ), ಅಭಿಷೇಕ್ ವರ್ಮಾ (ಪುರುಷರ ವೈಯಕ್ತಿಕ ಸಂಯುಕ್ತ), ಜ್ಯೋತಿ ಸುರೇಖಾ ವೆನ್ನಂ (ಮಹಿಳೆಯರ ವೈಯಕ್ತಿಕ ಸಂಯುಕ್ತ)
ಹಾಕಿ: 1 - ಪುರುಷರ ತಂಡ
ಕಬಡ್ಡಿ: 2- ಪುರುಷರ ಮತ್ತು ಮಹಿಳೆಯರ ತಂಡ
ಬ್ರಿಡ್ಜ್:1- ಪುರುಷರ ತಂಡ
ಬ್ಯಾಡ್ಮಿಂಟನ್: 1- ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್)
ಕ್ರಿಕೆಟ್: 1- ಪುರುಷರ ತಂಡ
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಬಿಲ್ಲು ಸ್ಪರ್ಧೆಯಲ್ಲಿ ಬೆಳ್ಳಿ; ಬ್ಯಾಡ್ಮಿಂಟನ್, ಕುಸ್ತಿ, ಕಿಕ್ ವಾಲಿಬಾಲ್ನಲ್ಲಿ ಕಂಚು