ETV Bharat / sports

2036ರ ಒಲಿಂಪಿಕ್ಸ್ ಆಯೋಜನೆಯ ಆಕಾಂಕ್ಷಿಗಳಲ್ಲಿ ಭಾರತವೂ ಸೇರಿದೆ: ಐಒಸಿ ಮುಖ್ಯಸ್ಥ - 2032ರ ಸಮ್ಮರ್​ ಗೇಮ್ಸ್

2036, 2040 ಮತ್ತು ನಂತರದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಆಯೋಜಿಸಲು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಆಕಾಂಕ್ಷೆ ಹೊಂದಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ಹೇಳಿದ್ದಾರೆ.

IOC chief
ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್
author img

By

Published : Aug 25, 2021, 9:36 AM IST

ನವದೆಹಲಿ: 2036 ಮತ್ತು ಆ ಬಳಿಕ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಆಯೋಜಿಸುವ ಆಕಾಂಕ್ಷೆ ಹೊಂದಿದ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬ್ಯಾಚ್ ಹೇಳಿದ್ದಾರೆ.

ಈಗಾಗಲೇ 2032ರ ಸಮ್ಮರ್​ ಗೇಮ್ಸ್ ಅ​ನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದಾದ ಬಳಿಕ 2036, 2040 ಮತ್ತು ನಂತರದಲ್ಲಿ ನಡೆಯಲಿರುವ ಕ್ರೀಡಾಕೂಟವನ್ನು ಆಯೋಜಿಸಲು ಇತರೆ ದೇಶಗಳು ಕಾತುರದಿಂದ ಕಾಯುತ್ತಿದೆ ಎಂದು ಅವರು ಹೇಳಿದರು.

ಇನ್ನು ಮಹತ್ವಾಕಾಂಕ್ಷಿ ಆತಿಥೇಯರಲ್ಲಿ ಭಾರತ, ಇಂಡೋನೇಷ್ಯಾ, ಜರ್ಮನಿ ಮತ್ತು ಕತಾರ್ ಸೇರಿವೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಕ್ರೀಡಾಕೂಟವನ್ನು ಆಯೋಜಿಸಲು ಸಾರ್ವಜನಿಕವಾಗಿ ಆಸಕ್ತಿಯನ್ನು ವ್ಯಕ್ತಪಡಿಸಿದ ರಾಷ್ಟ್ರಗಳಲ್ಲಿ ರಷ್ಯಾ ಒಳಗೊಂಡಿದೆ. ಆದರೆ ರಷ್ಯಾದ ಕ್ರೀಡಾಪಟುಗಳು ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿರುವುದು ಡೋಪಿಂಗ್​ ಪರೀಕ್ಷೆಯಲ್ಲಿ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಈ ಅವಕಾಶ ಕೈ ತಪ್ಪಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.