ದುಬೈ : ಮೂರು ಮಹಿಳೆಯರು ಸೇರಿದಂತೆ ಒಟ್ಟು 4 ಬಾಕ್ಸರ್ಗಳು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಸೇರುವ ಭಾರತಕ್ಕೆ ಒಟ್ಟು 7 ಪದಕ ಖಚಿತವಾಗಿದೆ.
ಪುರುಷರ 91ಕೆಜಿ ವಿಭಾಗದಲ್ಲಿ ಸಂಜೀತ್, ಮಹಿಳೆಯರ ವಿಭಾಗದಲ್ಲಿ ಸಾಕ್ಷಿ(54 ಕೆಜಿ), ಜಾಸ್ಮಿನ್(57ಕೆಜಿ) ಮತ್ತು ಒಲಿಂಪಿಕ್ ಬೌಂಡ್ ಸಿಮ್ರಾನ್ಜಿತ್ ಕೌರ್(60ಕೆಜಿ) ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕಂಚಿನ ಪಕದ ಖಚಿತಪಡಿಸಿದ್ದಾರೆ.
ಈಗಾಗಲೇ ಪುರುಷರ ವಿಭಾಗದಲ್ಲಿ ಶಿವ ಥಾಪಾ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದರು. ಬುಧವಾರ ಭಾರತದ ಒಲಿಂಪಿಕ್ ಬೌಂಡ್ ಬಾಕ್ಸರ್ಗಳಾದ ಅಮಿತ್ ಪಂಘಲ್(52ಕೆಜಿ), ವಿಕಾಶ್ ಕೃಷ್ಣನ್(69ಕೆಜಿ) ಮತ್ತು ಆಶಿಷ್ ಕುಮಾರ್(75ಕೆಜಿ) ಕಣಕ್ಕಿಳಿಯಲಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಮತ್ತು ಹಾಲಿ ಚಾಂಪಿಯನ್ ಪಂಗಲ್ ಮಂಗೋಲಿಯಾದ ಖಾರ್ಖು ಎಂಖ್‌ಮಂಡಖ್ ಅವರನ್ನು ಎದುರಿಸಲಿದ್ದಾರೆ.
ಏಷ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ ಕೃಷ್ಣನ್ ಇರಾನ್‌ನ ಮೊಸ್ಲೆಮ್ ಮಲಾಮಿರ್ ವಿರುದ್ಧ, ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಆಶಿಷ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕಜಕಸ್ತಾನ್‌ನ ಅಬಿಲ್ಖಾನ್ ಅಮಾಂಕುಲ್ ಅವರನ್ನು ಎದುರಿಸಲಿದ್ದಾರೆ.
ಇದನ್ನು ಓದಿ: ದ್ರಾವಿಡ್ ಸರ್ ಯಾವಾಗಲೂ ತಮ್ಮಂತೆ ಆಡಿ ಎಂದು ಒತ್ತಾಯಿಸುತ್ತಿರಲಿಲ್ಲ: ಪೃಥ್ವಿ ಶಾ